Areca Plantation: ಅಡಿಕೆ ತೋಟಕ್ಕೆ ಯಾವ ಗೊಬ್ಬರ ಒಳ್ಳೆಯದು ? – ಹಟ್ಟಿ ಗೊಬ್ಬರ, ಕುರಿ – ಕೋಳಿ ಗೊಬ್ಬರ ? ಇಲ್ಲಿದೆ ಅಸಲಿ ಸತ್ಯ !

Areca plantation:

Areca plantation: ಇದೊಂದು ಪ್ರಶ್ನೆ ಪ್ರತಿ ಅಡಿಕೆ ಬೆಳೆಗಾರರಲ್ಲಿ ಕಾಲದಿಂದ ಕಾಲಕ್ಕೆ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೇ ಇದೆ. ಅಡಿಕೆ ಕೃಷಿಗೆ ಯಾವ ಗೊಬ್ಬರ ಒಳ್ಳೆಯದು, ಹೀಗೊಂದು ಪ್ರಶ್ನೆ ಅಡಿಕೆ ಬೆಳೆಗಾರರನ್ನು ಆಗಾಗ ಕಾಡುವುದುಂಟು. ಗೊಬ್ಬರಗಳಲ್ಲಿ ಎರಡು ವಿಧ, ಒಂದು ಸಾವಯವ ಗೊಬ್ಬರ ಇನ್ನೊಂದು ರಾಸಾಯನಿಕ ಗೊಬ್ಬರ. ಇತ್ತೀಚಿಗೆ ದೀರ್ಘಕಾಲ ದೃಷ್ಟಿಯಿಂದ ಜನರು ರಾಸಾಯನಿಕ ಗೊಬ್ಬರವನ್ನು ತ್ಯಜಿಸಿ ಸಾವಯವ ಗೊಬ್ಬರ ಬಳಕೆಗೆ ಇಳಿಯುತ್ತಿದ್ದಾರೆ. ಇದಕ್ಕೆ ಭಾರಿ ಪ್ರಮಾಣದಲ್ಲಿ ಏರಿದ ರಾಸಾಯನಿಕ ಗೊಬ್ಬರಗಳ ಬೆಲೆಯು ಕೂಡ ಒಂದು ಕಾರಣ. ಜೊತೆಗೆ ರಾಸಾಯನಿಕ ಗೊಬ್ಬರಗಳು ಮಣ್ಣಿನ ಫಲವತ್ತತೆಯನ್ನು ಮಣ್ಣಲ್ಲಿರುವ ಜೀವಾಣುಗಳನ್ನು ಕೊಳ್ಳುತ್ತದೆ ಮತ್ತು ದೀರ್ಘಕಾಲದಲ್ಲಿ ಮಣ್ಣನ್ನು ಫಲವತ್ತತೆಯಿಂದ ವಿಮುಖಗೊಳಿಸುತ್ತದೆ ಎನ್ನುವ ಕಾರಣ ಕೂಡ ಸತ್ಯ ಹೌದು.

4 ತರದ ಗೊಬ್ಬರಗಳು:

ಒಂದು ವೇಳೆ ರೈತರು ಸಾವಯವ ಗೊಬ್ಬರವನ್ನು ಆಯ್ಕೆ ಮಾಡಿಕೊಂಡರೆ, ಇದೀಗ 4 ತರದ ಗೊಬ್ಬರಗಳು ರೈತನ ಮುಂದೆ ಆಯ್ಕೆಯಾಗಿ ನಿಲ್ಲುತ್ತವೆ.
1. ಹಟ್ಟಿ ಗೊಬ್ಬರ
2. ಕುರಿ ಗೊಬ್ಬರ
3. ಕೋಳಿ ಗೊಬ್ಬರ
4. ಇತರ ಸಾವಯವ ಗೊಬ್ಬರ (ಸೊಪ್ಪು-ಸದೆ, ಸತ್ತ ಗಿಡ ಪೊದೆ, ಬಾಳೆ ಗಿಡ ಇತ್ಯಾದಿ ಸಾವಯವ ವಸ್ತುಗಳು)

ಇವುಗಳಲ್ಲಿ ನಾಲ್ಕನೆಯದು ಸ್ಥಳೀಯವಾಗಿ, ಆಯಾ ತೋಟದಲ್ಲಿ ಅಥವಾ ಪಕ್ಕದ ಗುಡ್ಡ ಬೆಟ್ಟಗಳಲ್ಲಿ ದೊರಕುವ ವಸ್ತುಗಳು. ಅವುಗಳಲ್ಲಿ ಕೆಲವು ಕೃಷಿ ತ್ರಾಜ್ಯ ವಸ್ತುಗಳು, ಮತ್ತೆ ಕೆಲವು ಸುತ್ತ ಮುತ್ತ ದೊರಕುವ ವಸ್ತುಗಳು. ಇದರ ಬಗ್ಗೆ ನಾವಿಲ್ಲಿ ವಿವರಿಸಲು ಹೊರಟಿಲ್ಲ.
ಸರಿ, ಸಾವಯವ ಗೊಬ್ಬರದ ವಿಷಯಕ್ಕೆ ಬಂದಾಗ ಎಲ್ಲಾ ಗೊಬ್ಬರಗಳಿಗಿಂತಲೂ ಉತ್ಕೃಷ್ಟವಾದುದು ಹಟ್ಟಿ ಗೊಬ್ಬರ. ಅಂದ್ರೆ ದನದ ಎತ್ತಿನ ಎಮ್ಮೆ ಕೋಣಗಳ ಗೊಬ್ಬರ. ಇದರಲ್ಲೂ 2 ಥರದ ಗೊಬ್ಬರ ಉಂಟು. ಒಂದು ಕೇವಲ ಸಗಣಿ ಮತ್ತು ಮೂತ್ರದ ಸಾರಯುಕ್ತ ಗೊಬ್ಬರ ಇನ್ನೊಂದು ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಕೊಟ್ಟಿಗೆ ಕಟ್ಟಿ ಅದಕ್ಕೆ ಸೊಪ್ಪು ಹಾಕಿ ಅವುಗಳ ಮೇಲೆ ಧನ ಎತ್ತುಗಳು ಮಲಗುವುದಿದೆ ಸೊ ಆ ಸೊಪ್ಪಿನ ಮೇಲೆಯೇ ನನ್ನ ಕರಗಳು ಸಗಣಿ ಹಾಕುತ್ತವೆ. ಹಾಕಿ ಸಗಣಿ ಹಾಕಿದ ನಂತರ, ಆ ಸೊಪ್ಪಿನ ಮೇಲೆ ದನ ಕರುಗಳು ಅಡ್ಡಾಡಿ ಅದಕ್ಕೆ ಸಗಣಿ ವ್ಯಕ್ತಿದಂತೆಲ್ಲ ಗುಡ್ಡದಿಂದ ಹರಿದು ತಂದ ಸೊಪ್ಪುಗಳನ್ನು ಅಥವಾ ತರಗೆಳೆ ದಿನಕೊಂದು ಬಾರಿಯಂತೆ ಹಟ್ಟಿಯ ಮೇಲೆ ಹರಡಲಾಗುತ್ತದೆ. ಹೀಗೆ ನಿಧಾನವಾಗಿ ಸೆಗಣಿ ಮೂತ್ರ ಸೊಪ್ಪು ಇವುಗಳ ಬೆಡ್ ರೂಪುಗೊಳ್ಳುತ್ತದೆ. ಈ ಬೆಡ್ಡಿನ ಕೆಳಗೆ ನಿಧಾನವಾಗಿ ಕಾಂಪೋಸ್ಟ್ ತಯಾರಾಗಿ ಬಿಡುತ್ತದೆ. ಈ ರೀತಿಯ ಹಸಿರೆಲ್ಲ ಗೊಬ್ಬರ ಮತ್ತು ಸಗಣಿ ಗೊಬ್ಬರಗಳು ಅಡಿಕೆ ಮತ್ತು ತೆಂಗು ತೋಟಕ್ಕೆ ಉತ್ಕೃಷ್ಟ ಗೊಬ್ಬರಗಳು. ಆದರೆ ಈ ರೀತಿಯ ಗೊಬ್ಬರಕ್ಕೆ ಅಧಿಕ ಬೆಲೆ ಇದ್ದು ಇದೀಗ ಹಣಕಾಸಿನ ಕಾರಣದಿಂದ ರೈತರು ಈ ಗೊಬ್ಬರವನ್ನು ಅಂದರೆ ಹಟ್ಟಿ ಗೊಬ್ಬರವನ್ನು ಬಳಸಲು ಹಿಂಜರಿಯುತ್ತಿದ್ದಾರೆ.

ಹಟ್ಟಿ ಗೊಬ್ಬರ ನಿರ್ವಹಣೆ ಖರ್ಚಿನ ಬಾಬತ್ತು!

ಒಂದು ದೊಡ್ಡ ಬುಟ್ಟಿ ಹಟ್ಟಿ ಗೊಬ್ಬರಕ್ಕೆ ಈಗ 45 ರಿಂದ 50 ರೂಪಾಯಿಗಳ ಬೆಲೆ ಇದೆ. ಗೊಬ್ಬರಕ್ಕೇನು ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು ಆದರೆ ಆ ಗೊಬ್ಬರವನ್ನು ಹತ್ತಿಯಿಂದ ಟೆಂಪೋಗಳಿಗೆ ತುಂಬಿಸಬೇಕು. ನಂತರ ಅವನು ತೋಟಕ್ಕೆ ಸಾಗಿಸಿ ಒಂದು ಕಡೆ ಸುರಿಯಬೇಕು. ಮತ್ತೆ ಅಲ್ಲಿಂದ ಪ್ರತಿ ಗಿಡದ ಬುಡಕ್ಕೆ ವಿತರಣೆ ಮಾಡಬೇಕು ಇದು ತುಂಬಾ ಕೂಲಿ ಅಳುಗಳನ್ನು ಬೇಡುವ ಕೆಲಸ. ಗೊಬ್ಬರಕ್ಕಿಂತ ಹೆಚ್ಚಾಗಿ ಇಂತಹ ಸಾಗಾಣಿಕೆಗೆ ಮತ್ತು ಗಿಡಗಳ ಬುಡಕ್ಕೆ ವಿತರಣೆ ಮಾಡಲು ಹೆಚ್ಚು ಖರ್ಚಾಗುತ್ತದೆ. ಆದುದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹಟ್ಟಿ ಗೊಬ್ಬರದ ಬಳಕೆ ಇದೆ.

ಸೆಗಣಿ ಮತ್ತು ಮೂತ್ರದಲ್ಲಿ ಇರೋ ಪೋಷಕಾಂಶಗಳು:

ಹಸುವಿನ ಮೂತ್ರದಲ್ಲಿ ರೂ.95 ಪ್ರತಿಶತ ನೀರಿದ್ದರೆ, ಎರಡುವರೆ ಪ್ರತಿಶತ ಯೂರಿಯಾ ಮತ್ತು ಒಟ್ಟು 24 ಬಗೆಯ ವಿವಿಧ ಲವಣಗಳ ಮಿಶ್ರಣವೇ ಇದೆ ಅಲ್ಲದೆ ಬರೋಬ್ಬರಿ ಎರಡುವರೆ ಪರ್ಸೆಂಟ್ ಪ್ರಾಣಿ ಮೂತ್ರದಲ್ಲಿ ದೊರೆಯುತ್ತದೆ. ನೈಟ್ರೋಜನ್, ಕಬ್ಬಿಣ ಕ್ಯಾಲ್ಸಿಯಂ, ಫಾಸ್ಫರಸ್, ಕಾರ್ಬೋನಿಕ್ ಆಸಿಡ್, ಸಲ್ಫರ್, ಪೊಟ್ಯಾಶಿಯಂ, ಆಸಿಡ್ – ಕಿನ್ವಗಳು, ಅಪರೂಪದ ಮಿನರಲ್ ಮತ್ತು ಸಾರಗಳ ಭಂಡಾರ ಆಕಳ ಮೂತ್ರ. ಸಗಡಿಯಲ್ಲಿ ಮೆಗ್ನೀಷಿಯಂ ಪೊಟ್ಯಾಶಿಯಂ ಸೋಡಿಯಂ ಜೊತೆಗೆ ಇತರ ಲವಣಗಳ ಅಂಶ ಇರುತ್ತದೆ ಜೊತೆಗೆ ನಾರಿನ ಅಂಶ ಜಿಂಕ್ ಮತ್ತು ಇತರ ಖನಿಜಾಂಶಗಳು ಮತ್ತು ಅಪಾರ ಪ್ರಮಾಣದ ಜೀವಾಣುಗಳು ಹಸುವಿನ ಸಗಡಿಯಲ್ಲಿ ಕಂಡುಬರುತ್ತದೆ.

ಕೃಷಿಕರು ತಾವೇ ತಮ್ಮ ಹಿತ್ತಲಲ್ಲಿ ಕೊಟ್ಟಿಗೆ ಕಟ್ಟಿ ದನ ಕರು ಸಾಕುತ್ತಿದ್ದರೆ, ಹಟ್ಟಿ ಗೊಬ್ಬರ ಅಥವಾ ಕಾಂಪೋಸ್ಟ್ ಟ್ಯಾಂಕ್ ಅಥವಾ ಗೊಬ್ಬರದ ಗುಂಡಿ ಮಾಡಿಟ್ಟು ದನಕರುಗಳ ಸಗಡಿ ಗಂಜಳ ಇತ್ಯಾದಿಗಳನ್ನು ತುಂಬಿಸಿ ಇಡುತ್ತಿದ್ದರೆ, ಹಟ್ಟಿ ಗೊಬ್ಬರವು ಉತ್ಕೃಷ್ಟವಾದ ಗೊಬ್ಬರವಾಗಲಿದೆ. ಸೊಪ್ಪು ಸದ್ಯ ಸಹಿತ ಹಟ್ಟಿಗೊಬ್ಬರ ಇರಬಹುದು ಅಥವಾ ಸೆಗಣಿ ಗಂಜಳ ಇತ್ಯಾದಿಗಳ ಮಿಶ್ರಣ ಇರಬಹುದು, ಅಡಿಕೆ ಕೃಷಿಗೆ ಇದುವೇ ಉತ್ಕೃಷ್ಟವಾದ ಗೊಬ್ಬರ. ಸಾರ್ವಜನಿಕ ಫಾಸ್ಟ್ ರಂಜಕ ಜೊತೆಗೆ ಇತರ ಸಾವಯವ ಅಂಶಗಳು ಕೂಡ ಈ ಗೊಬ್ಬರದಲ್ಲಿದೆ. ಪ್ರಾಣಿಜನ್ಯ ಯೂರಿಯಾ ಅಪಾರ ಪ್ರಮಾಣದ ಸಾರ್ವಜನಿಕವನ್ನು ಒದಗಿಸುತ್ತದೆ. ಹಟ್ಟಿಯಿಂದ ತೆಗೆದ ಗೊಬ್ಬರಗಳಲ್ಲಿ ಸೊಪ್ಪು ಸದೆ ಇರುವ ಕಾರಣ ಅಡಿಕೆ ಗಿಡಗಳ ಬುಡಗಳು ನುಸುಳಾಗಿದ್ದು, ನೀರು ಮತ್ತು ಬೇರುಗಳು ನುಸುಳಲು ಸುಲಭವಾಗುತ್ತದೆ. ನೀರಿನ ಅಂಶ ಅಥವಾ ನೀರು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿರುವಾಗ ಹಟ್ಟಿ ಗೊಬ್ಬರವು ಉಳಿದ ಎರಡು ಗೊಬ್ಬರಗಳಿಗಿಂತ (ಕೋಳಿ ಗೊಬ್ಬರ ಮತ್ತು ಕುರಿ ಗೊಬ್ಬರ) ಪ್ರಾಶಸ್ತ್ಯದ ಆಯ್ಕೆಯಾಗಿದೆ.

ನೈಟ್ರೋಜನ್ ಅಂಶವು ಕೋಳಿ ಗೊಬ್ಬರದಲ್ಲಿ ಅತ್ಯಧಿಕವಿದ್ದು, ಕೋಳಿಗೊಬ್ಬರದಲ್ಲಿ ಇರುವ ಯೂರಿಕ್ ಆಸಿಡ್ ಅಂಶಗಳು ಮುಂಜಾಗ್ರತೆ ಇಲ್ಲದೆ ಗಿಡಗಳಿಗೆ ಬಳಸಿದಾಗ ಗಿಡದ ಬೇರುಗಳು ಕರಟಿಹೋಗುವ ಸಂಭವ ಕೂಡ ಇದೆ. ಹಾಗಾಗಿ, ಕೋಳಿಗೊಬ್ಬರ, ಕುರಿ ಗೊಬ್ಬರ ಮತ್ತು ಹಟ್ಟಿ ಗೊಬ್ಬರಗಳ ಬಗ್ಗೆ ಹಟ್ಟಿಗೊಬ್ಬರವು ಅಡಿಕೆ ಕೃಷಿಗೆ ಹೇಳಿ ಮಾಡಿಸಿದ ಗೊಬ್ಬರವಾಗಿರುತ್ತದೆ. ಕೆಲವು ವೇಳೆ ಹಟ್ಟಿಗೊಬ್ಬರ ಸಿಗದೇ ಹೋದಾಗ, ಸಾಗಾಣಿಕೆ ಅಥವಾ ಕೊಳ್ಳಲು ಹಣಕಾಸಿನ ತೊಂದರೆ ಉಂಟಾದಾಗ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಆಗ ನಮಗೆ ಕಂಡುಬರುವ ಆಯ್ಕೆಗಳು ಕುರಿ ಗೊಬ್ಬರ ಅಥವಾ ಕೋಳಿಗೊಬ್ಬರ. ಕುರಿ ಅಥವಾ ಕೋಳಿ ಗೊಬ್ಬರ ಗಳನ್ನು ಹಟ್ಟಿ ಗೊಬ್ಬರದ ಜೊತೆಗೆ ಸಣ್ಣ ಪ್ರಮಾಣದಲ್ಲಿ ಮಿಶ್ರ ಪ್ರಯೋಗ ಮಾಡುವುದುಂಟು.

ಫಸಲು ಬರುತ್ತಿರುವ ಗಡಗಳಿಗೆ ಕನಿಷ್ಠ ಅರ್ಧ ಬುಟ್ಟಿಯಾದರೂ ಸೊಪ್ಪು ಸದೆ ಮಿಶ್ರಿತ ಗೊಬ್ಬರ ಬೀಳಬೇಕು. ಒಂದು ಬುಟ್ಟಿ ಹಾಕಿದರೆ ಒಳ್ಳೆಯದು. ಇದರ ಜತೆಗೆ ಕಾಡಿನ ಸೊಪ್ಪು, ಬಾಳೆ ಗಿಡದ ತ್ರಾಜ್ಯ, ಇತರ ಸಾವಯವ ವಸ್ತುಗಳು, ಅಡಿಕೆಯ ಹಾಳೆ, ಗರಿಗಳು- ಇತ್ಯಾದಿ ಏನೇ ಇದ್ದರೂ ಅಡಿಕೆ ಗಿಡಗಳ ಬುಡಕ್ಕೆ ಹಾಕಬಹುದು. ಇವೆಲ್ಲ ನಿಧಾನವಾಗಿ ಗೊಬ್ಬರವಾಗಿ ಬದಲಾಗುವ ವಸ್ತುಗಳಾಗಿದ್ದು, ಅಡಿಕೆ ಮರದ ಬುಡದಲ್ಲಿ ಜೀವಾಣುಗಳು ವ್ಯಾಪಕವಾಗಿ ವೃದ್ಧಿಯಾಗುತ್ತವೆ. ಸಾಕಷ್ಟು ನೀರಾವರಿ ಒದಗಿಸಿದರೆ ಸಾಕು, ಹುಲುಸಾಗಿ ಬೆಳೆದು ಫಸಲಾಗಿ ಜೇಬು ತುಂಬಿಕೊಡುವುದರಲ್ಲಿ ಯಾವುದೇ ಅನುಮಾನ ಬೇಡ. ಇವುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ಕೊಡುತ್ತೇವೆ.

Leave A Reply

Your email address will not be published.