ವಿಚಿತ್ರ! 31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾಕೆಗೆ ಹೆರಿಗೆಯಾದದ್ದು 92ನೇ ವಯಸ್ಸಿನಲ್ಲಿ!!!
China news interesting news a Chinese woman who pregnancy at 31 and delivered at 92
Pregnancy: ಮನುಷ್ಯರಲ್ಲಿ ಗರ್ಭ ಧರಿಸುವ ಪ್ರಕ್ರಿಯೆ ಎಂದಾಗ, ಮಗು ಹುಟ್ಟುವ (Baby Born) ಮೊದಲು 9 ತಿಂಗಳ ಕಾಲ ಅಂದರೆ 40 ವಾರಗಳ ಕಾಲ ತಾಯಿಯ (Mother) ಗರ್ಭದಲ್ಲಿ ಇರುತ್ತದೆ. ಆ 9 ತಿಂಗಳುಗಳ ಸಂದರ್ಭದಲ್ಲಿ, ಮಗುವಿನ ದೇಹದ ಅಂಗಾಗ ಮತ್ತು ಮಾನಸಿಕವಾಗಿಯೂ ಕ್ರಿಯಾತ್ಮಕ ಸಾಮರ್ಥ್ಯಗಳು ಅಭಿವೃದ್ಧಿಗೊಳ್ಳುತ್ತವೆ.
ಆದರೆ ಈ ನಿಯಮ ಮೀರಿ ಪ್ರಕೃತಿಯಲ್ಲಿ ಹಲವಾರು ರೀತಿಯ ಅಸಹಜ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಒಪ್ಪಲಾಗದ ಬದಲಾವಣೆಗಳು ಜೀವಸಂಕುಲದಲ್ಲಿ ನಡೆದಾಗ ಆಶ್ಚರ್ಯ ಎನಿಸುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಮಹಿಳೆ ಒಬ್ಬಳು ಈ ವಿಸ್ಮಯಕ್ಕೆ ಕಾರಣವಾಗಿದ್ದಾಳೆ.
ಇದೀಗ 31 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ, 92 ನೇ ವಯಸ್ಸಿನಲ್ಲಿ ಹೆರಿಗೆಯಾದ ಚೀನಾದ ಮಹಿಳೆಯ ಬಗ್ಗೆ ನೀವು ಕೇಳಲೇ ಬೇಕು. ಹೌದು, ಚೀನಾ ಮೂಲದ ಹುವಾಂಗ್ ಯಿಜುನ್ ಎಂಬ 92 ವರ್ಷದ ಮಹಿಳೆ ಲಿಥೋಪಿಡಿಯನ್‌ಗೆ ಜನ್ಮ ನೀಡಿರುವ ವಿಸ್ಮಯಕಾರಿ ಘಟನೆ ಸಂಭವಿಸಿದೆ.
ಹುವಾಂಗ್ ಯಿಜುನ್ 1948ರಲ್ಲಿ ಅವಳು 31 ವರ್ಷದವಳಿದ್ದಾಗ ಗರ್ಭಿಣಿಯಾಗಿರುವ (Pregnancy) ವಿಷಯ ತಿಳಿಯಿತು. ಆದರೆ, ವೈದ್ಯರು ಇದು ಫಲವತ್ತಾದ ಅಂಡಾಣು ತನ್ನ ಗರ್ಭದೊಳಗೆ ಇರಬೇಕಾದಂತೆ ಇಲ್ಲ ಎಂದಿದ್ದರು. ಸಾಮಾನ್ಯವಾಗಿ, ಅಪಸ್ಥಾನೀಯ ಗರ್ಭಾವಸ್ಥೆಯಲ್ಲಿ ಮೊಟ್ಟೆಯು ಫಾಲೋಪಿಯನ್ ಟ್ಯೂಬ್ಬಳಿಗೆ ಅಂಟಿಕೊಳ್ಳುತ್ತದೆ. ಆದರೆ, ಈಕೆಯ ಟ್ಯೂಬ್‌ಗಳ ಹೊರಗೆ ಅಂಟಿಕೊಂಡಿತ್ತು. ಇದನ್ನು ಕಿಬ್ಬೊಟ್ಟೆಯ ಅಪಸ್ಥಾನೀಯ ಎಂದು ಕರೆಯಲಾಗುತ್ತದೆ.
ಕಿಬ್ಬೊಟ್ಟೆಯ ಗರ್ಭಾವಸ್ಥೆಯು ಹುಟ್ಟುವ ತಾಯಿ ಮತ್ತು ಮಗುವಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಜನಿಸಿದ ಶಿಶುಗಳು ಹುಟ್ಟುವಾಗಲೇ ಶೇ.21ರಷ್ಟು ಸಮಸ್ಯೆಗಳನ್ನು ಹೊಂದಿರುತ್ತಾರೆ.
ಆದರೆ ಹುವಾಂಗ್ ಪ್ರಕರಣದಲ್ಲಿ ಹೊಟ್ಟೆಯಲ್ಲಿದ್ದ ಮಗು ತನ್ನ ದೇಹವನ್ನು ಹೊರಹಾಕಲು ಸಾಧ್ಯವಾಗದ ಗಾತ್ರಕ್ಕೆ ಬೆಳೆದಿದೆ. ಭ್ರೂಣವನ್ನು ಇಟ್ಟುಕೊಳ್ಳುವುದರಿಂದ ಮುಂದೆ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು.
ಆದರೆ ಆಕೆಗೆ ಶಸ್ತ್ರಚಿಕಿತ್ಸೆಯನ್ನು ಭರಿಸುವ ಮೊತ್ತ ಹೊಂದಿಸಲಾಗಲಿಲ್ಲ. ಇಂದಿನ ಕರೆನ್ಸಿಯಲ್ಲಿ ಸರಿಸುಮಾರು ಡಾಲರ್ 150 (ಸುಮಾರು ರೂ. 12,500) ಗೆ ಸಮನಾಗಿದೆ. ಆ ಸಮಯದಲ್ಲಿ ಆಕೆಯ ಕುಟುಂಬಕ್ಕೆ ಇದು ಅಗಾಧವಾದ ಮೊತ್ತವಾಗಿತ್ತು. ಹೀಗಾಗಿ ಆಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ.
ಆದರೆ ದೇಹವು ನೈಸರ್ಗಿಕವಾಗಿ ಹೊರಹಾಕಲು ತುಂಬಾ ದೊಡ್ಡದಾಗಿದ್ದರೆ, ಸತ್ತ ಅಂಗಾಂಶದ ಸುತ್ತಲೂ ಕ್ಯಾಲ್ಸಿಯಂ ನಿಕ್ಷೇಪಗಳು ರೂಪುಗೊಳ್ಳುತ್ತವೆ. ಮುಂದೆ ಈ ರೂಪಾಂತರವು ಕಲ್ಲಿನ ಮಗು ರಚನೆಗೆ ಕಾರಣವಾಯಿತು. ಅಂತಿಮವಾಗಿ 2009 ರಲ್ಲಿ 92 ನೇ ವಯಸ್ಸಿನಲ್ಲಿ ಅವರು 60 ವರ್ಷಗಳ ಕಾಲ ಭ್ರೂಣವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಚಲಿಸುತ್ತಿರುವ ಬಸ್‌ನಿಂದ ಕಳಚಿ ಬಿದ್ದ ಟಯರ್! ಮುಂದೇನಾಯ್ತು?
Comments are closed.