Home latest Uttar Pradesh: ಹಿಂದು-ಮುಸ್ಲಿಂ ಲವ್‌ ಸ್ಟೋರಿ; ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಎಸ್ಕೇಪ್‌, ಹೆತ್ತವರ...

Uttar Pradesh: ಹಿಂದು-ಮುಸ್ಲಿಂ ಲವ್‌ ಸ್ಟೋರಿ; ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಎಸ್ಕೇಪ್‌, ಹೆತ್ತವರ ಕೊಲೆ!

Uttar Pradesh
Image credit: Odisha TV

Hindu neighbor gifts plot of land

Hindu neighbour gifts land to Muslim journalist

Uttar Pradesh: ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಪ್ರೀತಿಸುತ್ತಿದ್ದು, ಅಚಾನಕ್ ಆಗಿ ಇವರಿಬ್ಬರು ಪರಾರಿಯಾಗಿದ್ದರು. ಮಗಳು ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿರುವ ವಿಚಾರ ತಿಳಿದ ಯುವತಿಯ ಹೆತ್ತವರು ಯುವಕನ ಪೋಷಕರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಸೀತಾಪುರದಲ್ಲಿ ನಡೆದಿದೆ. ಮೃತರನ್ನು ಅಬ್ಬಾಸ್ ಹಾಗೂ ಕಮರುಲ್ ನಿಶಾ ಎಂದು ಹೇಳಲಾಗಿದೆ.

ಅಬ್ಬಾಸ್ ಅವರ ಪಕ್ಕದ ಮನೆಯಲ್ಲಿ ಹಿಂದೂ ದಂಪತಿ ನೆಲೆಸಿದ್ದರು.
ಅಬ್ಬಾಸ್ ಅವರ ಮಗ ಶೌಕತ್ ಹಿಂದೂ ದಂಪತಿಗಳ ಪುತ್ರಿ ರೂಬಿಯನ್ನು ಪ್ರೀತಿಸುತ್ತಿದ್ದ. 2020ರಲ್ಲಿ ಇವರಿಬ್ಬರೂ ಪ್ರೇಮಿಗಳು ಪರಾರಿಯಾಗಿದ್ದರು. ಈ ಬಗ್ಗೆ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ರೂಬಿ ಅಪ್ರಾಪ್ತ ವಯಸ್ಕಳಾಗಿದ್ದ ಹಿನ್ನೆಲೆ ಯುವಕನ ವಿರುದ್ಧ ಪ್ರಕರಣ ದಾಖಲಿಸಿ, ಪೊಲೀಸರು ಶೌಕತ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಆನಂತರ ಎರಡೂ ಕುಟುಂಬಗಳ ನಡುವೆ ವೈಮನಸ್ಯ ಉಂಟಾಗಿತ್ತು.

ಹಲವು ಸಮಯ ಜೈಲಿನಲ್ಲಿದ್ದ ಶೌಕತ್ ಬಳಿಕ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದ. ಜೈಲಿನಿಂದ ಹೊರ ಬಂದ ಬಳಿಕ ಕಳೆದ ಜೂನ್‌ನಲ್ಲಿ ಶೌಕತ್ ಮತ್ತೆ ರೂಬಿಯನ್ನು ಅಪಹರಣ ಮಾಡಿದ್ದ. ನಂತರ ಆಕೆಯನ್ನು ಮದುವೆಯಾಗಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಂತರ ನೆರೆ ಮನೆಯವರು ಅಬ್ಬಾಸ್ ಕುಟುಂಬದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಂ ದಂಪತಿಯ ಮಗ ಹಿಂದೂ ಯುವತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕೆ ಈ ಯುವತಿಯ ಹೆತ್ತವರು ಯುವಕನ ಹೆತ್ತವರಿಗೆ ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಮಂಗಳೂರು: ರಸ್ತೆ ಮಧ್ಯೆ ನಶೆಯಲ್ಲಿ ಯುವಕನೋರ್ವ ಚೂರಿ ಹಿಡಿದು ಧಾಂದಲೆ!