ಮಂಗಳೂರು: ಖಾಸಗಿ ಬಸ್ ನಿರ್ವಾಹಕ ನಿಧನ ಹಿನ್ನೆಲೆ, ಎಲ್ಲಾ ಖಾಸಗಿ ಬಸ್ ಗೆ ಡೋರ್ ಕಡ್ಡಾಯ! ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಆದೇಶ!
ಮಂಗಳೂರಿನಲ್ಲಿ ಖಾಸಗಿ ಬಸ್ ಕಂಡಕ್ಟರ್ ಓರ್ವ ಫುಟ್ ಬೋರ್ಡ್ ನಲ್ಲಿ ನಿಂತುಕೊಂಡಿದ್ದು, ಟರ್ನ್ ಸಂದರ್ಭದಲ್ಲಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆಯೊಂದು ನಡೆದಿತ್ತು. ಹಾಗಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರು ಹೊಸ ಆದೇಶ ಹೊರಡಿಸಿದ್ದಾರೆ.
ಇನ್ನು ಮುಂದೆ ಎಲ್ಲಾ ಬಸ್ ಗಳಿಗೆ ಡೋರ್ ಕಡ್ಡಾಯವಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಈ ಘಟನೆ ನಂತೂರಿನಲ್ಲಿ ನಡೆದಿದ್ದು, ಕಂಡಕ್ಟರ್ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಕಮಿಷನರ್ ಈ ಆದೇಶ ಹೊರಡಿಸಿದ್ದಾರೆ. ಹಾಗೆನೇ ಕಂಡಕ್ಟರ್ ಸೇರಿ ಯಾರೂ ಕೂಡಾ ಫುಟ್ ಬೋರ್ಡ್ ನಲ್ಲಿ ನಿಲ್ಲುವಂತಿಲ್ಲ, ಸಮಯ ಫಾಲೋ ಮಾಡಬಾರದು, ಸೇಫ್ಟಿ ಮುಖ್ಯ ಎಂಬ ಮಾತನ್ನು ಹೇಳಿದ್ದಾರೆ.
ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದೆ. ಮೃತ ಹೊಂದಿದ ಬಸ್ ನಿರ್ವಾಹಕ ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿ. ಹೆಸರು ಈರಯ್ಯ. ವಯಸ್ಸು 23 ವರ್ಷ. ಬಸ್ಸಿನಿಂದ ಎಸೆಯಲ್ಪಟ್ಟ ಕಂಡಕ್ಟರ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ, ತಲೆಗೆ ಪೆಟ್ಟು ಬಿದ್ದ ಕಾರಣ ರಾತ್ರಿ ಮರಣ ಹೊಂದಿದ.
ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.