Men Health Tips: ಪುರುಷರೇ, ಮಲಗುವ ಮೊದಲು ಇದರ ಕಾಳಜಿ ವಹಿಸಿ, ನಿಮ್ಮ ದಾಂಪತ್ಯ ಜೀವನ ಸೂಪರ್‌ ಆಗಿರುತ್ತೆ!

Relationship tips Men health tips if men ensure these things before they go to bed

Men Health Tips: ಲೈಂಗಿಕ ಸುಖ ಎನ್ನುವುದು ವೈವಾಹಿಕ ಜೀವನದ ಒಂದು ಭಾಗ. ಪ್ರತಿಯೊಬ್ಬರು ವಿವಾಹವಾದ ಬಳಿಕ ಲೈಂಗಿಕ ಸುಖ ಬಯಸುವರು. ಆದರೆ ಕೆಲವರಿಗೆ ಇದು ಸಿಗದೆ ಇರಬಹುದು. ಇದಕ್ಕೆ ನಾನಾ ರೀತಿಯ ಕಾರಣಗಳು ಇರಬಹುದು. ಅದಲ್ಲದೆ ಪುರುಷರನ್ನು ದೀರ್ಘಕಾಲದ ಒತ್ತಡ ಅಥವಾ ಆತಂಕವು ಫರ್ಟಿಲಿಟಿ ಉತ್ಪಾದನೆಯನ್ನು ದುರ್ಬಲವಾಗಿಸುತ್ತದೆ ಮತ್ತು ಲೈಂಗಿಕ ತೃಪ್ತಿಯ ಪ್ರಜ್ಞೆಯನ್ನು ಕಡಿಮೆ ಮಾಡುತ್ತದೆ.

ಇನ್ನು ಜನನಾಂಗ ಸರಿಯಾಗಿ ನಿಮಿರದಿರುವುದು ಅಥವಾ ಅಕಾಲಿಕ ಸ್ಖಲನದಂತಹ ಸಮಸ್ಯೆಗಳು ಅನೇಕ ದಂಪತಿಗಳ ವೈಯಕ್ತಿಕ ಜೀವನದಲ್ಲಿ ವಿನಾಶವನ್ನು ಉಂಟುಮಾಡಬಹುದು. ಇದಕ್ಕೆ ಹೆಚ್ಚಾಗಿ ಔಷಧಿಗಳ ಅಗತ್ಯವಿರುವುದಿಲ್ಲ ಇದರ ಹೊರತು ಉತ್ತಮ ಸಮಾಲೋಚನೆ ಸಾಕಾಗುತ್ತದೆ.

ಅಂದರೆ ವಿವಾಹಿತ ಪುರುಷರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲದಿದ್ದರೆ, ಹದಗೆಡುವ ಆರೋಗ್ಯದಿಂದ ಅವರ ವೈವಾಹಿಕ ಜೀವನವೇ ಹಾಳಾಗಬಹುದು. ಇದೇ ಕಾರಣದಿಂದ ಆರೋಗ್ಯ ತಜ್ಞರು ವಿವಾಹಿತ ಪುರುಷರಿಗೆ ಕೆಲ ಸಲಹೆಗಳನ್ನು ಅನುಸರಿಸಲು ಸಲಹೆ (Men Health Tips) ನೀಡುತ್ತಾರೆ. ಇದರಿಂದ ಅವರ ಆರೋಗ್ಯದ ಜೊತೆಗೆ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ.

ತಜ್ಞರ ಪ್ರಕಾರ ನಿತ್ಯ ಸಾಕಷ್ಟು ನಿದ್ರೆ ಪಡೆಯದ ಪುರುಷರು ಅತಿಯಾದ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ನಿದ್ರಾಹೀನತೆ ಅಥವಾ ಇನ್ಸೋಮೆನಿಯಾ ಸಮಸ್ಯೆ ಕಾಡಬಹುದು. ಆದ್ದರಿಂದ, ವೈವಾಹಿಕ ಜೀವನವನ್ನು ಸುಖಮಯವಾಗಿಸಲು ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು ಅವಶ್ಯಕ.

ಇನ್ನು ಒತ್ತಡದ ಕಾರಣ ವಿವಾಹಿತ ಪುರುಷರ ರಾತ್ರಿ ನಿದ್ರೆಗೆ ಅಡಚಣೆ ಎದುರಾಗಬಹುದು. ಇದಕ್ಕಾಗಿ ನೀವು ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು. ಇದು ನಿಮ್ಮ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಮುಖ್ಯವಾಗಿ ವಿವಾಹಿತ ಪುರುಷರು ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲಗಲು ಪ್ರಯತ್ನಿಸಬೇಕು ಮತ್ತು ಮರು ದಿವಸ ಬೆಳಗ್ಗೆ ಒಂದೇ ಸಮಯಕ್ಕೆ ಏಳಬೇಕು. ಇದನ್ನು ಕೆಲ ದಿನಗಳವರೆಗೆ ಅನುಸರಿಸಿದರೆ, ನಿಮ್ಮ ನಿದ್ರೆಯ ಪ್ಯಾಟರ್ನ್ ಸರಿಯಾಗುತ್ತದೆ.

ಮಲಗುವ ಮುನ್ನ ಪುರುಷರು ತುಂಬಾ ಹೆವಿ ಅಥವಾ ಲೈಟ್ ಆಹಾರವನ್ನು ತೆಗೆದುಕೊಳ್ಳಬಾರದು. ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಮಲಗುವ 2 ಗಂಟೆಗಳ ಮೊದಲು ನೀವು ಆಹಾರವನ್ನು ಸೇವಿಸಬೇಕು.

ವಿವಾಹಿತ ಪುರುಷರು ಮಲಗುವ ಮುನ್ನ ತಮ್ಮ ಕೋಣೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದು ಆರಾಮವಾಗಿ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ.

ರಾತ್ರಿ ಹೊತ್ತು ನಿಮಗೆ ನಿದ್ರೆ ಬರುತ್ತಿಲ್ಲ ಎಂದಾದರೆ, ನೀವು ನಿಮ್ಮ ಹಗಲಿನಲ್ಲಿ ಮಲಗುವ ಅಭ್ಯಾಸದ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಇದು ರಾತ್ರಿಯಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು.

ಇನ್ನು ಧೂಮಪಾನ ಮತ್ತು ಮದ್ಯಪಾನ ಇವುಗಳಿಂದ ದೂರವಿರುವುದರಿಂದ ನೀವು ನಿಧಾನವಾಗಿ ನಿಮ್ಮ ಲೈಂಗಿಕತೆಯ ರಸಿಕತೆಯನ್ನು ಅನುಭವಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: Prakash Raj: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ನಟ ಪ್ರಕಾಶ್‌ ರಾಜ್‌ ಶೇರ್‌ ಮಾಡಿದ ಚಿತ್ರ ಯಾವುದು ಗೊತ್ತೇ?

Comments are closed.