World’s Oceans: ಸಾಗರದ ಬಣ್ಣದಲ್ಲಿ ವ್ಯತ್ಯಾಸ; ಸಂಶೋಧನ ತಂಡ ನೀಡಿದೆ ಇದೊಂದು ವಿಚಾರದ ಅಸಲಿಯತ್ತು!
oceans are changing from Blue to green what do scientists says about this
World’s Oceans: ಹವಾಮಾನ ವೈಪರೀತ್ಯದ ಪರಿಣಾಮ ಕೇವಲ ಕೆರೆ, ಹಳ್ಳಗಳಂತಹ ಸಣ್ಣ ಸಣ್ಣ ಜಲಮೂಲಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಮುದ್ರ, ಸಾಗರಗಳಿಗೂ (World’s Oceans) ತಲುಪಿರುವುದು ದುರಂತ. ಈ ಹವಾಮಾನ ಬದಲಾವಣೆಯು ಸಾಗರದ ನೀರಿನ ಬಣ್ಣವನ್ನೇ ಬದಲಾಯಿಸಿದೆ.
ಹೌದು, ನಮ್ಮ ಸುತ್ತಲಿನ ತಾಪಮಾನ ಏರಿಕೆ ಸಾಲು ಸಾಲು ಸಮಸ್ಯೆಗಳನ್ನು ಒಂದರ ಹಿಂದೆ ಒಂದರಂತೆ ಸೃಷ್ಟಿ ಮಾಡುತ್ತಿದೆ.
ಅದರಲ್ಲೂ ಭೀಕರ ಪರಿಣಾಮ ಎಂದರೆ ಅದು ಸಾಗರಗಳ ಬಣ್ಣ ಬದಲಾಗುವಿಕೆ ಪ್ರಕ್ರಿಯೆ.
ಈಗಾಗಲೇ ಪ್ರಪಂಚದ ಅನೇಕ ಭಾಗಗಳಲ್ಲಿ ಸಾಗರಗಳ ಬಣ್ಣವು ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ಬದಲಾಗುತ್ತಿದ್ದು, ಇದಕ್ಕೆ ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ ಎಂದು ಪ್ರತಿಷ್ಠಿತ ವಿಜ್ಞಾನ ಜರ್ನಲ್ ನೇಚರ್ ವರದಿ ಮಾಡಿದೆ.
ಪ್ರಪಂಚದ ಅರ್ಧದಷ್ಟು ಸಾಗರಗಳು ಅಂದರೆ ಸುಮಾರು 56% ಪ್ರಮಾಣ ಕಳೆದ 20 ವರ್ಷಗಳಲ್ಲಿ ತಮ್ಮ ಬಣ್ಣವನ್ನು ಬದಲಾಯಿಸಿವೆ. ಕಳೆದ 20 ವರ್ಷ ಗಳಿಂದಲೂ ನಡೆಸಿದ ಉಪಗ್ರಹ ಆಧಾರಿತ ಚಿತ್ರಗಳ ಅಧ್ಯಯನದಿಂದ ಇಂತಹ ತೀರ್ಮಾನಕ್ಕೆ ಬರಲಾಗಿದೆ
ವಿಷಾದವೆಂದರೆ ಹಸಿರು ಬಣ್ಣಕ್ಕೆ ತಿರುಗಿರುವ ಸಾಗರಗಳ ಒಟ್ಟು ವಿಸ್ತೀರ್ಣವು ಭೂಮಿಯ ಮೇಲಿನ ಒಟ್ಟು ಭೂಪ್ರದೇಶಕ್ಕಿಂತ ಹೆಚ್ಚಾಗಿದೆ. ವಿವಿಧ ದೇಶಗಳ ವಿಜ್ಞಾನಿಗಳು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವರದಿಯನ್ನು ಪ್ರಕಟಿಸಲಾಗಿದೆ.
ಇನ್ನು ಸಮುದ್ರ ಜೀವಿಯಾಗಿರುವ ಪ್ಲ್ಯಾಂಕ್ಟನ್ ಪ್ರಮಾಣದಲ್ಲಿ ಹೆಚ್ಚಳ, ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗಿರುವ ಶಾಖವು ಈ ಬದಲಾವಣೆಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ.
ಉದಾಹರಣೆಗೆ ಸಾಗರಗಳ ಆಳವಾದ ನೀಲಿ ನೀರು ಜೀವಿಗಳ ಅನುಪಸ್ಥಿತಿಯನ್ನು ಸೂಚಿಸುತ್ತದೆ. ಆದರೆ ಹಸಿರು ನೀರು ಹಸಿರು ವರ್ಣದ್ರವ್ಯ ಕ್ಲೋರೊಫಿಲ್ ಅನ್ನು ಒಳಗೊಂಡಿರುವ ಫೈಟೊಪ್ಲಾಂಕ್ಟನ್ ಎಂಬ ಸಸ್ಯದಂತಹ ಸೂಕ್ಷ್ಮಜೀವಿಗಳ ಅಸ್ತಿತ್ವ ಸೂಚಿಸುತ್ತದೆ. ಫೈಟೊಪ್ಲಾಂಕ್ಟನ್ ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತವೆ ಮತ್ತು ದ್ಯುತಿಸಂಶ್ಲೇಷಣೆಯ ಮೂಲಕ ಆಹಾರ ತಯಾರಿಸಲು ಕಾರ್ಬನ್ ಡೈಆಕ್ಸೈಡ್ನ್ನು ಬಳಸುತ್ತವೆ. ಹೀಗಾಗಿ ಫೈಟೊಪ್ಲಾಂಕ್ಟನ್ಗಳು ಸಾಗರಗಳಲ್ಲಿ ಆಹಾರ ಜಾಲದ ಅಡಿಪಾಯವನ್ನು ರೂಪಿಸುತ್ತವೆ.
ಒಟ್ಟಿನಲ್ಲಿ ಸಮುದ್ರ ಆಹಾರ ಸರಪಳಿಯ ಅಸ್ತಿತ್ವ ಮತ್ತು ಉಳಿವಿಗೆ ಪ್ಲ್ಯಾಂಕ್ಟನ್‌ಗಳು ಕಾರಣ ಆಗಿದ್ದರು ಕೂಡ ಪ್ಲಾಂಕ್ಟನ್‌ನಲ್ಲಿನ ಬದಲಾವಣೆಗಳು ಇಂಗಾಲವನ್ನು ಹೀರಿಕೊಳ್ಳುವ ಸಾಗರದ ಸಾಮರ್ಥ್ಯವನ್ನು ಬದಲಾಯಿಸುವ ಸಾಧ್ಯತೆ ಹೊಂದಿದೆ. ಇದು ಹಸಿರು ಬಣ್ಣವನ್ನು ನೀಡುವ ವರ್ಣದ್ರವ್ಯವಾಗಿರುವ ಕಾರಣ ಸಾಗರಗಳು ಹಸಿರು ಬಣ್ಣದಲ್ಲಿ ಗೋಚರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ .
ಇದು ಸಾಗರಗಳು ಹಸಿರುಮನೆ ಅನಿಲಗಳಿಂದ ಉಂಟಾದ ಶಾಖದ ಸುಮಾರು 90% ಅನ್ನು ಹೀರಿಕೊಳ್ಳುತ್ತವೆ ಮತ್ತು ಇದೇ ಕಾರಣಕ್ಕೆ ನೀರಿನ ಮೇಲ್ಮೈ ಬಿಸಿಯಾಗುತ್ತದೆ. ಇದರ ಪರಿಣಾಮ ಸಮುದ್ರದ ಜೊತೆಗೆ ಭೂಮಿ ಮೇಲೂ ಪ್ರಭಾವ ಕಂಡುಬರುತ್ತದೆ.
ಜೊತೆಗೆ ಹಿಮನದಿಗಳು ಕರಗುತ್ತಿರುವ ಕಾರಣ ಸಮುದ್ರ ಮಟ್ಟವು ಸಹ ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇದು ಸಾಗರಗಳಲ್ಲಿ ಆಮ್ಲಜನಕದ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ದೊಡ್ಡ ಪ್ರಮಾಣದಲ್ಲಿ ಮೀನುಗಳ ಸಾವಿಗೆ ಕಾರಣವಾಗುತ್ತದೆ. ಒಟ್ಟಾರೆ ಜಾಗತಿಕ ತಾಪಮಾನ ಸರಪಳಿಯಂತೆ ಭೂಮಿ ಮೇಲಿನ ಎಲ್ಲಾ ಜೀವಿಗಳಿಗೆ ಕಂಟಕವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ಸಾಗರಗಳ ಬಣ್ಣ ಬದಲಾವಣೆ ಕುರಿತು ಸಂಶೋಧನೆಯ ನೇತೃತ್ವ ವಹಿಸಿರುವ ವಿಜ್ಞಾನಿಗಳು ಈ ಬಗ್ಗೆ ಮಾತನಾಡಿ, “ವಾಸ್ತವವಾಗಿ ಸಾಗರಗಳ ಬಣ್ಣ ಬದಲಾವಣೆಯಾಗುತ್ತಿದೆ. ಇದು ಭವಿಷ್ಯದ ಅಪಾಯದ ಸೂಚನೆ. ಈ ಬದಲಾವಣೆಗಳು ನಮ್ಮ ಹವಾಮಾನಕ್ಕೆ ಮಾನವ-ಪ್ರೇರಿತ ಬದಲಾವಣೆಗಳೊಂದಿಗೆ ಸ್ಥಿರವಾಗಿವೆ. ಸಮುದ್ರ ಪರಿಸರ ವ್ಯವಸ್ಥೆಗಳ ಮೇಲೆ ಬಣ್ಣ ಬದಲಾವಣೆಯ ಪರಿಣಾಮವನ್ನು ನಾವು ಇನ್ನೂ ವಿಸ್ತಾರ ವಾಗಿ ಅಧ್ಯಯನ ಮಾಡಬೇಕಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಶ್ರೀ ಗಂಧದಿಂದ ನಿಮ್ಮ ಮುಖದ ಕಾಂತಿ ಅದ್ಭುತವಾಗಿ ಮಿಂಚುತ್ತೆ!!! ಈ ರೀತಿ ಪೇಸ್ಟ್ ಮಾಡಿ, ಮುಖದ ಅಂದ ಹೆಚ್ಚಿಸಿ!!!