food poison: ಹಲ್ಲಿ ಬಿದ್ದ ಆಹಾರ ಸೇವನೆ, ಅಸ್ವಸ್ಥಗೊಂಡ 30 ಮಂದಿ ವಿದ್ಯಾರ್ಥಿನಿಯರು

Vijaypur news food poison 30 students fall ill after consuming Midday meal

food poison: ಹಲ್ಲಿ ಬಿದ್ದಿದ್ದ ಆಹಾರ( food poison)ಸೇವಿಸಿದ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ತಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ರಕ್ಕಸಗಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ಹಾಸ್ಟೆಲಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ನಿನ್ನೆ ಮಧ್ಯಾಹ್ನ ವಿದ್ಯಾರ್ಥಿನಿಯರು ಶಾಲೆಯಿಂದ ಬಂದ ಮೇಲೆ ಊಟ ಮಾಡಿದ್ದರು. ಬಳಿಕ ಹಲ್ಲಿ ಬಿದ್ದ ವಿಷಯ ಹರಡಿ ಹಲವರು ಆತಂಕಕ್ಕೊಳಗಾದರು. ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಹಾಸ್ಟೇಲ್ ಗೆ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನವರು ಆತಂಕದ ಕಾರಣದಿಂದಲೇ ಅಸ್ವಸ್ಥ ಆಗಿದ್ದು ಎನ್ನಲಾಗಿದೆ.

ಮತ್ತೆ ಕೆಲವರನ್ನು ಅಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಈಗ ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ ಎಂದು ವೈದ್ಯಾಧಿಕಾರಿ ಡಾ. ಅನಿಲಕುಮಾರ ಶೇಗುಣಸಿ ತಿಳಿಸಿದ್ದಾರೆ. ಈಗ ಎಲ್ಲಾ ವಿದ್ಯಾರ್ಥಿನಿಯಾರ ಆರೋಗ್ಯ ಸ್ಥಿರವಾಗಿದೆ, ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ರಾತ್ರಿಯೇ ಸಮೀಪದ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ತಂಡ ಹಾಸ್ಟೆಲ್ ಗೆ ಧಾವಿಸಿದ್ದು ಅಸ್ವಸ್ಥ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಚಿಕಿತ್ಸೆ ನೀಡತೊಡಗಿದ್ದಾರೆ. ಸ್ವಚ್ಚತಾ ಕೊರತೆ ಇದಕ್ಕೆಲ್ಲ ಮೂಲ ಕಾರಣ ಎನ್ನಲಾಗಿದೆ. ಸ್ಥಳೀಯ ಗ್ರಾಮಸ್ಥರು ಹಾಸ್ಟೇಲಿಗೆ ಹೋಗಿ ಅಲ್ಲಿನ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದು ತಪ್ಪಿತಸ್ತರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Thalapathy Vijay: ನಟ ವಿಜಯ್ ಬಾಳಲ್ಲಿ ಇನ್ನೊಬ್ಬ ನಟಿಯ ಎಂಟ್ರಿ? ಡಿವೋರ್ಸ್ ವಿಷಯ ನಿಜನಾ??

Comments are closed.