Breast Cancer In Women: ನಿಮ್ಮ ಸ್ತನ ಕೂಡಾ ಈ ರೀತಿ ಇದೆಯಾ ? ಹಾಗಿದ್ರೆ ನಿಮಗೆ ಕ್ಯಾನ್ಸರ್ ಬರೋ ಸಾಧ್ಯತೆ ಅತ್ಯಧಿಕವಂತೆ !

Health news breast cancer in women these are the reasons and symptoms of breast cancer

Breast Cancer In Women: ಮಹಿಳೆಯರನ್ನು ಕಾಡುವ ಮಾರಕ ಕಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದಾಗಿದೆ. ಸ್ತನದ ಕ್ಯಾನ್ಸರ್ ಲೋಬ್ಯುಲ್‌ಗಳಲ್ಲಿ (ಹಾಲು ಉತ್ಪತ್ತಿಯಾಗುವ ಗ್ರಂಥಿ), ನಾಳಗಳಲ್ಲಿ (ಹಾಲನ್ನು ವರ್ಗಾಯಿಸುವ ಟ್ಯೂಬ್‌ಗಳು) ಅಥವಾ ಈ ಎರಡು ಸ್ಥಳಗಳ ನಡುವಿನ ಸಂಯೋಜಕ ಅಂಗಾಂಶದಲ್ಲಿ ಕಂಡು ಬರುವ ಕ್ಯಾನ್ಸರ್ ಮಹಿಳೆಯರಿಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹಾಗಿದ್ದರೆ ಯಾರಲ್ಲಿ ಸ್ತನಗಳ ಕ್ಯಾನ್ಸರ್ ಬರುತ್ತೆ, ಅದರಲ್ಲೂ ಯಾವ ಮಹಿಳೆಯರಲ್ಲಿ ಹೆಚ್ಚಾಗಿ, ಯಾಕೆ ಕಾಣಬರುತ್ತೆ ಎಂದು ನಿಮಗೆ ತಿಳಿದಿದೆಯೇ!

ಮುಖ್ಯವಾಗಿ ಸುಮಾರು 40ವರ್ಷ ಕಳೆದ ನಂತರ ಮಹಿಳೆಯರು ವರ್ಷಕ್ಕೆ ಒಂದು ಬಾರಿಯಾದರೂ ಸ್ತನಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏಕೆಂದರೆ ಇದು ಸ್ತನ ಕ್ಯಾನ್ಸರ್ ( Breast Cancer In Women) ಬರುವ ಸಮಯ! ಇನ್ನು ತಜ್ಞರ ಪ್ರಕಾರ ಮಹಿಳೆಯರಿಗೆ ಸ್ತನಗಳು ದಪ್ಪ ಇದ್ದಷ್ಟು ಕ್ಯಾನ್ಸರ್ ಬರುವ ತೊಂದರೆ ಜಾಸ್ತಿ ಅಂತೆ! ಯಾಕೆ ಇದರ ಕಾರಣ ನೋಡೋಣ ಬನ್ನಿ.88

ಮಹಿಳೆಯರ ಅಂದವನ್ನು ಕಾಪಾಡುವಲ್ಲಿ ಸ್ತನಗಳು ಪ್ರಮುಖ ಪಾತ್ರ ವಹಿಸುತ್ತವೆ. ಯೌವನದಲ್ಲಿ ಈ ರೀತಿ ನೆರವಾಗುವ ಸ್ತನಗಳು ವಯಸ್ಸಾಗುವ ಸಂದರ್ಭದಲ್ಲಿ ಮಾರಕ ಕ್ಯಾನ್ಸರ್ ಗೆ ಗುರಿಯಾಗಿ ಸಾವು ತಂದುಕೊಡಲಿದೆ.

ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಈ ಹಿಂದೆ ಯಾರಿಗಾದರೂ ಸ್ತನಗಳ ಕ್ಯಾನ್ಸರ್ ಬಂದಂತಹ ಇತಿಹಾಸ ಇದ್ದರೆ ಅದು ನಿಮಗೆ ತುಂಬಾ ಸಹಾಯವಾಗುತ್ತದೆ.
ಮೊದಲು BRCA1 ಮತ್ತು BRCA2 ಎಂಬ ಎರಡು ಜೀನ್ಸ್ ಸ್ತನ ಕ್ಯಾನ್ಸರ್ ಅನುವಂಶಿಯ ವಾಗಿ ತರಲು ಕಾರಣವಾಗುತ್ತಿದ್ದವು. ಆದರೆ ಈಗ ಹಾಗಲ್ಲ. ಸುಮಾರು 12 ಜೀನ್ಸ್ ಕಾರಣವಾಗುತ್ತಿವೆ.

ಇನ್ನು ಆರೋಗ್ಯ ತಜ್ಞರ ಪ್ರಕಾರ ಹಾಗೆ ಹತ್ತಿರದ ಸಂಬಂಧಿಗಳಿಂದ ಕುಟುಂಬ ಸದಸ್ಯರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಲ್ಲದೆ ಒಂದು ಕುಟುಂಬದಲ್ಲಿ ಹೆಚ್ಚಿನ ಪ್ರಮಾಣದ ಸ್ತನ ಕ್ಯಾನ್ಸರ್ ಪ್ರಕರಣಗಳಿದ್ದರೆ ಅಂತಹ ಕುಟುಂಬದಲ್ಲಿ ಮುಂಬರುವ ಪೀಳಿಗೆಗೆ ಇದು ಹೆಚ್ಚಾ ಗುವ ಸಾಧ್ಯತೆ ಕೂಡ ಇರುತ್ತದೆ.​

ಮುಖ್ಯವಾಗಿ ಮಹಿಳೆಯರ ಸ್ತನಗಳ ತೂಕ ಹೆಚ್ಚಾಗಿರಬಾರದು ಎಂದೇನಿಲ್ಲ. ಆದರೆ ಆರೋಗ್ಯ ತಜ್ಞರು ಹೇಳುವ ಹಾಗೆ ಹೆಚ್ಚು ಸ್ತನಗಳ ಸಾಂದ್ರತೆ ಹೊಂದಿರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.

ಸ್ತನಗಳ ಕ್ಯಾನ್ಸರ್ ವಿಚಾರವಾಗಿ ಸ್ತನಗಳ ಸಾಂದ್ರತೆಯ ಪರೀಕ್ಷೆ ನಡೆಸುವ ಮೂಲಕ ಇದನ್ನು ಪತ್ತೆ ಹಚ್ಚಲಾಗುತ್ತದೆ. ಹಾಗಾಗಿ ನೀವು ಸಹ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಸ್ತನಗಳ ಕ್ಯಾನ್ಸರ್ ಸಮಸ್ಯೆಯನ್ನು ಮೊದಲೇ ತಿಳಿದುಕೊಳ್ಳ ಬಹುದು.​

​ಇದರ ಹೊರತು ಮಹಿಳೆಯರು ಯಾವ ರೀತಿ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ ಎಂಬುದರ ಮೇಲೆ ಕೂಡ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅಂದರೆ ದೇಹದ ತೂಕ ಹೆಚ್ಚಾಗುವುದು, ವ್ಯಾಯಾಮ ಕಡಿಮೆ ಇರುವುದು, ಮಧ್ಯಪಾನ ಸೇವನೆ ಇರುವುದು ಇವೆಲ್ಲವೂ ಸಹ ಸ್ತನ ಕ್ಯಾನ್ಸರ್ ಬರಲು ಕಾರಣವಾ ಗುತ್ತದೆ.
ಇಂತಹ ಸಂದರ್ಭ ದಲ್ಲಿ ಮಧ್ಯಪಾನ ಸೇವನೆಯನ್ನು ಸಾಧ್ಯ ವಾದಷ್ಟು ಕಡಿಮೆ ಮಾಡಿಕೊಂಡು ನಿಯಮಿತ ವಾಗಿ ದೇಹಕ್ಕೆ ವ್ಯಾಯಾಮ ಒದಗಿಸಿ ಸ್ತನ ಕ್ಯಾನ್ಸರ್ ಬರದಂತೆ ತಡೆಯ ಬಹುದು.​

ಸ್ತನ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ಹೇಳುವುದಾದರೆ :
ಉದಾಹರಣೆಗೆ ಸ್ತನಗಳಲ್ಲಿ ಗಂಟು ಕಂಡು ಬರುವುದು ಅಥವಾ ಗಟ್ಟಿ ಯಾದ ಅನುಭವ ಉಂಟಾಗುವುದು. ಇದರ ಜೊತೆಗೆ ಸ್ತನಗಳ ಗಾತ್ರ ಮತ್ತು ಆಕಾರ ಸಹ ಬದಲಾಗುವುದು. ಸ್ತನಗಳ ಮೇಲ್ಭಾಗದ ಚರ್ಮ ಮೊದಲಿನಂತೆ ಇರುವುದಿಲ್ಲ. ನಿಪ್ಪಲ್ ಭಾಗ ತಿರುಗಿಕೊಂಡಿ ರುವುದು. ನಿಪ್ಪಲ್ ಸುತ್ತಲೂ ಚರ್ಮ ಸಿಪ್ಪೆ ಸುಲಿದು ಕೊಳ್ಳುವುದು. ಸ್ತನಗಳ ಮೇಲ್ಭಾಗದ ಚರ್ಮ ಕೆಂಪು ಬಣ್ಣಕ್ಕೆ ತಿರುಗುವ ಲಕ್ಷಣ ಕಾಣಬರುತ್ತದೆ.

ಇನ್ನು 12 ವರ್ಷಕ್ಕಿಂತ ಮೊದಲು ಮುಟ್ಟಿನ ಪ್ರಾರಂಭವಾದಾಗ,
ಸರಿಯಾದ ವಯಸ್ಸಿನಲ್ಲಿ ಗರ್ಭಿಣಿಯಾಗದಿರುವುದು, ಹಾರ್ಮೋನ್ ಚಿಕಿತ್ಸೆಮದ್ಯಪಾನದ ಮೋಹ ಮುಂತಾದವುದಳಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಲಕಲಕ ಲಲನೆಯರ ಮಧ್ಯೆ ಡ್ರಂ ಬಾರಿಸುತ್ತಾ ನಿತ್ಯಾನಂದ: ಕೈಲಾಸದಲ್ಲಿ ಮೊಳಗಿದ ಕನ್ನಡ ಹಾಡು – ವಿಡಿಯೋ ವರದಿ

Comments are closed.