ಚಿಕ್ಕಮಗಳೂರಿನಲ್ಲಿ ಊರು ಬಿಟ್ಟ ಒಂದೇ ಗ್ರಾಮದ 18 ಕುಟುಂಬ!! ಅಡಿಕೆ ಬೆಳೆದರೆ ಹೀಗೂ ಆಗುತ್ತದೇ??

Chikmagalur news 18 families from the same village left the village in Chikkamagalur

 

Chikmagalur: ಅತೀ ನಂಬಿಕೆಯ ಆದಾಯದೊಂದಿಗೆ, ಉದ್ಯೋಗ ಸೃಷ್ಟಿಯ ಅಡಿಕೆ ಕೃಷಿ ಹಲವಾರು ತಲೆಮಾರುಗಳಿಂದಲೂ ಮಲೆನಾಡು, ಕರಾವಳಿಯಲ್ಲಿ ಬೆಳೆದು ಬಂದ ಆದಾಯಕರ ಬೆಳೆ. ಮಹಾಮಾರಿ ಕೊರೋನದಿಂದ ತತ್ತರಿಸಿದ ಬಳಿಕ ಅಡಿಕೆ ಬೆಲೆ ಏರಿಕೆಯಾಗಿದ್ದು ಮಾರುಕಟ್ಟೆಯಲ್ಲಿ ಇಂದಿಗೂ ಅಗ್ರಸ್ಥಾನ ಪಡೆದು ನಿಂತಿದೆ. ಈ ನಡುವೆ ಮಳೆ, ರೋಗದಿಂದ ರೈತ ಕಂಗಾಲಾಗಿದ್ದು ಊರು ಬಿಡುವ ಮಟ್ಟಕ್ಕೆ ಅಡಿಕೆ ಬೆಳೆ ಕೈಕೊಟ್ಟಿದೆ ಎನ್ನುವ ಸುದ್ದಿಯೊಂದು ರೈತರಲ್ಲಿ ಭೀತಿ ಮೂಡಿಸಿದೆ.

ವಾಣಿಜ್ಯ ಬೆಳೆಯಾಗಿ ಆದಾಯದ ಮೂಲವಾಗಿರುವ, ಹಲವಾರು ಕುಟುಂಬಗಳ ಬದುಕಾಗಿರುವ ಅಡಿಕೆ ಕೃಷಿಗೆ ಇತ್ತೀಚಿನ ದಿನಗಳಲ್ಲಿ ರೋಗದ ಬಾಧೆ ಬಾಧಿಸಿದ್ದು, ಬೆಳೆ ನಾಶದ ನಿಯಂತ್ರಕ್ಕಾಗುವ ಔಷಧಿಗಳೇ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.

ಮಲೆನಾಡು ಚಿಕ್ಕಮಗಳೂರು (Chikmagalur) ಜಿಲ್ಲೆಯ ಕೊಪ್ಪ, ಕಳಸ, ಶೃಂಗೇರಿ ಮುಂತಾದ ಕಡೆಗಳಲ್ಲಿ ನಿರಂತರವಾಗಿ ಅಡಿಕೆ ಬೆಳೆಯ ಮೇಲೆ ಎಲೆಚುಕ್ಕೆ ರೋಗ ಕಾಡಿದ್ದು, ಕಣ್ಣ ಮುಂದೆಯೇ ಕೃಷಿ ನಾಶವಾಗುತ್ತಿರುವುದನ್ನು ಕಂಡ ಕೃಷಿ ಕುಟುಂಬ ಸಂಪೂರ್ಣ ಕುಗ್ಗಿದ್ದು, ಅದೇ ಆದಾಯ ನಂಬಿದ್ದ ಹಲವು ಕುಟುಂಬಗಳು ಜಮೀನು ಮಾರಿ ಪಟ್ಟಣದತ್ತ ಹೆಜ್ಜೆ ಇಟ್ಟಿದೆ, ಇನ್ನೂ ಹಲವರು ಪರ್ಯಾಯ ಕೃಷಿಯತ್ತ ಮನಸ್ಸು ಮಾಡಿದ್ದಾರೆ.

ಊರು ಬಿಟ್ಟ ಒಂದೇ ಗ್ರಾಮದ 18 ಕುಟುಂಬ

ನಿರಂತರ ಬೆಳೆ ನಾಶದಿಂದ ಸೋತ ಜಿಲ್ಲೆಯ ಒಂದೇ ಗ್ರಾಮದ 18 ಕುಟುಂಬಗಳು ಜಮೀನು ಮಾರಿ ಪಟ್ಟಣ ಸೇರಿದ ಸುದ್ದಿಯಾಗಿದೆ.ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಿನ ಕೊಡಿಗೆ ಗ್ರಾಮದ ಸುಮಾರು 40 ಕುಟುಂಬಗಳ ಪೈಕಿ ಈಗಾಗಲೇ 18 ಕುಟುಂಬ ಊರು ಬಿಟ್ಟಿದೆ.ಅರ್ಧಕ್ಕೇ ಕೈಕೊಟ್ಟ ಮಳೆ, ಹಾಗೂ ರೋಗಕ್ಕೆ ತುತ್ತಾದ ಬೆಳೆಯಿಂದ ಕಂಗಾಲಾದ ರೈತಾಪಿ ಕುಟುಂಬ ಆದಾಯ ಹುಡುಕಿ ಅರ್ಧ ಬೆಲೆಗೆ ಕೃಷಿ ಜಮೀನು ಮಾರುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಪುತ್ತೂರು : ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಹೃದಯಾಘಾತದಿಂದ ನಿಧ‌ನ

Leave A Reply

Your email address will not be published.