Flight: ವಿಮಾನದಲ್ಲಿ ಹೊಸ ಪ್ರಯೋಗ; ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ!! ಏನಿದೆ? ಏನಿರಲ್ಲ?
International news airline launches only adult section for international flight
Flight: ವಯಸ್ಕರೇ ಈ ಮಾಹಿತಿ ನಿಮಗಾಗಿ, ವಿಮಾನದಲ್ಲಿ ಹೊಸ ಪ್ರಯೋಗವಾಗಿದೆ. ಇನ್ನು ಮುಂದೆ ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ. ಹೌದು, ವಿಮಾನದಲ್ಲೂ ವಯಸ್ಕರ ವಿಭಾಗವನ್ನು ಪ್ರಾರಂಭ ಮಾಡುವ ಮೂಲಕ ಏರ್ಲೈನ್ ಸಂಸ್ಥೆಯೊಂದು (Airline company) ಪ್ರಯಾಣಿಕರಿಗೆ ಹೊಸ ಆಫರ್ (offer) ನೀಡುತ್ತಿದೆ. ಹಾಗಿದ್ರೆ ಏನಿದರ ಸಂಪೂರ್ಣ ವಿವರಣೆ? ಇಲ್ಲಿದೆ ನೋಡಿ.
ಏಕಾಂಗಿಯಾಗಿ ವಿಮಾನದಲ್ಲಿ (Flight) ಪ್ರಯಾಣಿಸುವ ವಯಸ್ಕರಿಗೆ ಮಕ್ಕಳು ಅಳುವ ಶಬ್ದ ಸೇರಿದಂತೆ ಇತರ ಕಿರಿಕಿರಿ, ಸಮಸ್ಯೆಗಳು ಉಂಟಾಗಬಾರದು. ಇಂತಹ ಅಡಚಣೆಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ವಯಸ್ಕರಿಗೆ ಮಾತ್ರ ಎಂಬ ಹೊಸ ವಿಭಾಗವನ್ನು ಏರ್ಲೈನ್ ಶುರು ಮಾಡಲು ಮುಂದಾಗಿದೆ.
ಟರ್ಕಿಶ್-ಡಚ್ ಲೀಷರ್ ಕೊರೆಂಡನ್ ಏರ್‌ಲೈನ್ಸ್ ಈ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆ್ಯಮ್ಸ್ಟರ್ಡ್ಯಾಂ ಹಾಗೂ ಕುರಾಕೊ ನಡುವೆ ಸಂಚರಿಸುವ ವಿಮಾದಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ.
ಮಕ್ಕಳು ಮುಕ್ತ ವಾತಾವರಣವನ್ನು ಬಯಸುವ 16 ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಈ ಯೋಜನೆ ಅನ್ವಯವಾಗಲಿದೆ. ಈ ಯೋಜನೆಯ ಅಡಿಯಲ್ಲಿ ಕೊರೆಂಡನ್ ಏರ್ಬಸ್-350ಯಲ್ಲಿ ಕೆಲವು ಆಸನಗಳನ್ನು ಇದಕ್ಕಾಗಿ ಮೀಸಲಿಡಲಾಗುತ್ತಿದೆ. ಇನ್ನು ಇದಕ್ಕಾಗಿ ವಿಮಾನದಲ್ಲಿ ಪ್ರತ್ಯೇಕವಾದ ಜೋನ್ ಒಂದನ್ನು ಸಿದ್ದಪಡಿಸಲಾಗುತ್ತಿದೆ. ಈ ಜೋನ್ನಲ್ಲಿ ಪ್ರಯಾಣಿಸುವವರು ಹೆಚ್ಚುವರಿ ಶುಲ್ಕವನ್ನು ಭರಿಸಬೇಕು ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Job Alert: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ; ಕಂದಾಯ ಇಲಾಖೆಯಲ್ಲಿ 1,700 ‘ ಗ್ರಾಮಕರಣಿಕರ ‘ ಹುದ್ದೆ!