Gruha lakshmi Scheme: ಗೃಹಲಕ್ಷ್ಮಿ ಅರ್ಜಿ ಶುಲ್ಕದಲ್ಲಿ ಮಹತ್ತರ ಬದಲಾವಣೆ ; ಕೊನೆ ಕ್ಷಣದಲ್ಲಿ ಜನರ ಭಾರ ಇಳಿಸಿದ ಸರ್ಕಾರ !

Gruhalakshmi scheme update Congress guarantee application fee for gruhalakshmi yojana complete detail

Gruha lakshmi Scheme: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ (Gruha lakshmi Scheme) ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಪ್ರತೀ ಮನೆಯ ಯಜಮಾನಿಯರು ಮುಗಿಬಿದ್ದು ಅರ್ಜಿ ಹಾಕುತ್ತಿದ್ದಾರೆ. ಇದೀಗ ಈ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಗೃಹಲಕ್ಷ್ಮಿ ಅರ್ಜಿ ಶುಲ್ಕದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ.

ಈ ಹಿಂದಿನ ಸುತ್ತೋಲೆ ಹಿಂಪಡೆದು ದರ ಪರಿಷ್ಕರಣೆ ಮಾಡಲಾಗಿದೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯುವ ಪ್ರತಿ ನೋಂದಣಿಗೆ 10
ರೂ. ಹಾಗೂ ಮಂಜೂರಾತಿ ಪತ್ರಕ್ಕೆ 2 ರೂ. ನಿಗದಿಪಡಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಶುಲ್ಕವನ್ನು ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡುವ ಬಗ್ಗೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಈ ಹಿಂದೆ ಸುತ್ತೋಲೆಯಲ್ಲಿ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆದುಕೊಳ್ಳುವ ಗೃಹಲಕ್ಷ್ಮಿ ಯೋಜನೆಯ ಪ್ರತಿ ಅರ್ಜಿಗೆ 20 ರೂಪಾಯಿಯನ್ನು ಇಲಾಖೆಯಿಂದ ವರ್ಗಾವಣೆ ಮಾಡಲಾಗುವುದು ಎನ್ನಲಾಗಿತ್ತು. ಕರ್ನಾಟಕ ಒನ್ ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಪ್ರತಿ ನೋಂದಣಿಗೆ
15 ರೂಪಾಯಿ, ಮಂಜೂರಾತಿ ಪತ್ರದ ಪ್ರತಿಗೆ 5 ರೂಪಾಯಿ
ನೀಡಲು ನಿರ್ಧರಿಸಲಾಗಿತ್ತು. ಇದೀಗ ಈ ದರ ಪರಿಷ್ಕರಿಸಲಾಗಿದೆ.
ಆರ್ಥಿಕ ಇಲಾಖೆ ಪ್ರತಿ ನೋಂದಣಿಗೆ 10 ರೂ. ಮಂಜೂರಾತಿ ಪತ್ರದ ಪ್ರತಿಗೆ 2 ರೂ. ನಿಗದಿಪಡಿಸಿದ್ದು, ಈ ಹಿಂದೆ ಹೊರಡಿಸಿದ್ದ ಸುತ್ತೋಲೆ ಹಿಂಪಡೆದುಕೊಂಡು ಅರ್ಜಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ.

ಅಂದಹಾಗೆ, ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ’ ಯೋಜನೆ ಆರಂಭಿಸಿದೆ. ಬಹು ನಿರೀಕ್ಷಿತ ಹಾಗೂ ಕಾತುರದಿಂದ ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಸಮಯ ಹತ್ತಿರದಲ್ಲೇ ಇದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಸಿಗುತ್ತದೆ. ಸದ್ಯ ಈ ಯೋಜನೆಗೆ ವಾರ್ಷಿಕ 30 ಸಾವಿರ ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Job Alert: ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಬೊಂಬಾಟ್ ನ್ಯೂಸ್ ; 6000 ಕ್ಕೂ ಮಿಕ್ಕಿ ಉದ್ಯೋಗ ಅವಕಾಶ !

Comments are closed.