Home latest Jammu and Kashmir: ಹಿಜ್ಬುಲ್‍ ಉಗ್ರ ಅಣ್ಣನಿಗೆ ತಮ್ಮನ ಟಕ್ಕರ್; ತಿರಂಗಾ ಹಾರಿಸಿ ದೇಶ ಭಕ್ತಿ...

Jammu and Kashmir: ಹಿಜ್ಬುಲ್‍ ಉಗ್ರ ಅಣ್ಣನಿಗೆ ತಮ್ಮನ ಟಕ್ಕರ್; ತಿರಂಗಾ ಹಾರಿಸಿ ದೇಶ ಭಕ್ತಿ ಪ್ರದರ್ಶಿಸಿದ ತಮ್ಮ!

Jammu and Kashmir

Hindu neighbor gifts plot of land

Hindu neighbour gifts land to Muslim journalist

Jammu and Kashmir: ಭಾರತದ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ, ಹಿಜ್ಬುಲ್ ಮುಖ್ಯಸ್ಥನ ಸಹೋದರ, ಜಮ್ಮು ಮತ್ತು ಕಾಶ್ಮೀರದ ತನ್ನ ಮನೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದು ಕಂಡುಬಂದಿದೆ. ಸಿನಿಮೀಯ ಎನ್ನಿಸುವ ಸತ್ಯ ಘಟನೆ ಜಮ್ಮು ಮತ್ತು ಕಾಶ್ಮೀರದ(Jammu and Kashmir) ಸೊಪೋರ್ ಎಂಬಲ್ಲಿಂದ ವರದಿಯಾಗಿದೆ.

ಈ ವಿಡಿಯೋದಲ್ಲಿ ಕಾಣಿಸುವಂತೆ ಹಿಜ್ಬುಲ್ ಭಯೋತ್ಪಾದಕ ಜಾವಿದ್ ಮಟ್ಟೂನ ಸಹೋದರ ರಯೀಸ್ ಮಟ್ಟೂ ತನ್ನ ಮನೆಯ ಕಿಟಕಿಯಿಂದ ಭಾರತದ ಧ್ವಜವನ್ನು ಬೀಸಿ ಪ್ರದರ್ಶಿಸುವುದನ್ನು ಕಾಣಬಹುದು.

ಫೈಸಲ್, ಸಾಕಿಬ್, ಮುಸೈಬ್ ಎಂದೂ ಕರೆಯಲ್ಪಡುವ ಜಾವಿದ್ ಮಟ್ಟೂ, ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ. ಗುಂಪಿಗೆ ಸಂಬಂಧಿಸಿದ ಸಕ್ರಿಯ ಭಯೋತ್ಪಾದಕ. ಭದ್ರತಾ ಸಂಸ್ಥೆಗಳ ಪಟ್ಟಿಯಲ್ಲಿ ಟಾಪ್ 10 ಟಾರ್ಗೆಟ್ ನಲ್ಲಿ ಅವನೂ ಸೇರಿದ್ದಾನೆ ಎನ್ನುವ ಮಾಹಿತಿ ಇದೆ. ಆದರೆ ಈಗ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 13 ರಿಂದ 15ರ ನಡುವೆ ‘ಹರ್ ಘರ್ ತಿರಂಗಾ’ದಲ್ಲಿ ಭಾಗವಹಿಸುವಂತೆ ಜನರನ್ನು ಕೇಳಿಕೊಂಡಿದ್ದಾರೆ. ಅದಕ್ಕೆ ಪೂರಕವೆಂಬಂತೆ ಈ ಭಯೋತ್ಪಾದಕನ ತಮ್ಮ ತಿರಂಗ ಧ್ವಜ ಹಾರಿಸುವ ಮೂಲಕ ಅಣ್ಣನಿಗೆ ತಿರುಗೇಟು ನೀಡಿದ್ದಾನೆ. ಆ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ತೊಡಗುವ ಕುಟುಂಬದವರು ದೇಶ ಭಕ್ತರು ಆಗಿರಲಿಕ್ಕಿಲ್ಲ ಎನ್ನುವುದಕ್ಕೆ ವಿರುದ್ಧವಾಗಿ ತಮ್ಮ ದೇಶದ ಪರ ನಿಂತಿದ್ದಾನೆ.

ನಿನ್ನೆ ಭಾನುವಾರ, ಶ್ರೀನಗರದಲ್ಲಿ ಮೆಗಾ ‘ತಿರಂಗಾ’ ರಾ್ಯಲಿಯನ್ನು ಆಯೋಜಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಯೋತ್ಪಾದಕ ಅಣ್ಣನ ತಮ್ಮ ರಾಷ್ಟ್ರಧ್ವಜ ಬೀಸಿ ಸುದ್ದಿಯಾಗಿರುವುದು.

ಇದನ್ನೂ ಓದಿ: 68 ರ ಅಜ್ಜಿಯ ಸಕತ್ ವೈಟ್ ಲಿಫ್ಟಿಂಗ್; ಜಿಮ್ ಟ್ರೈನರ್ ಮಗನೊಂದಿಗೆ ಅಮ್ಮನ ವರ್ಕೌಟ್ ವೈರಲ್