ಸೌಜನ್ಯ ಹೋರಾಟ ವಿಚಾರ : ಈಗ ಶುರುವಾಗಿದೆ ಮಾಧ್ಯಮ ಬಾಯ್ಕಾಟ್ ! ಏನಿದು ಹೊಸ ಟ್ರೆಂಡ್ ?! ನೀವು ಓದಲೇ ಬೇಕಾದ ವಿಚಾರ !!!
Dharmastala soujanya rape and murder case Sowjanya protest issue now media boycott has started
Soujanya murder case :ಸೌಜನ್ಯ ಹತ್ಯಾ ಪ್ರಕರಣದಲ್ಲಿ(Soujanya murder case) ಹೊಸ ಬೆಳವಣಿಗೆಗಳು ನಡೆದಿವೆ. ಚಿತ್ರರಂಗಕ್ಕೆ ಇದ್ದ ಬಾಯ್ಕಾಟ್ ಇದೀಗ ಮಾಧ್ಯಮ ರಂಗಕ್ಕೆ ಬಂದು ಇಳಿದಿದೆ. ಹೌದು ಕರ್ನಾಟಕದ ಕೆಲ ಮಾಧ್ಯಮಗಳನ್ನು ಓದದಂತೆ ಜನರಲ್ಲಿ ಬೇಡಿಕೆ ಇಡಲಾಗುತ್ತಿದೆ. ಇದು ಕರ್ನಾಟಕ ಮಾಧ್ಯಮ ಲೋಕದಲ್ಲಿ ನಡೆದ ಹೊಸ ಬೆಳವಣಿಗೆ. ಮಾಧ್ಯಮಗಳು ವೃತ್ತಿ ಧರ್ಮ ಪಾಲನೆ ಮಾಡುತ್ತಿಲ್ಲ ಎನ್ನುವ ಗುರುತರ ಆರೋಪವನ್ನು ಮಾಧ್ಯಮದ ಮೇಲೆ ಮಾಡಲಾಗಿದೆ. ಅದರ ಬಗ್ಗೆ ಒಂದು ರಿಪೋರ್ಟ್.
ಕರಾವಳಿ ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ರಾಜ್ಯದಾದ್ಯಂತ ಎದ್ದು ನಿಂತ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮತ್ತು ಅದರ ಮರು ತನಿಖೆಗೆ ಒತ್ತಾಯಿಸಿ ಧರಣಿ ಪಾದಯಾತ್ರೆ ಪ್ರತಿಭಟನೆ ಸಮಾವೇಶಗಳು ಹಲವು ಕಡೆಗಳಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದೇ ದಿನದಲ್ಲಿ ಹಲವು ಊರುಗಳಲ್ಲಿ ದೊಡ್ಡ ದೊಡ್ಡ ಸಭೆಗಳು ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಸಮಾಜವನ್ನು ಪ್ರತಿನಿಧಿಸಬೇಕಾದ ಕೆಲವು ಪ್ರತಿಷ್ಠಿತ ಮಾಧ್ಯಮಗಳು ಆ ಸಭೆಗಳ ಬಗ್ಗೆ ಯಾವುದೇ ವರದಿಯನ್ನು ಮಾಡುತ್ತಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಸಾವುತ್ಸಾಹದಿಂದ ಸೇರುತ್ತಿರುವ ಜನರ ಸಭೆಗಳನ್ನು ಮಾಧ್ಯಮಗಳು ಬಹಿಷ್ಕರಿಸಿದ ರೀತಿಯಲ್ಲಿ ಆಡುತ್ತಿವೆ. ಪ್ರಿಂಟ್ ಮಾಧ್ಯಮ ಮತ್ತು ರಾಜ್ಯದ ಪ್ರತಿಷ್ಠಿತ ಟಿವಿ ಚಾನಲ್ ಗಳು ಈ ರೀತಿಯ ಸಮಾಜದಿಂದ ವಿಮುಖ ನೀತಿಯನ್ನು ತೋರುತ್ತಿವೆ. ಈ ಬಗ್ಗೆ ಈಗಾಗಲೇ ದೊಡ್ಡ ಚರ್ಚೆ ಶುರುವಾಗಿದ್ದು ನಾವು, ‘ಹೊಸಕನ್ನಡ. ಕಾಂ ‘ ಪತ್ರಿಕೆಯು ಇದನ್ನು 15 ದಿನಗಳ ಹಿಂದೆಯೇ ಗುರುತಿಸಿ ವರದಿ ಮಾಡಿತ್ತು.
‘ದೊಡ್ಡ ದೊಡ್ಡ ಸಮಾರಂಭಗಳನ್ನು, ಸೌಜನ್ಯ ಕುರಿತ ಪ್ರಕರಣದ ಹೋರಾಟದ ಸಮಾವೇಶಗಳನ್ನು ಬಾಯ್ಕಾಟ್ ಮಾಡುವ ನಿಮ್ಮನ್ನು ನಾವು ಬಾಯ್ಕಾಟ್ ಮಾಡುತ್ತಿದ್ದೇವೆ. ನಿಮ್ಮ ಪತ್ರಿಕೆ ಓದಲ್ಲ, ನಿಮಗೆ ಇನ್ನು ಜಾಹೀರಾತು ನೀಡಲ್ಲ. ಸಾವಿರಾರು ಪತ್ರಿಕೆಗಳು ಈಗ ಇದ್ದು ನಿಮ್ಮ ಒಂದೇ ಪತ್ರಿಕೆ ಅಲ್ಲ ಎಂದು ಜನಸಾಮಾನ್ಯರು ನೇರವಾಗಿ ಪತ್ರಿಕೆ ಕಚೇರಿಗೆ ಫೋನ್ ಮಾಡಿ ತಿಳಿಸುತ್ತಿದ್ದಾರೆ. ಚಿತ್ರರಂಗಕ್ಕೆ ಮಾತ್ರ ಇದ್ದ ಬಾಯ್ಕಾಟ್ ಟ್ರೆಂಡ್ ಇದೀಗ ಮಾಧ್ಯಮ ರಂಗಕ್ಕೂ ಪ್ರಾರಂಭವಾಗಿದೆ.
ಈ ಪತ್ರಿಕೆಗಳು ಮತ್ತು ಟಿವಿ ಉದ್ದೇಶಪೂರ್ವಕವಾಗಿ ಜನರ ಸಮಾವೇಶವನ್ನು ಮತ್ತು ಭಾವನೆಗಳನ್ನು ಧಿಕ್ಕರಿಸುತ್ತಿವೆ. ಇದೀಗ ಜನಸಾಮಾನ್ಯರು ಪತ್ರಿಕೆಗಳು ಮತ್ತು ಟಿವಿಗಳ ಬಗ್ಗೆ ನೇರ ಆಪಾದನೆ ಮಾಡುತ್ತಿದ್ದಾರೆ. ಅವರಿಗೆ ದುಡ್ಡು ಸಂದಾಯ ಆಗಿದೆ. ದುಡ್ಡು ತಿಂದು ಯಾರೂ ವರದಿ ಪ್ರಕಟ ಮಾಡುತ್ತಿಲ್ಲ ಎನ್ನುವ ಗುರುತರವಾದ ಆರೋಪಗಳನ್ನು ಪತ್ರಿಕೆಗಳ ಮತ್ತು ಪ್ರಖ್ಯಾತ ಟಿವಿ ಮಾಧ್ಯಮಗಳ ಮೇಲೆ ಮಾಡಲಾಗುತ್ತಿದೆ. ಇಲ್ಲಿ ಅನುಮಾನ ಬರುವಂತೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ವರ್ತಿಸುತ್ತಿವೆ. ಒಂದು ಸಣ್ಣ ಘಟನೆ ಎಲ್ಲೋ ಆದರೆ, ಅಥವಾ ದೂರದಲ್ಲೆಲ್ಲೋ ನಿರ್ಭಯಳ ಥರದ ಅತ್ಯಾಚಾರ ಆದರೆ ಇಡೀ ದಿನ ಹಿಡಿದುಕೊಂಡು ಉಜ್ಜುವ ಪತ್ರಿಕೆಗಳು ಇಷ್ಟು ದೊಡ್ಡ ಪ್ರಮಾಣದ ಪ್ರತಿಭಟನೆಯನ್ನು ಯಾಕೆ ನಿರ್ಲಕ್ಷಿಸುತ್ತಿವೆ ? ಹಾಗೆ ನಿರ್ಲಕ್ಷಿಸಲು ಒಂದು ಕಾರಣ ಬೇಕಲ್ಲ ?!
ಇದು ಇವತ್ತು ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆ. ಅದರ ಬಗ್ಗೆ ಯಾರೂ ಉತ್ತರಿಸಬೇಕಿಲ್ಲ, ಆದರೆ ಜನಸಾಮಾನ್ಯರ ನಂಬಿಕೆ ಒಂದು ಬಾರಿ ಕಳೆದು ಹೋದರೆ ಅದನ್ನು ಮತ್ತೆ ಪಡೆದುಕೊಳ್ಳುವುದು ತುಂಬಾ ಕಷ್ಟ. ಇವತ್ತು ಈ ಪ್ರಖ್ಯಾತ ಮಾಧ್ಯಮಗಳು ಜನರ ನಂಬಿಕೆಯ ಮೇಲೆ ಬೆಳೆದು ನಿಂತ ಸಂಸ್ಥೆಗಳು. ಜನರ ನಂಬಿಕೆಯ ಮೇಲೆ ತಮ್ಮ ಸರ್ಕ್ಯುಲೇಶನ್, ಜನರ ಕೊಡುವ ಜಾಹೀರಾತು, ಅದು ಕೊಡುವ ದುಡ್ಡು ಎಲ್ಲದರ ಮೇಲೆ ತಮ್ಮ ಅಸ್ತಿತ್ವ ಬೆಳಗಿಕೊಂಡು ಬದುಕಿರುವ ಸಂಸ್ಥೆಗಳಿವು. ಜನರ ಪ್ರತಿಭಟನೆಯನ್ನು, ಸಭೆಗಳನ್ನು, ಬಹಿಷ್ಕರಿಸುವ ನಿಮ್ಮನ್ನು ಮತ್ತು ನಮ್ಮನ್ನು ಬಹಿಷ್ಕರಿಸುವ ಕಾಲ ಬಂದ ಹಾಗಿದೆ. ನಾವಂತೂ ಎಚ್ಚೆತ್ತು ಕೊಂಡಿದ್ದೇವೆ.
ಇನ್ನಾದರೂ ನಮಗೆ ಅಂಟುತ್ತಿರುವ ಕಳಂಕದಿಂದ ನಾವು ಮಾಧ್ಯಮಗಳು ಹೊರಗೆ ಬರಬೇಕಿದೆ. ಕಡೆಯ ಪಕ್ಷ, ಎಲ್ಲ ಘಟನೆಗಳ ಹಾಗೆ ಒಂದು ವರದಿ, ಒಂದು ಕವರೇಜ್ ಕೊಡದೆ ಹೋದರೆ ನೀವು ರಾಜ್ಯಮಟ್ಟದ ಪತ್ರಿಕೆಗಳು ಹೇಗಾಗುತ್ತೀರಿ ? ನಮ್ಮನ್ನು ನಮ್ಮ ಓದುಗರು ಗಮನಿಸುತ್ತಿದ್ದಾರೆ. ಇನ್ನಷ್ಟು ಎಚ್ಚರದಿಂದ ಇರೋಣ. ಯಾರದೇ ಪರ ಅಥವಾ ವಿರೋಧ ಮಾಡುವ ಅಗತ್ಯವಿಲ್ಲ. ಕೊನೆಯ ಪಕ್ಷ ಜನರ ಭಾವನೆಗಳಿಗೆ ಬೇಡಿಕೆಗಳಿಗೆ ಮತ್ತು ಸ್ಪಂದನೆಗಳಿಗೆ ನಾವು ಕನ್ನಡಿ ಹಿಡಿಯಲೇ ಬೇಕು.
ಇದನ್ನೂ ಓದಿ: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ : ಮತ್ತೆ ಸಿಡಿದ ವಸಂತ ಬಂಗೇರ ,ಇಂದು ಬೆಳ್ತಂಗಡಿಯಲ್ಲಿ ಮಹಾಧರಣಿ