ವಾರದಲ್ಲಿ ಒಂದು ದಿನ ಪುತ್ತೂರಿನಲ್ಲಿ ಎಸ್ಪಿ ಮೊಕ್ಕಾಂ ಶಾಸಕರಿಂದ ಸೂಚನೆ: ಎಸ್ಪಿಯಿಂದ ಪೂರಕ ಸ್ಪಂದನೆ

Puttur: ವಾರದಲ್ಲಿ ಒಂದು ದಿನ ಪುತ್ತೂರಿನಲ್ಲಿ‌ಮೊಕ್ಕಾಂ ಹೂಡುವಂತೆ ಜಿಲ್ಲಾ ಎಸ್ಪಿಉವರಿಗೆ ಶಾಸಕರಾದ ಅಶೋಕ್ ರೈ ಸೂಚನೆ ನೀಡಿದ್ದು ,ಶಾಸಕರ ಸೂಚನೆಗೆ ಎಸ್ಪಿಯವರು ಪೂರಕವಾಗಿ ಸ್ಪಂದಿಸಿದ್ದು ವಾರದಲ್ಲಿ ಒಂದು ಉಪವಿಭಾಗ ವ್ಯಾಪ್ತಿಗೆ ಪುತ್ತೂರು ಕೇಂದ್ರೀಕೃತವಾಗಿ ಮೊಕ್ಕಾಂ ಹೂಡಲಿದ್ದಾರೆ.
ಅಪರಾಧ ಚಟುವಟಿಕೆಗೆ ಕಡಿವಾಣ ಹಾಕುವುದು ಮತ್ತು ಸಾರ್ವಜನಿಕರಿಗೆ ಎಸ್ಪಿಯವರನ್ನು ಭೇಟಿಯಾಗಲು ಇದರಿಂದ ಸಾಧ್ಯವಾಗಲಿದೆ. ಪುತ್ತೂರು( Puttur) ಉಪವಿಭಾಗದ ಪುತ್ತೂರು,ಬೆಳ್ತಂಗಡಿ,ಬಂಟ್ವಾಳ ,ಸುಳ್ಯ ಹಾಗೂ ಕಡಬ ವ್ಯಾಪ್ತಿಗಳ ಸಾರ್ವಜನಿಕರಿಗೆ ಮುಂದಿನ‌ದಿನಗಳಲ್ಲಿ ಎಸ್ಪಿ ಅವರನ್ನು ಪುತ್ತೂರಿನಲ್ಲಿಯೇ ಭೇಟಿಯಾಗಬಹುದಾಗಿದೆ. ಈ ಹಿಂದೆ ಎಸ್ಪಿಯವರನ್ನು ಭೇಟಿಯಾಗಲು‌ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಇಲಾಖೆಯನ್ನು ಚುರುಕುಗೊಳಿಸಲು ಇದು ಸಹಕಾರಿಯಾಗಲಿದೆ.

ಪೂರಕ ಸ್ಪಂದನೆ

ಶಾಸಕರ ಸೂಚನೆಗೆ ಎಸ್ಪಿ ಸಿ ಬಿ ರಿಷ್ಯಂತ್ ರವರು ಪೂರಕವಾಗಿ ಸ್ಪಂದನೆ ನೀಡಿದ್ದು ವಾರದ ಯಾವ ದಿನದಂದು ಪುತ್ತೂರಿನಲ್ಲಿ ಮೊಕ್ಕಾಂ ಹೂಡಲಿದ್ದಾರೆ ಎಂಬುದನ್ನು ಅವರು ದಿನ ನಿಗಧಿಪಡಿಸಲಿದ್ದಾರೆ. ಶಾಸಕರ ಈ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿದೆ. ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಕೂಗಿನ ನಡುವೆ ಶಾಸಕರ ಈ ನಿರ್ಧಾರ ಇನ್ನಷ್ಟು ಬಲ ನೀಡಿದೆ.

ಇದನ್ನೂ ಓದಿ: Anand Mahindra: ಭಾರತ ಬಡ ದೇಶ, ಚಂದ್ರಯಾನ-3 ಬೇಕಾ ಎಂದ ಬ್ರಿಟಿಷ್ ನಿರೂಪಕ ! ಆನಂದ್ ಮಹೀಂದ್ರಾ ನೀಡಿದ್ರು ಖಡಕ್ ಉತ್ತರ!!

Leave A Reply

Your email address will not be published.