KMF Recruitment 2023: ಉದ್ಯೋಗಾಂಕ್ಷಿಗಳೇ ಗಮನಿಸಿ, KMF ನಲ್ಲಿ ಭರ್ಜರಿ ಉದ್ಯೋಗಾವಕಾಶ: ಮಾಸಿಕ ವೇತನ 97,000 ! ಇಂದೇ ಅರ್ಜಿ ಸಲ್ಲಿಸಿ!

Job news kmf belgavi district cooperative milk producer societies union limited job KMF BEMUL recruitment 2023

KMF BEMUL Recruitment 2023:ಉದ್ಯೋಗಾಂಕ್ಷಿಗಳಿಗೆ (Job Seekers)ಖುಷಿಯ ಸುದ್ದಿ!! ಇಲ್ಲಿದೆ ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸುವರ್ಣ ಅವಕಾಶ!! ಕೆಎಂಎಫ್ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಡ ಲಿಮಿಟೆಡ್ (KMF Belagavi District Co-operative Milk Producers Societies Union Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಯ ಮಾಹಿತಿ:
ಕೆಎಂಎಫ್ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF BEMUL Recruitment 2023)

ಹುದ್ದೆಗಳ ಸಂಖ್ಯೆ: 46
ಉದ್ಯೋಗ ಸ್ಥಳ: ಬೆಳಗಾವಿ
ಹುದ್ದೆಯ ಹೆಸರು: ವಿಸ್ತರಣಾ ಅಧಿಕಾರಿ, ಕಿರಿಯ ,ತಂತ್ರಜ್ಞರ
ಅಧಿಕೃತ ವೆಬ್‌ಸೈಟ್: bemul.in

ಹುದ್ದೆಗಳ ವಿಭಾಗವಾರು ಮಾಹಿತಿ ಹೀಗಿದೆ:
ಸಹಾಯಕ ವ್ಯವಸ್ಥಾಪಕ – 3 ಹುದ್ದೆಗಳು
ತಾಂತ್ರಿಕ ಅಧಿಕಾರಿ- 7 ಹುದ್ದೆಗಳು
ವಿಸ್ತರಣಾ ಅಧಿಕಾರಿ ಗ್ರೇಡ್-III- 10 ಹುದ್ದೆಗಳು
ಆಡಳಿತ ಸಹಾಯಕ ಗ್ರೇಡ್-II- 5 ಹುದ್ದೆಗಳು
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II- 5 ಹುದ್ದೆಗಳು
ಮಾರ್ಕೆಟಿಂಗ್ ಸಹಾಯಕ ಗ್ರೇಡ್-II- 2 ಹುದ್ದೆಗಳು
ರಸಾಯನಶಾಸ್ತ್ರಜ್ಞ ಗ್ರೇಡ್-II- 4 ಹುದ್ದೆಗಳು
ಜೂನಿಯರ್ ಸಿಸ್ಟಮ್ ಆಪರೇಟರ್- 1 ಹುದ್ದೆ
ಕಿರಿಯ ತಂತ್ರಜ್ಞರು- 9 ಹುದ್ದೆಗಳು

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 28/08/2023 ಆರಂಭಿಕ ದಿನವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26, 2023 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಅಧಿಕೃತ ವೆಬ್‌ಸೈಟ್ bemul.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ವೇತನ:
ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಮಾಸಿಕ ವೇತನ ₹ 52,650- 97,100.
ಟೆಕ್ನಿಕಲ್ ಆಫೀಸರ್ ಹುದ್ದೆಗೆ ಮಾಸಿಕ ವೇತನ ₹ 43,100-83,900 .
ಎಕ್ಸ್ಟೆನ್ಶನ್ ಆಫೀಸರ್ ಗ್ರೇಡ್-III ಹುದ್ದೆಗೆ ಮಾಸಿಕ ವೇತನ ಗಮನಿಸಿದರೆ, ₹ 33,450-62, 600.
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಗ್ರೇಡ್-II ಹುದ್ದೆಗೆ ಮಾಸಿಕ ವೇತನ ₹ 27,650-52,650.
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II ಹುದ್ದೆಗೆ ಮಾಸಿಕ ವೇತನ ₹ 27,650-52,650.
ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್-II ಹುದ್ದೆಗೆ ಮಾಸಿಕ ವೇತನ ₹ 27,650-52,650.
ಕೆಮಿಸ್ಟ್ ಗ್ರೇಡ್-II- ಹುದ್ದೆಗೆ ಮಾಸಿಕ ವೇತನ ₹ 27,650-52,650.
ಜೂನಿಯರ್ ಸಿಸ್ಟಂ ಆಪರೇಟರ್ ಹುದ್ದೆಗೆ ಮಾಸಿಕ ವೇತನ ₹ 27,650-52,650.
ಜೂನಿಯರ್ ಟೆಕ್ನಿಷಿಯನ್ಸ್ ಹುದ್ದೆಗೆ ಮಾಸಿಕ ವೇತನ₹ 21,400-42,000.

ಆಸಕ್ತ ಅಭ್ಯರ್ಥಿಗಳು ಸೆಪ್ಟಂಬರ್ 26 2023ರ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: ಜೀವ ಹೋದರೂ ಅಂತ್ಯಕ್ರಿಯೆಗೆ ಬಾರದ ಮಕ್ಕಳು: ಶವ ಬಿಸಾಕಿ ಎಂದ ಮಗಳು, ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಪೊಲೀಸರು!

Leave A Reply

Your email address will not be published.