Mangalore: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಮಂಗಳೂರಿನಲ್ಲಿ S.C.D.C.C ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಸಲು 20.09.23ಕೊನೆಯ ದಿನ!

Bank job news Mangalore news S.C.D.C.C bank recruitment 2023 complete details in kannada

Mangalore: ಮಂಗಳೂರಿನಲ್ಲಿ (Mangalore)ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ.ನೀವೇನಾದರೂ ಬ್ಯಾಂಕ್ ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಈ ಮಾಹಿತಿ ತಿಳಿದಿರುವುದು ಒಳ್ಳೆಯದು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನಿ., “ಉತ್ಕೃಷ್ಠ ಸಹಕಾರಿ ಸೌಧ”, ಕೊಡಿಯಾಲ್‌ ಬೈಲ್, ಮಂಗಳೂರು, ಈ ಬ್ಯಾಂಕಿನಲ್ಲಿ ಪ್ರಸ್ತುತ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಯ ವಿವರ – ಖಾಲಿ ಹುದ್ದೆಗಳು
ಕಂಪ್ಯೂಟರ್ ಪ್ರೋಗ್ರಾಮರ್ – 2.
ದ್ವಿತೀಯ ದರ್ಜೆ ಗುಮಾಸ್ತರು- 123
ಬ್ಯಾಂಕಿನ ವೆಬ್ ಸೈಟ್www.scdccbank.com

ದ್ವಿತೀಯ ದರ್ಜೆ ಗುಮಾಸ್ತರು ಹುದ್ದೆಗೆ ಮೀಸಲಾತಿ ಇರಲಿದ್ದು, ಹೆಚ್ಚಿನ ಮಾಹಿತಿಗೆ ಕೆಳಕಂಡ ನೇಮಕಾತಿ ಪ್ರಕಟಣೆ ಮೂಲಕ ವಿವರಗಳನ್ನು ಗಮನಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಫಾರಂ ಹಾಗೂ ಇತರ ವಿವರಗಳನ್ನು ಬ್ಯಾಂಕಿನ ವೆಬ್ ಸೈಟ್ www.scdccbank.com ಭೇಟಿ ನೀಡಿ ಪರಿಶೀಲನೆ ನಡೆಸಿ ಪಡೆದುಕೊಳ್ಳಿ. ಅರ್ಹ ಅಭ್ಯರ್ಥಿಗಳು ಮೊದಲಿಗೆ, ಈ ಬ್ಯಾಂಕಿನ ಅಂತರ್ಜಾಲ (Website: www.scdccbank.com) ದಲ್ಲಿ ಲಭ್ಯವಾಗುವ ಅರ್ಜಿ ಫಾರಂನ್ನು ಭರ್ತಿ ಮಾಡಿ, ಆನ್ಲೈನ್ (online) ಮೂಲಕ ಸಲ್ಲಿಸಬೇಕು.

ಆನಂತರ,ಅರ್ಜಿಯ ಮುದ್ರಿತ ಪ್ರತಿ (printout) ಯನ್ನು ತೆಗೆದು, ಅದರಲ್ಲಿ ಸಹಿ ಹಾಕಿ, ಇತ್ತೀಚಿನ ಭಾವಚಿತ್ರ ಲಗತ್ತಿಸಿ, ಅರ್ಜಿಯಲ್ಲಿ ತಿಳಿಸಿರುವ ಎಲ್ಲ ಅವಶ್ಯಕ ಪ್ರಮಾಣ ಪತ್ರಗಳ ಪ್ರತಿಗಳನ್ನೂ ದಿನಾಂಕ 20-09-2023ರ ಒಳಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಕೊಡಿಯಾಲ್ ಬೈಲು, ಮಂಗಳೂರು – 575003 ಇವರಿಗೆ ತಲುಪುವ ಹಾಗೆ ಕಳುಹಿಸಬೇಕು. ಈಗಾಗಲೇ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ಸಂಸ್ಥೆಯ ಮೂಲಕ ಸಲ್ಲಿಸಬೇಕು.

ಅಭ್ಯರ್ಥಿಗಳು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಅಪೂರ್ಣ ಅರ್ಜಿಗಳನ್ನು ಹಾಗೂ ಕೊನೆಯ ದಿನಾಂಕದ ಪರಿಗಣಿಸಲಾಗುವುದಿಲ್ಲ. ಅರ್ಜಿ ಶುಲ್ಕ ಪಾವತಿಸದೆ ಇದ್ದಲ್ಲಿ ಆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆದರೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.

Mangalore

ಇದನ್ನೂ ಓದಿ: Madyapradesh:ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸರಕಾರ! ಇನ್ನು ಮುಂದೆ ಸಿಗಲಿದೆ 450 ರೂ. ಗೆ LPG ಸಿಲಿಂಡರ್!

Leave A Reply

Your email address will not be published.