Kitchen Tips: ಪಾತ್ರೆ ತೊಳೆವ ಸೋಪನ್ನು ಈ ರೀತಿ ಬಳಸಿದರೆ ಮುಂದೆ ಸೈಡ್ ಇಫೆಕ್ಟ್ ಗ್ಯಾರಂಟಿ!!

Kitchen tips side effects of using dish washing soap in this way

Kitchen Tips : ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸ್ನಾನ ಮಾಡಲು, ಪಾತ್ರೆ (Vessel) ತೊಳೆಯಲು, ಪ್ರಾಣಿಗಳಿಗೆ ಸ್ನಾನ ಮಾಡಿಸಲು, ವಾಹನ ಅಥವಾ ಗ್ಲಾಸ್ ಗಳನ್ನು ತೊಳೆಯಲು, ಮುಂತಾದವುಗಳಿಗಾಗಿ ಅನೇಕ ರೀತಿಯ ಸೋಪು (Soap), ಶಾಂಪೂಗಳು ಸಿಗುತ್ತವೆ. ಇಂತಹ ಲಿಕ್ವಿಡ್, ಸೋಪು ಅಥವಾ ಶಾಂಪೂಗಳನ್ನು ನಾವು ನಮಗೆ ಬೇಕಾದ ಹಾಗೆ ಎಲ್ಲೆಂದರಲ್ಲಿ ಬಳಕೆ ಮಾಡುತ್ತೇವೆ. ಹೀಗೆ ಯಾವುದೋ ಉತ್ಪನ್ನವನ್ನು ಇನ್ಯಾವುದೋ ಉಪಯೋಗಕ್ಕೆ ಬಳಸಿಕೊಳ್ಳುವುದರಿಂದ ಅನೇಕ ರೀತಿಯ ಸೈಡ್ ಇಫೆಕ್ಟ್ ಆಗುತ್ತೆ ಅನ್ನುವುದು ನಿಮಗೆ ಗೊತ್ತಿದೆಯೇ (kitchen tips).

ಹೌದು, ಹಿಂದಿನ ಕಾಲದಲ್ಲಿ ಪಾತ್ರೆ ತೊಳೆಯಲು, ಅಥವಾ ಇನ್ನಿತರ ವಸ್ತುಗಳ ಸ್ವಚ್ಛತೆಗೆ ಬೂದಿ, ಅಂಟುವಾಳಕಾಯಿ ಅಥವಾ ಸೀಗೇಕಾಯಿಗಳನ್ನು ಬಳಸುತ್ತಿದ್ದರು. ಈಗಿನ ಸ್ಕೃಬ್ಬರ್ ಬದಲಿಗೆ ಹಿಂದಿನ ಕಾಲದಲ್ಲಿ ತೆಂಗಿನ ಗುಂಜುಗಳು ಇರುತ್ತಿದ್ದವು. ಕಂಚು ಹಿತ್ತಾಳೆ ಮುಂತಾದ ಪಾತ್ರೆಗಳನ್ನು ತೊಳೆಯಲು ಹುಣಸೆಹಣ್ಣು ನಿಂಬೆಹಣ್ಣು ಮುಂತಾದ ಹುಳಿ ಹಣ್ಣುಗಳನ್ನು ಉಪಯೋಗಿಸುತ್ತಿದ್ದರು. ಇವುಗಳಿಂದ ಪಾತ್ರೆಗಳನ್ನು ತೊಳೆಯುವುದರಿಂದ ಪಾತ್ರೆಗಳು ಸ್ವಚ್ಛವಾಗುತ್ತಿದ್ದವು ಮತ್ತು ಪಾತ್ರೆಯ ಹೊಳಪು ಕೂಡ ಮಾಸುತ್ತಿರಲಿಲ್ಲ. ಹೆಚ್ಚಿನದಾಗಿ ಇದರಿಂದ ಯಾವುದೇ ರೀತಿಯ ಸೈಡ್ ಇಫೆಕ್ಟ್ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಅವುಗಳ ಬದಲು ಅನೇಕ ರೀತಿಯ ಡಿಶ್ ವಾಶ್ ಗಳು ಬಂದಿವೆ.

ಮುಖ್ಯವಾಗಿ ಯಾವುದೋ ಒಂದು ಪರಿಮಳಯುಕ್ತ ಲಿಕ್ವಿಡ್ (Liquid) ಅನ್ನು ಮನೆಯಲ್ಲಿ ಇಟ್ಟುಕೊಂಡು, ಪಾತ್ರೆ ತೊಳೆಯುವ ಸೊಪನ್ನೇ ಹಲವು ಕೆಲಸಗಳಿಗೆ ಬಳಸಿಕೊಳ್ಳುವ ಪದ್ಧತಿ ತಪ್ಪು. ಇದರಿಂದ ಅನೇಕ ರೀತಿಯ ನಷ್ಟಗಳು ಉಂಟಾಗುತ್ತದೆ. ಅಂತಹ ನಷ್ಟಗಳು ಯಾವುದೆಂದು ನೀವು ತಿಳಿಯಲೇ ಬೇಕು .

ಮುಖ್ಯವಾಗಿ ನೆಲ ಒರೆಸಲು ಕೂಡ ಪಾತ್ರೆ ತೊಳೆಯುವ ಸೋಪನ್ನು ಬಳಸುವುದು ಒಳ್ಳೆಯದಲ್ಲ. ಇದರಿಂದ ನೀವು ನೆಲಕ್ಕೆ ಹಾಕಿರುವ ಟೈಲ್ಸ್ ಹಾಳಾಗುತ್ತದೆ. ನಿಮ್ಮ ಮನೆಯಲ್ಲಿ ವುಡನ್ ಫ್ಲೋರಿಂಗ್ ಇರುವುದಾದರೆ ಖಂಡಿತವಾಗಿಯೂ ಪಾತ್ರೆ ತೊಳೆಯುವ ಸೋಪನ್ನು ಬಳಸಬೇಡಿ.

ಕೆಲವರು ಮನೆಯಲ್ಲಿರುವ ಪಾತ್ರೆ ತೊಳೆಯುವ ಸೋಪು ಅಥವಾ ಶಾಂಪೂವನ್ನು ಬಳಸಿ ಕಾರನ್ನು ಸ್ವಚ್ಛಗೊಳಿಸುತ್ತಾರೆ. ಪಾತ್ರೆ ತೊಳೆಯುವ ಲಿಕ್ವಿಡ್ ಅಥವಾ ಸೋಪಿನಲ್ಲಿರುವ ಕೆಮಿಕಲ್ ನಿಂದ ಕಾರಿನ ಬಣ್ಣ ಹಾಳಾಗುತ್ತದೆ ಅಥವಾ ನಿಮ್ಮ ಕಾರಿನ ಬಣ್ಣ ಕೊಂಚ ತಿಳಿಯಾಗಬಹುದು. ಹಾಗಾಗಿ ಕಾರನ್ನು ತೊಳೆಯಲು ಯಾವಾಗಲೂ ಕೆಮಿಕಲ್ ಫ್ರೀ ಹೇರ್ ಶಾಂಪೂಗಳನ್ನು ಅಥವಾ ಗಾಡಿಗಳನ್ನು ತೊಳೆಯುವ ಲಿಕ್ವಿಡ್ ಗಳನ್ನೇ ಬಳಸಬೇಕು. ಇದರಿಂದ ಕಾರಿನ ಬಣ್ಣ ಮಾಸುವುದಿಲ್ಲ.

ನೀವು ಅಡುಗೆ ಮನೆಯಲ್ಲಿ ಬಳಸುವ ಪಾತ್ರೆತೊಳೆಯುವ ಸೋಪು ಕೂಡ ಎಲ್ಲ ಪಾತ್ರೆಗಳಿಗೂ ಸೂಕ್ತವಾಗಿರುವುದಿಲ್ಲ. ಇದರಿಂದ ಪಾತ್ರೆಯ ಮೇಲೆ ನೇರ ಪರಿಣಾಮನೀವು ಅಡುಗೆ ಮನೆಯಲ್ಲಿ ಬಳಸುವ ಪಾತ್ರೆತೊಳೆಯುವ ಸೋಪು ಕೂಡ ಎಲ್ಲ ಪಾತ್ರೆಗಳಿಗೂ ಸೂಕ್ತವಾಗಿರುವುದಿಲ್ಲ. ಇದರಿಂದ ಪಾತ್ರೆಯ ಮೇಲೆ ನೇರ ಪರಿಣಾಮ ಬೀರಬಹುದು. ಉದಾಹರಣೆಗೆ ಎರಕಹೊಯ್ದ ಕಬ್ಬಿಣದಿಂದ ಮಾಡಿದ ಅಥವಾ ನಾನ್ ಸ್ಟಿಕ್ ಪಾತ್ರೆಗಳನ್ನು ನೀರಿಗೆ ಉಪ್ಪು ಹಾಕಿ ತೊಳೆಯಬೇಕು ಅದನ್ನು ನೀವು ಸಾಮಾನ್ಯ ಪಾತ್ರೆ ತೊಳೆಯುವ ಸೋಪಿನಿಂದ ತೊಳೆದರೆ ಅವು ಬಹಳ ಬೇಗ ಹಾಳಾಗುತ್ತವೆ.

ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳನ್ನು ಕೂಡ ಪಾತ್ರೆ ತೊಳೆಯುವ ಸೋಪಿನಿಂದ ತೊಳೆಯಬಾರದು. ಅದರಿಂದ ಪಾತ್ರೆಗಳು ಸವೆದುಹೋಗುತ್ತದೆ ಮತ್ತು ಅವುಗಳ ಮೇಲೆ ಕಲೆಗಳು ಹಾಗೆಯೇ ಉಳಿಯಬಹುದು.

ಕೆಮಿಕಲ್ ಮಿಶ್ರಿತ ಪ್ರೊಡಕ್ಟ್ ಗಳಿಂದ ನಮ್ಮ ಚರ್ಮ ಹೇಗೆ ಹಾನಿಗೊಳಗಾಗುತ್ತದೆಯೋ ಹಾಗೆ ಚರ್ಮದಿಂದ ತಯಾರಿಸಿದ ವಸ್ತುಗಳು ಕೂಡ ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಚರ್ಮದ ಬೂಟು, ಪರ್ಸ್, ಪೀಠೋಪಕರಣಗಳು ಮತ್ತು ಕಾರಿನ ಸೀಟ್ ಗಳನ್ನು ಪಾತ್ರೆ ತೊಳೆಯುವ ಸೋಪುಗಳಿಂದ ತೊಳೆಯಲೇ ಬಾರದು. ಅವುಗಳು ತಮ್ಮ ಮೃದುತ್ವವನ್ನು ಕಳೆದುಕೊಂಡು ಬಹಳ ಬೇಗ ಹರಿಯುವ ಸಾಧ್ಯತೆ ಇರುತ್ತದೆ.

ಇನ್ನು ಬಟ್ಟೆಗಳನ್ನು ಕೂಡ ಬಟ್ಟೆ ತೊಳೆಯುವ ಸೋಪು ಅಥವಾ ಪೌಡರ್ ಗಳಿಂದಲೇ ತೊಳೆಯಬೇಕು. ಪಾತ್ರೆ ತೊಳೆಯುವ ಸೋಪನ್ನು ಬಟ್ಟೆ ತೊಳೆಯಲು ಬಳಸಿದರೆ ಬಟ್ಟೆಯ ಬಣ್ಣ ಮಾಸುತ್ತದೆ ಮತ್ತು ಬಟ್ಟೆ ಬಹಳ ಬೇಗ ಹಾಳಾಗುತ್ತದೆ.

ಒಟ್ಟಿನಲ್ಲಿ ಪಾತ್ರೆ ತೊಳೆಯುವ ಡಿಶ್ ವಾಶ್ ಅಥವಾ ಸೋಪನ್ನು ಇತರೆ ಉತ್ಪನ್ನದ ಸ್ವಚ್ಛತೆಗೆ ಬಳಸದಿರುವುದು ಉತ್ತಮ.

ಇದನ್ನೂ ಓದಿ: Intresting Facts: ಈ ಬಣ್ಣದ ಬಟ್ಟೆಗಳನ್ನು ಧರಿಸಲೇಬೇಡಿ ; ಇಲ್ಲಾಂದ್ರೆ ನೀವು ಕಡುಬಡವರಾಗುತ್ತೀರಾ !

Leave A Reply

Your email address will not be published.