Sandalwood:ಡಾ.ರಾಜ್‌ಕುಮಾರ್‌ ತೆರೆಮೇಲೆ ಸಿಗರೇಟ್‌, ಮದ್ಯ ಸೇವಿಸುತ್ತಿರಲಿಲ್ಲ, ನಿಯಮ ಮೀರಿದ ಶಿವಣ್ಣ ಈ ಬಗ್ಗೆ ಹೇಳಿದ್ದೇನು?

Sandalwood news Actor shivarajKumar reacts on doing drinking smoking scenes in his films

Shivarajkumar: ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Cinema)ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ (Shivarajkumar)ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟು ಸಿನಿರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತೆರೆಯ ಮೇಲೆ ಶಿವಣ್ಣ ಕೆಲವೇ ನಿಮಿಷ ಕಾಣಿಸಿಕೊಂಡಿದ್ದರು ಕೂಡ ಹ್ಯಾಟ್ರಿಕ್ ಹೀರೋ ಹವಾ ಮಾತ್ರ ಟಾಪ್ ಅಲ್ಲೇ ಇದೆ. ಸದ್ಯ, ಈ ಸಿನಿಮಾದಲ್ಲಿ(Cinema )ಶಿವಣ್ಣ ಸಿಗರೇಟ್ ಸೇದುವ ಸ್ಟೈಲ್ ನೋಡುಗರ ಗಮನ ಸೆಳೆದಿದೆ.

ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ (Dr. Rajkumar)ಸಿನಿಮಾಗಳಲ್ಲಿ ಒಳ್ಳೆಯ ಸಂದೇಶ ಸಾರುವ ಚಿತ್ರಗಳಲ್ಲೇ ಅಣ್ಣಾವ್ರು ನಟಿಸುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲಿಯೂ ಸಿಗರೇಟ್, ಮದ್ಯ ಸೇವಿಸುವ ಸನ್ನಿವೇಶಗಳನ್ನು ನಟ ರಾಜ್ ಕುಮಾರ್ ಅವರು ಖುಲ್ಲಾಂ ಖುಲ್ಲಾ ನಿರಾಕರಿಸುತ್ತಿದ್ದರು.

Shivarajkumar

ಈ ರೀತಿ ಸಿನಿಮಾ ಮಾಡುವುದರಿಂದ ಸಮಾಜಕ್ಕೆ(Society )ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣದಿಂದ ಕೆಟ್ಟ ಸಂದೇಶ ರವಾನೆ ಆಗುವ ಸಿನಿಮಾಗಳಲ್ಲಿ ರಾಜ್ ಕುಮಾರ್ ಅವರು ನಟಿಸುತ್ತಿರಲಿಲ್ಲ. ‘ಆಕಸ್ಮಿಕ’, ‘ಶಬ್ಧವೇದಿ’ ಒಳಗೊಂಡಂತೆ ಕೆಲ ಸಿನಿಮಾಗಳಲ್ಲಿ ದುಶ್ಚಟಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ದೆಸೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು.

ಇದೀಗ, ಶಿವರಾಜ್ ಕುಮಾರ್ ಅವರು ಸಿಗರೇಟ್ ಸೇದುವ ದೃಶ್ಯಗಳಲ್ಲಿ ನಟಿಸಿರುವ ಹಿನ್ನೆಲೆ ತಮಿಳು ಬಿಬಿಸಿ ಯೂಟ್ಯೂಬ್‌ ಚಾನಲ್‌ ಸಂದರ್ಶನದಲ್ಲಿ ನಟ ಶಿವರಾಜ್‌ಕುಮಾರ್‌ ಅವರಿಗೆ ಈ ವಿಚಾರದ ಕುರಿತು ಪ್ರಶ್ನೆ ಎದುರಾಗಿದೆ.

” ಡಾ. ರಾಜ್‌ಕುಮಾರ್ ತಮ್ಮ ಇಮೇಜ್ ಬಗ್ಗೆ ಬಹಳ ಜಾಗ್ರತೆ ವಹಿಸಿದ್ದರು. ತೆರೆಮೇಲೆ ಸಿಗರೇಟ್ ಸೇದಬಾರದು, ಮದ್ಯ ಸೇವಿಸಬಾರದು ಎನ್ನುವ ನಿಮಯಗಳನ್ನು ಹಾಕಿಕೊಂಡಿದ್ದರು. ಆದರೆ ನೀವು ತೆರೆಮೇಲೆ ಅದನ್ನು ಮೀರಿದ್ದೀರಲ್ಲವೇ ? ತಂದೆ ಈ ಕುರಿತು ನಿಮಗೆ ಏನು ಹೇಳುತ್ತಿರಲಿಲ್ಲವೇ? ಎನ್ನುವ ಪ್ರಶ್ನೆಯನ್ನು ಶಿವರಾಜ್ ಕುಮಾರ್ ಅವರಿಗೆ ಕೇಳಲಾಗಿದೆ.

ಇದಕ್ಕೆ ಶಿವಣ್ಣ ಉತ್ತರ ನೀಡಿದ್ದು,”ಓಂ ಸಿನಿಮಾದ ಮೂಲಕ ಮೊದಲ ಬಾರಿಗೆ ಈ ರೀತಿ ನಟಿಸಿದ್ದೆ.ಆಗ ಅಪ್ಪ ಕಾಲಕ್ಕೆ ಮತ್ತು ಕಥೆಗೆ ತಕ್ಕಂತೆ ಬದಲಾಗಲು ತಿಳಿಸಿದ್ದರು. ” ಪ್ರತಿಯೊಂದು ಕೂಡ ನನ್ನ ಹಾಗೆ ಇರಬೇಕೆಂದೇನು ಇಲ್ಲ. ಮಕ್ಕಳು ಅವರದ್ದೇ ಶೈಲಿ ರೂಢಿಸಿಕೊಳ್ಳಬೇಕು. ಅಷ್ಟೇ ಅಲ್ಲದೇ, ಅವರು ಎಂದೂ ಇದು ಮಾಡಬೇಡ, ಅದು ಮಾಡಬೇಡ ಎಂದು ಕಟ್ಟುನಿಟ್ಟು ಮಾಡುತ್ತಿರಲಿಲ್ಲ. ಅದು ನಿಜ ಜೀವನದಲ್ಲಿಯಾಗಿದ್ದರು ಸರಿ, ಇಲ್ಲವೇ ಸಿನಿಜೀವನದಲ್ಲಿಯಾದರೂ ಸರಿ!! ಯಾವುದೇ ನಿರ್ಬಂಧವನ್ನು ನಮ್ಮ ಮೇಲೆ ಹೇರುತ್ತಿರಲಿಲ್ಲ. ನಾವು ಎಲ್ಲಿ ಹೋಗುತ್ತೇವೆ ಏನು ಮಾಡುತ್ತೇವೆ ಎಂಬುದನ್ನು ಕೂಡ ಯಾವತ್ತೂ ಚೆಕ್ ಮಾಡುತ್ತಿರಲಿಲ್ಲ.” ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಮತ್ತೊಂದು ಪ್ರಶ್ನೆ ಕೇಳಲಾಗಿದೆ. ‘ಜೈಲರ್‌’ ಚಿತ್ರದಲ್ಲಿ ನಿಮ್ಮ ಸಂಗಡಿಗನನ್ನು ಫ್ಯಾನ್‌ಗೆ ನೇತಾಕುವ ಸನ್ನಿವೇಶ ನೋಡಿದಾಗ ನಿಮ್ಮ ಪಾತ್ರ ಕೊಂಚ ಡಾರ್ಕ್‌ ಶೇಡ್ ರೀತಿ ಎದ್ದು ಕಾಣುತ್ತದೆ. ಇದು ನಿಮ್ಮ ಇಮೇಜ್‌ಗೆ ಧಕ್ಕೆ ತರುವಂತಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ಕೇಳಿದಾಗ, “ನರಸಿಂಹ ಪಾತ್ರ ಆ ರೀತಿ ಇರುತ್ತದೆ. ಆ ಸನ್ನಿವೇಶದಲ್ಲಿ ಎದುರುಗಿರುವ ಪಾತ್ರ ಯಾವುದು ಅನ್ನೋದು ಮುಖ್ಯವಾಗುತ್ತದೆ. ಅವರು ಕೆಟ್ಟವರೇ ಇರಬಹುದು, ಒಳ್ಳೆಯವರೇ ಇರಬಹುದು. ಮಾತನಾಡುವಾಗ ಎಚ್ಚರಿಕೆ ವಹಿಸಬೇಕು”.

“ಯಜಮಾನನ ಬಳಿ ಭೇಷ್ ಎಂದೆನಿಸಿಕೊಳ್ಳಲು ಬಕೆಟ್ ಹಿಡಿಯುವ ಕೆಲಸ ಮಾಡಬಾರದು. ನರಸಿಂಹನಿಗೆ ‘ಜೈಲರ್’ ಒಳ್ಳೆ ಅನುಬಂಧ ಇರುತ್ತದೆ. ಅದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ವರ್ತಿಸಬೇಕು. ಹೀಗಾಗಿ, ಈ ರೀತಿಯ ಪಾತ್ರ ಮಾಡಿದ್ದಕ್ಕೆ ಬೇಸರವೇನಿಲ್ಲ” ಎಂದು ಶಿವಣ್ಣ ಇದೆ ವೇಳೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: FCI Recruitment 2023: ಭಾರತೀಯ ಆಹಾರ ನಿಗಮದಲ್ಲಿ ಭರ್ಜರಿ ಉದ್ಯೋಗವಕಾಶ! 5000 ಹುದ್ದೆಗಳ ಭರ್ತಿ! ಮಾಸಿಕ 30 ಸಾವಿರವರೆಗೆ ವೇತನ!

Leave A Reply

Your email address will not be published.