IAS Interesting Question: ಯಾವುದು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ, ಆದರೆ ಒಂದೇ ಸ್ಥಳದಲ್ಲಿ ಉಳಿಯುತ್ತದೆ ? IAS ಹುಡ್ಗಿ ನಾಚಿ ಕೊಟ್ಟ ಉತ್ತರ ಏನು ಗೊತ್ತೇ ?!
IAS ಬುದ್ಧಿವಂತರ ಕ್ಷೇತ್ರ. ಪ್ರಶ್ನಿಸುವವರು ಮತ್ತೆ ಉತ್ತರಿಸುವವರು ಇಬ್ಬರೂ ಬುದ್ಧಿವಂತರು. ಕೆಲವು ಬಾರಿ ತಮಾಷೆಯಾಗಿ ಕೆಲವು ಬಾರಿ ಕಠಿಣವಾಗಿ ಮತ್ತೆ ಕೆಲವು ಬಾರಿ ಒಂದಷ್ಟು ಪೋಲಿತನದಿಂದ ಕೂಡಿದ ಪ್ರಶ್ನೆಗಳನ್ನು ಕೂಡ ಸಂದರ್ಶಕರು ಕೇಳುವುದಿದೆ. ಇಲ್ಲಿ ಕೂಡ ಅಂತಹದೇ ಒಂದು ಪ್ರಶ್ನೆಯನ್ನು IAS ಹುಡುಗಿಯ ಮುಂದೆ ಇಟ್ಟಿದ್ದರು ಅಲ್ಲಿದ್ದ ಸಂದರ್ಶಕ. ಅಂತಹ ಪ್ರಶ್ನೆಗಳನ್ನು ಹೇಗೆ ಸಮರ್ಥವಾಗಿ ಎದುರಿಸಿದ್ದಾಳೆ ನಮ್ಮ ಹುಡುಗಿ, ಬನ್ನಿ ನೋಡೋಣ.
ಪ್ರಶ್ನೆ 1: A ಅನ್ನುವವರು B ಯ ಅಪ್ಪ. ಆದ್ರೆ B ಯು A ನ ಮಗನಲ್ಲ. ಅದು ಹೇಗೆ ಸಾಧ್ಯ ?
ಪ್ರಶ್ನೆ 2: ಒಂದು ಸ್ಟಾಪ್ ಬರುತ್ತೆ ಅಲ್ಲಿ 6 ಜನ ಇಳೀತಾರೆ ಮತ್ತು 2 ಜನ ಹತ್ತುತ್ತಾರೆ. ಬಸ್ ಮುಂದೆ ಹೋಗುತ್ತೆ. ಇನ್ನೊಂದು ಸ್ಟಾಪ್ ಬರತ್ತೆ, ಅಲ್ಲಿ 2 ಜನ ಇಳೀತಾರೆ ಮತ್ತು 6 ಜನ ಹತ್ತುತ್ತಾರೆ. ಈಗ ಹೇಳಿ, ಬಸ್ಸಿನ ಡ್ರೈವರ್ ನ ಏಜ್ ಎಷ್ಟು ?
ಪ್ರಶ್ನೆ 3: ಅಲ್ಲಿ ಒಟ್ಟು ಐದು ಜನ ಅಕ್ಕತಂಗಿಯರಿದ್ದಾರೆ. ಎಲ್ಲರೂ ಬಿಜಿ ಇರ್ತಾರೆ. ಅವರಲ್ಲಿ ರಶ್ಮಿ ಎಂಬವಳು ಪುಸ್ತಕ ಓದುತ್ತಿದ್ದಾಳೆ. ರೋಸ್ ಎಂಬವಳು ಅಡುಗೆ ಮಾಡುತ್ತಿದ್ದಾಳೆ. ಕವಿತಾ ಚೆಸ್ ಆಡ್ತಾ ಇದ್ದಾಳೆ ಮತ್ತು ಸುನಿತಾ ಇಸ್ತ್ರಿ ಹಾಕುತ್ತಿದ್ದಾಳೆ. ಹಾಗಾದರೆ ಮತ್ತೊಬ್ಬಳು, ಐದನೆಯವಳು ಏನು ಮಾಡುತ್ತಿದ್ದಾಳೆ ?
ಪ್ರಶ್ನೆ 4: ಯಾವ ಪ್ರಶ್ನೆಯ ಉತ್ತರ ಬದಲಾಗುತ್ತಲೇ ಇರುತ್ತದೆ ?
ಪ್ರಶ್ನೆ 5: ಯಾವ ಗಂಡು ಪ್ರಾಣಿ ಗರ್ಭಿಣಿ ಆಗಿ ಮರಿ ಹಾಕುತ್ತದೆ ?
ಪ್ರಶ್ನೆ 6: ಯಾವುದು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ, ಆದರೆ ಯಾವಾಗಲೂ ಒಂದೇ ಸ್ಥಳದಲ್ಲಿ ಉಳಿಯುತ್ತದೆ ?
ಪ್ರಶ್ನೆ 7: ಕಣ್ಣು ಮುಚ್ಚಿದ ನಂತರವೂ ನೋಡಬಹುದಾದ ಜೀವಿ ಯಾವುದು?
ಪ್ರಶ್ನೆ 8: ಯಾವುದನ್ನು ಗಂಡಸರು ಅಡಗಿಸ್ತಾರೆ, ಅದೇ ಹೆಂಗಸರು ಜೋರಾಗಿ ತೋರಿಸಿಕೊಂಡು ಹೋಗ್ತಾರೆ ?
ಪ್ರಶ್ನೆ 9: ಕೋಳಿ ಮೊಟ್ಟೆ ಇಡುತ್ತೆ ಹಸು ಹಾಲು ಕೊಡುತ್ತೆ. ಯಾರು ಎರಡನ್ನೂ ನೀಡ್ತಾರೆ ?
ಉತ್ತರಗಳು:
ಉತ್ತರ 1: A ಅನ್ನುವವರು B ಯ ಅಪ್ಪ. ಆದ್ರೆ B ಯು A ನ ಮಗನಲ್ಲ. ಇದು ಸಾಧ್ಯ, ಯಾಕೆಂದರೆ B ಯು A ನ ಮಗಳು !
ಪ್ರಶ್ನೆ ಮತ್ತು ಉತ್ತರ 2: ಒಂದು ಸ್ಟಾಪ್ ಬರುತ್ತೆ ಅಲ್ಲಿ 6 ಜನ ಇಳೀತಾರೆ ಮತ್ತು 2 ಜನ ಹತ್ತುತ್ತಾರೆ. ಬಸ್ ಮುಂದೆ ಹೋಗುತ್ತೆ. ಇನ್ನೊಂದು ಸ್ಟಾಪ್ ಬರತ್ತೆ, ಅಲ್ಲಿ 2 ಜನ ಇಳೀತಾರೆ ಮತ್ತು 6 ಜನ ಹತ್ತುತ್ತಾರೆ. ಬಸ್ಸಿನ ಡ್ರೈವರ್ ನ ಏಜ್ ಹೇಗೆ ಅಂತ ಹೇಳಲು ಆಗಲ್ಲ. (ಡ್ರೈವರ್ ನ ಏಜ್ 25 ಅಂತ ಖಚಿತವಾಗಿ ಹೇಳ್ತೇನೆ, ಯಾಕೆಂದರೆ ಅದು ನನ್ನ ಏಜ್ ! ಹೀಗೂ ಬುದ್ಧಿವಂತಿಕೆಯಿಂದ ಉತ್ತರಿಸಬಹುದು)
ಉತ್ತರ 3: ಅಲ್ಲಿ ಒಟ್ಟು ಐದು ಜನ ಅಕ್ಕತಂಗಿಯರಿದ್ದಾರೆ. ಎಲ್ಲರೂ ಬಿಜಿ ಇರ್ತಾರೆ. ಅವರಲ್ಲಿ ರಶ್ಮಿ ಎಂಬವಳು ಪುಸ್ತಕ ಓದುತ್ತಿದ್ದಾಳೆ. ರೋಸ್ ಎಂಬವಳು ಅಡುಗೆ ಮಾಡುತ್ತಿದ್ದಾಳೆ. ಕವಿತಾ ಚೆಸ್ ಆಡ್ತಾ ಇದ್ದಾಳೆ ಮತ್ತು ಸುನಿತಾ ಇಸ್ತ್ರಿ ಹಾಕುತ್ತಿದ್ದಾಳೆ. ಹಾಗಾದರೆ ಮತ್ತೊಬ್ಬಳು, ಐದನೆಯವಳು ಏನು ಮಾಡುತ್ತಿದ್ದಾಳೆ? ಇದಕ್ಕೆ ಉತ್ತರ: ಅವಳು ಕವಿತಾ ಜತೆ ಚೆಸ್ ಅಡ್ತಿದ್ದಾಳೆ !
ಉತ್ತರ 4: ಯಾವ ಪ್ರಶ್ನೆಯ ಉತ್ತರ ಬದಲಾಗುತ್ತಲೇ ಇರುತ್ತದೆ ? ಅದು ಸಮಯ.
ಉತ್ತರ 5: ಯಾವ ಗಂಡು ಪ್ರಾಣಿ ಗರ್ಭಿಣಿ ಆಗಿ ಮರಿ ಹಾಕುತ್ತದೆ ? ಅದು ಕಡಲ ಕುದುರೆ (ಸೀ ಹಾರ್ಸ್ )
ಪ್ರಶ್ನೆ 6: ಯಾವುದು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ, ಆದರೆ ಯಾವಾಗಲೂ ಒಂದೇ ಸ್ಥಳದಲ್ಲಿ ಉಳಿಯುತ್ತದೆ ?
ಉತ್ತರ: ಕೇಳಲು ಡಬ್ಬಲ್ ಮೀನಿಂಗ್ ಕ್ವೆಶ್ಚನ್ ಥರ ಇರುವ ಇದಕ್ಕೆ ಉತ್ತರ ಮಜವಾಗಿದೆ. ಅದು ಲಿಫ್ಟ್.
ಪ್ರಶ್ನೆ 7: ಕಣ್ಣು ಮುಚ್ಚಿದ ನಂತರವೂ ನೋಡಬಹುದಾದ ಜೀವಿ ಯಾವುದು?
ಉತ್ತರ 7: ಒಂಟೆ ಮುಚ್ಚಿದ ಕಣ್ಣುಗಳಿಂದ ನೋಡುವ ಸಾಮರ್ಥ್ಯ ಹೊಂದಿದೆ. ಒಂಟೆಯ ಕಣ್ಣುಗಳು ಮೂರು ಕಣ್ಣುರೆಪ್ಪೆಗಳನ್ನು ಹೊಂದಿರುತ್ತವೆ. ಅವು ಧೂಳು ಮತ್ತು ಕಣಗಳಿಂದಲೂ ರಕ್ಷಿಸುತ್ತದೆ. ಏಕೆಂದರೆ ಕಣ್ಣುಗಳು ಎಲ್ಲಾ ಜೀವಿಗಳಿಗೆ ತುಂಬಾ ಮೃದುವಾದ ಭಾಗಗಳಾಗಿವೆ. ಹೀಗಾಗಿ ಪ್ರಕೃತಿಯು ಒಂಟೆಗೆ ಕಣ್ಣುಗಳನ್ನು ರಕ್ಷಿಸಲು ಅಂತಹ ರೆಪ್ಪೆಗಳನ್ನು ನೀಡಿದೆ.
ಪ್ರಶ್ನೆ 8: ಯಾವುದನ್ನು ಗಂಡಸರು ಅಡಗಿಸ್ತಾರೆ, ಅದೇ ಹೆಂಗಸರು ಜೋರಾಗಿ ತೋರಿಸಿಕೊಂಡು ಹೋಗ್ತಾರೆ ? ಅದು ಪರ್ಸ್ !
ಪ್ರಶ್ನೆ 9: ಕೋಳಿ ಮೊಟ್ಟೆ ಇಡುತ್ತೆ, ಹಸು ಹಾಲು ಕೊಡುತ್ತೆ. ಯಾರು ಎರಡನ್ನೂ ನೀಡ್ತಾರೆ ? ಉತ್ತರ – ಅಂಗಡಿಯವರು.