Belthangady chalo: ಕಾಮಾಂದರಿಗೆ ಗಲ್ಲು ಶಿಕ್ಷೆಗೆ ಆಗಬೇಕು, ನೀವ್ ಎಷ್ಟೇ ಸ್ಟೇ ತಂದರೂ ನಾವು ಅದನ್ನು ಮುರಿದು ಮುಂದೆ ಹೋಗ್ತೇವೆ – ಮಹೇಶ್ ಶೆಟ್ಟಿ ತಿಮರೋಡಿ
Dharmastala Sowjanya murder and rape case news Mahesh Thimarodi statement at Belthangady chalo programme
Belthangady chalo : ಕಾಮಾಂದರಿಗೆ ಗಲ್ಲು ಶಿಕ್ಷೆಗೆ ಆಗಬೇಕು, ನೀವ್ ಎಷ್ಟೇ ಸ್ಟೇ ತಂದರೂ ನಾವು ಅದನ್ನು ಮುರಿದು ಮುಂದೆ ಹೋಗ್ತೇವೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಅವರು ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಹತ್ಯೆ ಪ್ರಕರಣದ ಕುರಿತಾಗಿ ಮರು ತನಿಖೆ ಹಾಗೂ ಎಸ್.ಐ.ಟಿ.ತನಿಖೆಗೆ ಒತ್ತಾಯಿಸಿ ನಡೆದ ಬೆಳ್ತಂಗಡಿ ಚಲೋ(Belthangady chalo) ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಶಕ್ತಿಗಳಿಂದ ಈ ಪ್ರಕರಣ ಮುಚ್ಚಲು ಕಾರಣ. ಪೊಲೀಸ್, ತಹಶೀಲ್ದಾರ್ ಅಥವಾ ಡಿಸಿ ಅವರನ್ನು ಸ್ವಂತಕ್ಕೆ ಕೆಲಸ ಮಾಡಲು ಬಿಡಲ್ಲ. ಇಲ್ಲಿ ರಾಜಕೀಯ ನಾಯಕರು ಇದನ್ನು ಮುಚ್ಚಲು ಕಾರಣ ಆದವರು. ಇದೀಗ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದೆ. ಕಾಮಂದರಿಗೆ ಗಲ್ಲು ಶಿಕ್ಷೆ ಆಗಬೇಕು. ಸೌಜನ್ಯಾಗೆ ನ್ಯಾಯ ಕೊಡದೆ ಹೋದರೆ ಎರಡೂ ಪಕ್ಷಗಳೂ ಸರ್ವನಾಶ ಆಗುತ್ತದೆ. ನೀವ್ ಎಷ್ಟೇ ಸ್ಟೇ ತಂದರೂ ನಾವು ಅದನ್ನು ಮುರಿದು ಮುಂದೆ ಹೋಗ್ತೇವೆ ಎಂದು ತಿಮರೋಡಿ ಹೇಳಿದರು.
ಈ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಹೋರಾಟಕ್ಕೂ ತೊಂದರೆ ಕೊಡೋದು. ಇವತ್ತು ದಂಡಂ ದಶಗುಣಂ ಆಗುತ್ತದೆ. ಪೋಲೀಸರು ಮಾಡಿದ ತಪ್ಪಿಗೆ ನಾವು ಇವತ್ತು ಸುಡುಬಿಸಿಲಲ್ಲಿ ನಿಲ್ಬೇಕಾಗಿದೆ ಎಂದರು.
ವಿಚಾರವಾದಿ ನರೇಂದ್ರ ನಾಯಕ್ ಮಾತನಾಡಿ, ಜೈನ ಬುದ್ಧ ಭಾರತದಲ್ಲಿ ನಾಸ್ತಿಕ ಧರ್ಮಗಳು. ಆದ್ರೆ ಅವರು ಅದನ್ನು ಹೇಗೆ ನಡೆಸ್ತಾರೆ ? ದೇವರನ್ನು ವಶದಲ್ಲಿ ಇಟ್ಟುಕೊಳ್ಳಲಾಗಿದೆ ಎಂದರು.
ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ, ಎಲ್ಲಾ ಧರ್ಮಗಳ ಧರ್ಮಾಧಿಕಾರಿಗಳು ಹೋರಾಟಕ್ಕೆ ಕೈಜೋಡಿಸಬೇಕು. ಎಲ್ಲಾ ವಿದ್ಯಾರ್ಥಿಗಳು ಕೂಡ ಎದ್ದು ನಿಲ್ಲಬೇಕು. ಸೌಜನ್ಯಳಿಗೆ ಅನ್ಯಾಯ ಮಾಡಬೇಡಿ. ನಾವು ನ್ಯಾಯ ಸಿಗುವ ತನಕ ವಿರಮಿಸಲ್ಲ. ಅತ್ಯಾಚಾರಿಗಳನ್ನು ಹೊರಗೆ ಹಾಕಿ. ಮಾನ್ಯ ಮುಖ್ಯಮಂತ್ರಿಗಳೇ ನೀವು ಪತ್ರ ಬರಿಬೇಡಿ. ಕೇಸಿನಲ್ಲಿ ನಿಮ್ಮ ಅಧಿಕಾರ ತೋರಿಸಿ. ಮುಖ್ಯಮಂತ್ರಿಗಳೇ, ಊರಿಂದ ಊರಿಗೆ ಜನರು ಬಿಸಿಲಲ್ಲಿ ಹೋರಾಡುತ್ತಿದ್ದಾರೆ. ಆದಷ್ಟು ಬೇಗ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡಿ ಎಂದಿದ್ದಾರೆ.
ಇದನ್ನೂ ಓದಿ: ನಾನು ನಾಳೆ ಮತ್ತೆ ಧರ್ಮಸ್ಥಳ ದೇವಸ್ಥಾನಕ್ಕೆ ಹೋಗುವೆ ಯಾರು ತಡೆಯುತ್ತಾರೆಯೋ ನೋಡೋಣಾ! ಸೌಜನ್ಯಾ ಕುಸುಮಾವತಿ ಹೇಳಿಕೆ