Koppal: ಪೊಲೀಸರಿಂದ ಇಸ್ಪೀಟ್‌ ಅಡ್ಡೆ ಮೇಲೆ ಭರ್ಜರಿ ದಾಳಿ! ಅಡಗಿ ಕುಳಿತವರ ಹಿಡಿದ ರೀತಿ ರೋಚಕ!!!

Koppala crime news police raid on while playing cards and seized 15 lakh rupees in koppala

Koppala: ಕೊಪ್ಪಳದಲ್ಲಿ(Koppala)ಸ್ಥಳೀಯರು ಪೊಲೀಸರಿಗೆ (Police)ನೀಡಿದ ಖಚಿತ ಮಾಹಿತಿಯ ಆಧಾರದ ಮೇರೆಗೆ ಇಸ್ಪೀಟ್ ಅಡ್ಡೆ ಮೇಲೆ‌ ದಾಳಿ ನಡೆಸಿ ಪೊಲೀಸರು ಹಣದ ಬ್ಯಾಗ್ ಹಿಡಿದು ಪೊದೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗಾವತಿ ತಾಲೂಕಿನ ತಿರಮಲಾಪುರದ ಹೊರವಲಯದಲ್ಲಿ ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಚಿತ್ರದುರ್ಗ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ಜನ ಅಕ್ರಮವಾಗಿ ಇಸ್ಟೀಟ್ ಆಡುತ್ತಿದ್ದ ಜೂಜುಕೋರರ ಮೇಲೆ ಗಂಗಾವತಿ ಪೊಲೀಸರು(Police Ride )ದಾಳಿ ಪೊಲೀಸ್ ನಡೆಸಿದ್ದಾರೆ. ಈ ಪ್ರಕರಣದ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳದಲ್ಲಿ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರು ದಾಳಿ ನಡೆಸಿದ್ದು 15,33,660 ಲಕ್ಷ ಹಣ ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ. ಪೋಲಿಸರು ಏಕಾಏಕಿ ದಾಳಿ ನಡೆಸಿದ ಸಂದರ್ಭ ಇಸ್ಪೀಟ್ ದಂಧೆಕೋರರು ದಿಕ್ಕಾಪಾಲಾಗಿ ಓಡಿ ಪೊದೆಗಳಲ್ಲಿ ಅಡಗಿ ಕುಳಿತ ಘಟನೆ ನಡೆದಿದೆ. ಖಾಕಿ ಪುಂಡರನ್ನು ಹುಡುಕಿ ಹೊರಗಡೆ ಎಳೆತಂದು ಬ್ಯಾಗ್ ವಶಕ್ಕೆ ಪಡೆದಿದ್ದು, ಎರಡು ಹಣದ ಬ್ಯಾಗ್( Bag), ಒಂದು ಕಾರು, 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ರಾಯಚೂರಿನ ಮಸ್ಕಿ ಮೂಲದ ವ್ಯಕ್ತಿಯಿಂದ ಹಣದ ಬ್ಯಾಗ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯರು ಪೊಲೀಸರಿಗೆ ನೀಡಿದ ಖಚಿತ ಮಾಹಿತಿಯ ಅನುಸಾರ ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರು ದಾಳಿ ನಡೆಸಿದ್ದು, ಪುಂಡರ ಅಕ್ರಮ ಚಟುವಟಿಕೆ ಮಟ್ಟ ಹಾಕುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Sandalwood:ಡಾ.ರಾಜ್‌ಕುಮಾರ್‌ ತೆರೆಮೇಲೆ ಸಿಗರೇಟ್‌, ಮದ್ಯ ಸೇವಿಸುತ್ತಿರಲಿಲ್ಲ, ನಿಯಮ ಮೀರಿದ ಶಿವಣ್ಣ ಈ ಬಗ್ಗೆ ಹೇಳಿದ್ದೇನು?

Leave A Reply

Your email address will not be published.