Home National Mumbai: ತನ್ನ ಬೆಕ್ಕಿನ ಜತೆ ಪಕ್ಕದ ಮನೆಯ ನಾಯಿ ಆಟ, ನಾಯಿಯ ಮೇಲೆ ಆಸಿಡ್ ಚೆಲ್ಲಿ...

Mumbai: ತನ್ನ ಬೆಕ್ಕಿನ ಜತೆ ಪಕ್ಕದ ಮನೆಯ ನಾಯಿ ಆಟ, ನಾಯಿಯ ಮೇಲೆ ಆಸಿಡ್ ಚೆಲ್ಲಿ ವಿಕೃತಿ ಮೆರೆದ ಮಹಿಳೆ

Mumbai

Hindu neighbor gifts plot of land

Hindu neighbour gifts land to Muslim journalist

Mumbai: ತನ್ನ ಸಾಕು ಬೆಕ್ಕಿನ ಜತೆ ಆಟವಾಡುತ್ತಿದ್ದ ನಾಯಿ ಮೇಲೆ ದ್ವೇಷದಿಂದ ಮಹಿಳೆಯೊಬ್ಬರು ಆ್ಯಸಿಡ್ ಎರಚಿದ ಭೀಕರವಾಗಿ ಮತ್ತು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಧಾರುಣ ಘಟನೆ ವರದಿಯಾಗಿದೆ.

ಈ ಅಮಾನವೀಯ ಘಟನೆಯು ಮುಂಬೈನ(Mumbai) ಮಾಳವಣಿ ಪ್ರದೇಶದಲ್ಲಿ ನಡೆದಿದ್ದು, ಶಬಿಸ್ತಾ ಸುಹೇಲ್ ಅನ್ಸಾರಿ ಎಂಬ 34 ವರ್ಷದ ಮಹಿಳೆಯನ್ನು ನಾಯಿ ಮೇಲೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಪೊಲೀಸರು ಇದೀಗ ಬಂಧಿಸಿದ್ದಾರೆ. ತಾನು ವಾಸಿಸುವ ಕಟ್ಟಡದಲ್ಲಿಯೇ ಇರುವ ಕುಟುಂಬದ ಪ್ರೀತಿಯಿಂದ ಬ್ರೌನಿ ಎಂಬ ನಾಯಿ ಒಂದನ್ನು ಸಾಕಿದ್ದರು. ಅದರ ಮೇಲೆ ಶಬಿಸ್ತಾ ಸುಹೇಲ್ ಅನ್ಸಾರಿ ಎಂಬ ಮಹಿಳೆ ಆಸಿಡ್ ಎರಚಿದ್ದಾಳೆ. ಇಡೀ ಘಟನೆಯು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಸಿಡ್ ದಾಳಿಯಲ್ಲಿ ನಾಯಿಗೆ ತೀವ್ರ ಗಾಯಗಳಾಗಿದ್ದು, ಅದನ್ನು ಚಿಕಿತ್ಸೆಗಾಗಿ ಪಶು ಚಿಕಿತ್ಸಾಲಯಕ್ಕೆ ಸಾಗಿಸಲಾಗಿದೆ. ಸಾಕು ನಾಯಿಯ ಎಡಗಣ್ಣು ಸಂಪೂರ್ಣ ಸುಟ್ಟು ಹೋಗಿದೆ. ಕುತ್ತಿಗೆ ಮತ್ತು ಕಾಲುಗಳು ಸುಟ್ಟಿವೆ.

Mumbai

ಈ ಸಾಕುನಾಯಿ ಬ್ರೌನಿ ತನ್ನ ಬೆಕ್ಕಿನೊಂದಿಗೆ ಆಟವಾಡುತ್ತಿದ್ದರಿಂದ ಮಹಿಳೆ ಅಸಮಾಧಾನಗೊಂಡಿದ್ದಳು. ಅವಳು ತನ್ನ ಬೆಕ್ಕಿನಿಂದ ನಿಮ್ಮ ನಾಯಿಯನ್ನು ದೂರವಿಡಿ ಎಂದು ಹಿಂದೆಯೂ ನಾಯಿಯ ಮಾಲೀಕರಿಗೆ ಎಚ್ಚರಿಕೆ ಕೂಡ ನೀಡಿದ್ದಳು ಎನ್ನಲಾಗಿದೆ. ಆದರೂ ನಾಯಿ ಬೆಕ್ಕುಗಳು ಮನುಷ್ಯರ ಜಗಳ ಅರಿಯದೆ ಆಟವಾಡುತ್ತಿದ್ದವು. ಅದನ್ನು ಅರಗಿಸಿಕೊಳ್ಳಲಾಗದ ಶಬಿಸ್ತಾ ಸುಹೇಲ್ ಅನ್ಸಾರಿ ನಾಯಿ ಮೇಲೆ ಆ್ಯಸಿಡ್ ಎರಚಿದ್ದಾಳೆ. ಪೊಲೀಸ್ ಮೂಲಗಳು ನೀಡಿದ ದೂರಿನ ಪ್ರಕಾರ, ಮಹಿಳೆಯ ಮೇಲೆ ಪ್ರಾಣಿಗೆ ನೀಡಿದ ಕ್ರೌರ್ಯ ಆರೋಪದ ಅಡಿ ಹಲವಾರು ಸೆಕ್ಷನ್ ಗಳಲ್ಲಿ ಕೇಸು ದಾಖಲಿಸಲಾಗಿದೆ.

ಸಾಕು ನಾಯಿಯ ಮೇ ಆಸಿಡ್ ಎರಚಿದ ಇಡೀ ಘಟನೆ ಅಲ್ಲಿನ ಕಟ್ಟಡದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳಲ್ಲಿ ಮಹಿಳೆ ನಾಯಿಯ ಬಳಿಗೆ ಬಂದು ಆಸಿಡ್ ಸುರಿಯುವುದನ್ನು ತೋರಿಸಿದೆ. ಆಗ ನಾಯಿ ನೋವಿನಿಂದ ಕೂಗಿ ಗೋಳಾಡುವುದು ಮತ್ತು ಓಡಿಹೋಗುವುದನ್ನು ಕೂಡ ಕ್ಯಾಮೆರಾದಲ್ಲಿ ಕಾಣಬಹುದಾಗಿದೆ.

https://www.instagram.com/p/CwCij0dsWV_/?utm_source=ig_embed&utm_campaign=embed_video_watch_again

ಇದನ್ನೂ ಓದಿ: New Research: ಮಾನವನ ಪ್ರಾಣ ಉಳಿಸಿದ ಹಂದಿ: ವೈದ್ಯ ಲೋಕದಲ್ಲೊಂದು ಬೆರಗಿನ ಬೆಳವಣಿಗೆ!