Chandrayaan -3: ಚಂದ್ರಯಾನದ ಯಶಸ್ಸಿಗೆ ಕ್ಷಣಗಣನೆ, ಚಂದ್ರನ ಸನ್ನಿಧಿಯ ನೇರ ಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
chandrayaan-3 Countdown to the success of Chandrayaan, click here for live video
Chandrayaan-3: ಕ್ಷಣಗಣನೆ ಆರಂಭವಾಗಿದೆ. ತೀರದ ಕುತೂಹಲದ ಜತೆ ಆತಂಕ ಬೆರೆತ ಕಣ್ಣುಗಳು ಈಗಾಗಲೇ ಟಿವಿಯ ರಿಮೋಟ್ ಕೈಯಲ್ಲಿ ಹಿಡಿದುಕೊಂಡು ಕೂತಿದ್ದಾರೆ. ಕ್ಷಣ ಕ್ಷಣಕ್ಕೂ ನಿರೀಕ್ಷೆಗಳು ಜಾಸ್ತಿ ಆಗುತ್ತಿದೆ. ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸದ ಜೊತೆ ಒಂದಷ್ಟು ಉದ್ವೇಗದ ಭಾವ. ಇವತ್ತು ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ಕಾರಣ ಚಂದ್ರಯಾನ 3(chandrayaan -3). ಚಂದ್ರಯಾನ ಅಥವಾ ಅಂತರಿಕ್ಷಕ್ಕೆ ಸಾಗುವ ಯಾವುದೇ ವಿದ್ಯಮಾನ ಯಾವುದೇ ದೇಶದಲ್ಲಿ ನಡೆದರೂ, ಅದನ್ನು ಒಂದು ವಿಸ್ಮಯವೆಂಬಂತೆ ಒಂದು ಸಾಧನೆ ಎಂಬಂತೆ ಬಗೆಯಲಾಗುತ್ತದೆ.
ಈ ಸಂದರ್ಭದಲ್ಲಿ ಅವತ್ತು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ನಂತರ ಗಗನಯಾತ್ರಿ ನೀಲ್ ಆರ್ಮ ಸ್ಟ್ರಾಂಗ್ ಉದ್ಘರಿಸಿದ ಒಂದು ಮಾತು ನೆನಪಾಗುತ್ತದೆ. ” ಇದು ಮನುಷ್ಯನಿಗೆ ಒಂದು ಸಣ್ಣ ಹೆಜ್ಜೆ ಆದರೆ ಮನುಕುಲಕ್ಕೆ ಒಂದು ಬಹುದೊಡ್ಡ ಹೆಜ್ಜೆ ಗುರುತು ” ಎಂದು ಆತ ಅವತ್ತು ಸಂತಸ ಉಕ್ಕಿ ಬಂದು ಹೇಳಿದ್ದರು. ಇಂದು ಅಂಥದ್ದೇ ಖುಷಿಯ ಮತ್ತು ಹೆಮ್ಮೆಯ ದಿನ ಭಾರತಕ್ಕೆ ಮಾತ್ರವಲ್ಲ, ಇಡೀ ಮನು ಕುಲಕ್ಕೆ.
ಈ ಸಂದರ್ಭದಲ್ಲಿ ಚಂದ್ರನ ಎಡೆಗೆ ಈ ತನಕ ಕೈಗೊಂಡ ಪ್ರಯತ್ನಗಳು ಮತ್ತು ಅವುಗಳಲ್ಲಿ ಕಂಡ ಯಶಸ್ಸುಗಳ ಬಗೆಗೆ ಒಂದು ಬುಲ್ಲೆಟ್ ಟಿಪ್ಪಣಿ ಕೊಡುತ್ತಿದ್ದೇವೆ.
ಚಂದ್ರನನ್ನು ಅಧ್ಯಯನ ಮಾಡಲು ಈವರೆಗೂ 146 ಪ್ರಯತ್ನಗಳು ನಡೆದಿದೆ. ಅವುಗಳ ಪೈಕಿ 16 ಚಂದ್ರಯಾನ ಇವಳು ಮಾತ್ರ ಸಫಲವಾಗಿವೆ. ಮೊದಮೊದಲು ರಷ್ಯಾ ಮತ್ತು ಅಮೆರಿಕ ನಡುವೆ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಸ್ಪರ್ಧೆ ಇತ್ತು. ಬಳಿಕ ಅಮೆರಿಕ ರಷ್ಯಾ ಜೊತೆ ಚೀನಾ ಜಪಾನು ಕೂಡ ಬಾಹ್ಯಾಕಾಶ ಸಂಶೋಧನೆಗೆ ಆಸಕ್ತಿ ತೋರಿದ ರಾಷ್ಟ್ರಗಳು. ಭಾರತ ಕೂಡ ತನ್ನ ಆರ್ಥಿಕ ಕಷ್ಟಗಳ ನಡುವೆಯೂ ಅಂತರಿಕ್ಷಯಾನ ಮತ್ತು ಅಧ್ಯಯನಕ್ಕೆ ತನ್ನದೇ ಆದ ಪ್ರಯತ್ನ ಮತ್ತು ಕೊಡುಗೆಯನ್ನು ನೀಡಿದೆ.
1950 ರ ದಶಕದಲ್ಲಿ ಶುರುವಾದ ಚಂದ್ರನ ಯೋಜನೆಗಳು ಮಹತ್ತರ ಫಲಿತಾಂಶವನ್ನು ನೀಡಿದೆ. ಅಮೆರಿಕವು 59 ಪ್ರಯತ್ನಗಳನ್ನು ನಡೆಸಿ 39 ಬಾರಿ ಯಶಸ್ಸು ಕಂಡಿದೆ. ಆದರೆ ರಷ್ಯಾ 58 ಪ್ರಯತ್ನ ಮಾಡಿ 18 ರಲ್ಲಿ ಮಾತ್ರ ಸಫಲತೆಯನ್ನು ಕಂಡುಕೊಂಡಿದೆ. ಉಳಿದಂತೆ ಚೀನಾವು 8 ಪ್ರಯತ್ನಗಳಲ್ಲಿ 4 ಯೋಜನೆಗಳು ಯಶಸ್ವಿಯಾಗಿವೆ ಹಾಗೂ ಜಪಾನಿನ 6 ರಲ್ಲಿ 3 ಚಂದ್ರಯಾನ ಯೋಜನೆಗಳು ಸಕ್ಸಸ್ ಪಡೆದುಕೊಂಡಿದೆ.
ಭಾರತವು ಎರಡು ಪ್ರಯತ್ನಗಳಲ್ಲಿ ಒಂದು ಪ್ರಯತ್ನದಲ್ಲಿ ಯಶಸ್ವಿ ಚಂದ್ರಯಾನ ಮಾಡಿದೆ. ಈಗ ನಡೆಯುತ್ತಿರುವುದು ಮೂರನೇ ಪ್ರಯತ್ನ. ಉಳಿದಂತೆ ಇಸ್ರೇಲ್, ದಕ್ಷಿಣ ಕೊರಿಯಾ, ಇಟಲಿ ಯುಎಇ, ಯುರೋಪಿಯನ್ ಒಕ್ಕೂಟ ಲುಕ್ಸೆಮ್ಬರ್ಗ್ ಇತ್ಯಾದಿ ರಾಷ್ಟ್ರಗಳು ಚಂದ್ರಯಾನದ ಪ್ರಯತ್ನದಲ್ಲಿ ಯಶಸ್ ಕಂಡ ರಾಷ್ಟ್ರಗಳು. ಇವರಲ್ಲಿ ಅಮೆರಿಕಾ ರಷ್ಯ ಮತ್ತು ಚೀನಾ ದೇಶಗಳು ಈಗಾಗಲೇ ತನ್ನ ನೌಕೆಯನ್ನು ಚಂದ್ರನ ಮಣ್ಣಿನಲ್ಲಿ ಇಳಿಸಿ ತಮ್ಮ ರಾಷ್ಟ್ರದ ಧ್ವಜ ಊರಿ ಬೀಗಿವೆ.
ಆದರೆ ಎಲ್ಲ ರಾಷ್ಟ್ರಗಳನ್ನು ಮೀರಿ ಅಮೇರಿಕಾ ಅನ್ಯ ಉಪಗ್ರಹ ಒಂದರ ಮೇಲೆ ನೌಕೆ ಇಳಿಸಿದ್ದಲ್ಲದೆ ಮೂರ್ನಾಲ್ಕು ಬಾರಿ ತನ್ನ ಮನುಷ್ಯರನ್ನು ಕಳಿಸಿದೆ. ಇವರಿಗೆ ಚಂದ್ರನಲ್ಲಿ 14 ಮಂದಿ ಪಾದಾರ್ಪಣೆ ಮಾಡಿದ್ದಾರೆ. 1950 ರಲ್ಲಿ ಪ್ರಾರಂಭವಾದ ಅಂತರಿಕ್ಷಾ ಅಧ್ಯಯನ ಮತ್ತು ಮಾನವ ಸಹಿತ ಚಂದ್ರಯಾನ ಸಾವಿರದ ಒಂಬೈನೂರ ಎಪ್ಪತ್ತೆರಡರವರೆಗೆ ಹಲವು ರಾಷ್ಟ್ರಗಳ ತುರುಸಿನ ಸ್ಪರ್ಧೆಯೊಂದಿಗೆ ನಡೆಯಿತು. ತದನಂತರ ಅಮೆರಿಕಾ ಮುಂದಿನ ಚಂದ್ರಯಾನದ ಪ್ರಾಜೆಕ್ಟ್ ಗಳಿಗೆ ಹಣ ಬಿಡುಗಡೆ ಮಾಡುವುದನ್ನು ಕಡಿಮೆ ಮಾಡಿತು. ಅಲ್ಲಿಂದ ಮತ್ತೆ ಚಂದ್ರಯಾನ ನಡೆಯದೆ, ಇದೀಗ ಬರೋಬ್ಬರಿ ಐವತ್ತು ವರ್ಷಗಳ ಗ್ಯಾಪ್ ಸೃಷ್ಟಿಯಾಗಿ ಹೋಯಿತು.
ಈಗ 50 ವರ್ಷಗಳ ಹಿಂದೆ ಚಂದ್ರನ ಮೇಲೆ ಕಾಲಿಟ್ಟು ಬಂದ ನಂತರ ಬರುವ ವರ್ಷ 2024 ರಂದು ಮತ್ತೆ ಅಮೆರಿಕ ಮಾನವ ಸಹಿತ ಗಗನ ನೌಕೆಯನ್ನು ಚಂದ್ರನ ಮೇಲೆ ಇಳಿಸಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. 2025 ನೇ ಇಸವಿಯಲ್ಲಿ ಮನುಷ್ಯ ಸಹಿತ ರಾಕೆಟ್ ಭಾರತದ ನೆಲವನ್ನು ಬಿಟ್ಟು ಚಂದನದ ದಾಪುಗಾಲು ಹಾಕಿ ಅಲ್ಲಿ ಭಾರತದ ಭದ್ರ ಹೆಜ್ಜೆ ಗುರುತುಗಳನ್ನು ಮತ್ತು ಧ್ವಜವನ್ನು ಊರಲಿದೆ.
ಇದನ್ನೂ ಓದಿ: ಚಂದ್ರ ಮತ್ತು ಚಂದ್ರಯಾನದ ಕುರಿತ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಗುಟ್ಟುಗಳು !