Canara Bank ATM robbery: ರಾತ್ರೋರಾತ್ರಿ ಬ್ಯಾಂಕ್ ದರೋಡೆ: ಕೆನರಾ ಬ್ಯಾಂಕ್ ಎಟಿಎಂ ಲೂಟಿ, ಗ್ಯಾಸ್ ಕಟ್ಟರ್ ಬಳಸಿ ಕೃತ್ಯ

Chikmagalur news Overnight Canara Bank ATM robbery using gas cutter in Chikmagalur

Canara Bank ATM robbery : ಮಧ್ಯರಾತ್ರಿ ಕಳ್ಳರು ಕರಾಮತ್ತು ತೋರಿಸಿ ಎಟಿಎಂ ಒಂದನ್ನು ಲೂಟಿ ಮಾಡಿ ಹಣದ ಜತೆ ಪರಾರಿ ಆಗಿದ್ದಾರೆ. ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂಯನ್ನು ದರೋಡೆ( Canara Bank ATM robbery) ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿದೆ.

 

ಮೊದಲು ಎಟಿಎಂ ಬಳಿ ಬಂದ ಕಳ್ಳರು ಸಿ.ಸಿ ಟಿ.ವಿಯನ್ನು ನಿಷ್ಕ್ರಿಯಗೊಳಿಸಿದ್ದರು. ನಂತರ ತಮ್ಮ ಚಳಕ ತೋರಿದ್ದಾರೆ. ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಅನ್ನು ತುಂಡರಿಸಿ ಎಟಿಎಂನಲ್ಲಿದ್ದ ಸುಮಾರು 14 ಲಕ್ಷ ಹಣ ಲೂಟಿ ಮಾಡಿ ಕಳ್ಳರು ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆನರಾ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರ ತಂಡ ಪರಿಶೀಲಿಸಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದರೋಡೆಕೋರರ ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.

ಇದನ್ನೂ ಓದಿ: RTI ನಿರ್ವಹಣೆ ಬಗ್ಗೆ ಬಂದಿದೆ ಹೊಸ ಸುತ್ತೋಲೆ: ಇನ್ನು ಮಾಹಿತಿ ಕೇಳೋದು ಮತ್ತಷ್ಟು ಸುಲಭ

Comments are closed.