ಬಾಲಾಕೊಟ್ ಮರೆಯುವ ಮುನ್ನವೇ ಮತ್ತೊಂದು ರೈಲು ದುರಂತ, ಕನಿಷ್ಠ10 ಮಂದಿ ಸಾವು !
Tamil Nadu:ತಮಿಳುನಾಡಿನ ಜಂಕ್ಷನ್(Tamil Nadu) ಒಂದರಲ್ಲಿ ನಿಂತಿದ್ದ ರೈಲಿನಲ್ಲಿ ದಾರಿ ಬೆಂಕಿ ಕಾಣಿಸಿಕೊಂಡು ಕೋಚ್ ಹೊತ್ತಿ ಉರಿದಿದೆ. ಮಧುರೈನ ಜಂಕ್ಷನ್ ನಲ್ಲಿ ನಿಂತಿದ್ದ ಸ್ಟೇಷನರಿ ಕೋಚ್ ನಲ್ಲಿ ಶನಿವಾರ ಬೆಳಗ್ಗೆ ಬಾರಿ ಬೆಂಕಿ ಕಾಣಿಸಿಕೊಂಡಿದೆ. ರೈಲ್ವೆ ಮೂಲಗಳ ಪ್ರಕಾರ ಕೋಚ್ ಎರಡರಲ್ಲಿ ನಿಂತಿದ್ದ ಟೂರಿಸ್ಟ್ ಕೋಚ್ ಬೆಂಕಿಗೆ ಆಹುತಿಯಾಗಿದೆ ಎಂಬ ಮಾಹಿತಿ ಬಂದಿದೆ.
ಈ ದುರುದ್ದಷ್ಟಕರ ಅಪಘಾತದಲ್ಲಿ 10 ಮಂದಿ ಅಸು ನೀಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಅಲ್ಲಿದ್ದ ಸಿಲಿಂಡರ್ ಸ್ಫೋಟದಿಂದ ಈ ಬೆಂಕಿ ಕಾಣಿಸಿಕೊಂಡಿದ್ದೆ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯ ಮಾಹಿತಿಗಳು ಲಭ್ಯವಾಗುತ್ತಿವೆ.
ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಮತ್ತು ವಾಹನಗಳು ಸ್ಥಳಕ್ಕೆ ಧಾವಿಸಿದ್ದಾರೆ. ರೈಲಿನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ರೈಲ್ವೆ ಸಿಬ್ಬಂದಿ ಒಟ್ಟಾಗಿ ಸೇರಿ ಬೆಂಕಿಯನ್ನು ನಂದಿಸುವಲ್ಲಿ ತೊಡಗಿದ್ದು, ಸುಟ್ಟ ದೇಹಗಳನ್ನು ಕಂಪಾರ್ಟ್ಮೆಂಟ್ನಿಂದ ಹೊರತೆಗೆಗೆಯಲಾಗುತ್ತಿದೆ.
ಅಪಘಾತ ಹೇಗಾಯ್ತು ?
ಇಂದು, ಶನಿವಾರ ಮುಂಜಾನೆ 5.15 ಕ್ಕೆ ಮೊದಲಿಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರ್ಧ ಗಂಟೆಯ ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಗ್ಗೆ 7.15ರ ವೇಳೆಗೆ ಬೆಂಕಿ ನಂದಿಸಿದ್ದಾರೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ. ಅದಾಗಲೇ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿ ಹೋಗಿತ್ತು.
“ಇದು ಒಂದು ಖಾಸಗಿ ಕೋಚ್ ಆಗಿದ್ದು, ನಿನ್ನೆ (ಆಗಸ್ಟ್ 25) ನಾಗರಕೋಯಿಲ್ ಜಂಕ್ಷನ್ನಲ್ಲಿ ರೈಲು ನಂ. 16730 (ಪುನಲೂರ್-ಮಧುರೈ ಎಕ್ಸ್ಪ್ರೆಸ್) ಈ ಪ್ರೈವೇಟ್ ಕೋಚ್ ಅನ್ನು ಬೇರ್ಪಡಿಸಿ ಮಧುರೈ ಸ್ಟೇಬ್ಲಿಂಗ್ ಲೈನ್ನಲ್ಲಿ ಇರಿಸಲಾಗಿತ್ತು. ಖಾಸಗಿ ಕೋಚ್ನಲ್ಲಿದ್ದ ಪ್ರಯಾಣಿಕರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಾಟ ಮಾಡಿದ್ದು, ಅದರಿಂದ ಸ್ಫೋಟ ಆಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ಅನೇಕ ಪ್ರಯಾಣಿಕರು ಕೋಚ್ನಿಂದ ಹೊರಬಂದಿದ್ದಾರೆ. ಕೆಲವು ಪ್ರಯಾಣಿಕರು ಪ್ಲಾಟ್ಫಾರ್ಮ್ನಲ್ಲಿಯೇ ಇಳಿದಿದ್ದರು ”ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.
ಘಟನಾ ಸ್ಥಳದಲ್ಲಿ ಆಲೂಗಡ್ಡೆ ಇತ್ಯಾದಿ ಅಡುಗೆ ಸಾಮಾನುಗಳು ಸಿಕ್ಕಿದ್ದು, ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಲು ಪ್ರಯತ್ನ ನಡೆದಿತ್ತು ಎನ್ನಲಾಗಿದೆ.