ಮಹಿಳೆಯ ಜತೆ ಸಚಿವರ ಆಕ್ಷೇಪಾರ್ಹ ವಿಡಿಯೋ , ಫೋಟೋ ವೈರಲ್- ದೂರು

 

 

ಪಣಜಿ : ಮಹಿಳೆಯೊಬ್ಬಳ ಜತೆ ಗೋವಾ ಸಚಿವ ಮೌವಿನ್ ಗೊಡಿನ್ಹೋ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವ ಪೋಟೋ, ವಿಡಿಯೋ ವೈರಲ್ ಆಗಿದೆ.

ಗೋವಾದ ಗ್ರಾಮವೊಂದರ ಮಹಿಳಾ ಉಪ ಸರಪಂಚ್‌ ಜತೆಗಿರುವ ಅಕ್ಷೇಪಾರ್ಹ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಕುರಿತು ಸಚಿವರ ಕಚೇರಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.ಗೋವಾ ಸಚಿವ ಮೌವಿನ್ ಗೊಡಿನ್ಹೋ ಅವರು ರಾಜ್ಯದ ಗ್ರಾಮವೊಂದರ ಮಹಿಳಾ ಉಪ ಸರಪಂಚ್‌ ಜತೆಗಿರುವ ಫೋಟೋಗಳ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಚಿವರ ಆಪ್ತ ಕಾರ್ಯದರ್ಶಿ ನೇಹಾಲ್ ದಾಮೋದರ್ ಕೇಣಿ ವಾಸ್ಕೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಾಬೋಲಿಮ್ ಕ್ಷೇತ್ರದ ಗ್ರಾಮವೊಂದರ ಮಹಿಳಾ ಉಪ ಸರಪಂಚ್ ಜೊತೆಗಿನ ಗೊಡಿನ್ಹೋ ಅವರ ಫೋಟೋಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮತ್ತು ಸುಳ್ಳು ಸಂದೇಶವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave A Reply

Your email address will not be published.