ಕಡಬ : ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಿಂದ ಚಿನ್ನ ,ಬೆಳ್ಳಿಯ ಆಭರಣ ,ಡಿವಿಆರ್,ಹಾರ್ಡ್ ಡಿಸ್ಕ್ ,ಮಾನಿಟರ್ ಕಳ್ಳತನ
ಕಡಬ: ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನ , ಬೆಳ್ಳಿಯ ಆಭರಣ ಹಾಗೂ ಸಿ ಸಿ ಕ್ಯಾಮರದ ಪರಿಕರಗಳನ್ನು ಕಳವು ಮಾಡಿದ್ದಾರೆ.
ಈ ಘಟನೆ ಶುಕ್ರವಾರ ಬೆಳಕಿಗೆ ಬಂದಿದ್ದು, ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್ ಎಂದಿನಂತೆ ಬೆಳಿಗ್ಗೆ ಪೂಜೆಗೆಂದು ದೇವಸ್ಥಾನದ ಬಾಗಿಲು ತೆರೆದಾಗ ಮುಖ್ಯದ್ವಾರದ ಚಿಲಕಕ್ಕೆ ಹಾನಿಯಾಗಿರುವುದು ಕಂಡುಬಂದಿದೆ.
ದೇವರ ಮೂರ್ತಿಗೆ ಹಾಕಲಾದ ಸುಮಾರು ಅಂದಾಜು 35000 ರೂಪಾಯಿಯ ಚಿನ್ನ ಮತ್ತು ಬೆಳ್ಳಿಯ ಅಭರಣ , ಸುಮಾರು 36000 ರೂಪಾಯಿಯ ಸಿಸಿ ಕ್ಯಾಮೆರಾದ ಡಿ ವಿ ಅರ್, ಹಾರ್ಡ್ ಡಿಸ್ಕ್ , ಟಿ ವಿ ಮಾನಿಟರ್ ಕಳ್ಳರು ಕದ್ದೊಯ್ದಿದ್ದಾರೆ.
ಈ ಕುರಿತು ಅರ್ಚಕ ರವಿಪ್ರಸಾದ್ ಭಟ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Comments are closed.