ರಸ್ತೆ ಅಪಘಾತದಲ್ಲಿ ದೇಹ ಇಬ್ಭಾಗವಾದಾಗ ಸ್ವತಃ ಅಂಬುಲೆನ್ಸ್ ಗೆ ಕರೆ ನನ್ನ ಅಂಗದಾನ ಮಾಡಿ ಎಂದ ಸ್ಫೂರ್ತಿಯ ಜೀವ: ವಿಶ್ವ ಅಂಗದಾನ ದಿನ ವಿಶೇಷ !

Health news World organ donation day 2023

World organ donation day:

 

ವಿಶ್ವ ಅಂಗದಾನ ದಿನ (ವರ್ಲ್ಡ್ ಆರ್ಗನ್ ಡೊನೇಷನ್ ಡೇ) 2023-

“ಅಂಗಾಗಳನ್ನು ದಾನ ಮಾಡಿ, ಜೀವ ಉಳಿಸಿ”

ಶ್ರೀ ಹರೀಶ್ ಏನ್ ಎಂಬ 26 ವರ್ಷದ ತುಮಕೂರು ಮೂಲದ ವ್ಯಕ್ತಿಯು ಕೆಲಸದ ನಿಮಿತ ಬೆಂಗಳೂರಿಗೆ ಹೋಗುವಾಗ, ನೆಲಮಂಗಲ ಬಳಿ ಲಾರಿಯೊಂದು ಡಿಕ್ಕಿ ಹೊಡೆಯುತ್ತದೆ. ನಂತರ ಅವರ ದೇಹ ಎರಡು ಭಾಗಗಳಾಗಿ ಬೇರ್ಪಟ್ಟು ನಡು ರಸ್ತೆಯಲ್ಲೇ ಸಹಾಯಕ್ಕಾಗಿ ಕೂಗುತ್ತಿದ್ದರು ಸಹಾ, ಅಲ್ಲಿ ನೆರದಿದ್ದ ಯಾರಿಗೂ ಧೈರ್ಯ ಮತ್ತೆ ಮುಂದೆ ಬರಲ್ಲಿಲ. ಆಗ ತಾನೇ ತುರ್ತುಕರೆಗೆ ತಾನೇ ಕರೆ ಮಾಡುತ್ತಾರೆ. ತಕ್ಷಣ ಅವರನ್ನುಆಸ್ಪತ್ರೆಗೆ ಸಾಗಿಸುವ ಮಧ್ಯೆ ಅವರ ಉಸಿರು ನಿಂತು ಹೋಗುತ್ತದೆ. ಇದರ ಮಧ್ಯೆ ಅವರು ಅಲ್ಲಿ ನೆರದಿದ್ದ ಜನರಲ್ಲಿ ಒಂದು ಮಾತನ್ನು ಕೋರಿಕೊಳುತ್ತಿರುತ್ತಾರೆ ಆದರೂ ಸಹಾ ಯಾರು ಕೇಳಿಸುಕೊಳ್ಳುವುದಿಲ್ಲ. ಆ ಮಾತು ಏನೆಂದರೆ “ನನ್ನ ದೇಹದ ಅಂಗಗಳನ್ನೂ ಯಾರಿಗಾದರೂ ದಾನ ಮಾಡಿ” ಎನ್ನುವ ಅವರ ಜೀವನದ ಕೊನೆಯ ಆಸೆ. ತನ್ನದಲ್ಲದ ತಪ್ಪಿಗೆ ತನ್ನಜೀವವನ್ನು ಕೊಡುತ್ತಾರೆ. ಇಂತಹ ಹೃದಯ ಶ್ರೀಮಂತ ಮಹಾ ವ್ಯಕ್ತಿಗಳು ನಮ್ಮೆಲರಿಗೂ ಅಂಗದಾನ ವಿಷಯದ ಬಗ್ಗೆ ಆದರ್ಶವಾಗಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ದಾನಗಳ್ಳಲೇ ಶ್ರೇಷ್ಠ ದಾನ ಅಂಗದಾನ(World organ donation day). ಇದು ಒಂದು ವೈದ್ಯಕೀಯ ಪ್ರಕ್ರಿಯೆ, ಒಬ್ಬ ವ್ಯಕ್ತಿಯು ತನ್ನ ದೇಹದಲ್ಲಿ ಎಲ್ಲ ಅಥವಾ ಪ್ರತ್ಯೇಕ ಅಂಗಗಳನ್ನು ಅಥವಾ ಸ್ವಲ್ಪ ಅಂಗಗಳ ಭಾಗಗಳನ್ನು ತೆಗೆದು ಅದನ್ನು ಯಾವ ವ್ಯಕ್ತಿಯಲ್ಲಿ ಅಂಗಗಳ ದೋಷ ಅಥವಾ ನಿಷ್ಕ್ರಿಯವಾಗಿರುತ್ತದೆ, ಆ ವ್ಯಕ್ತಿಗೆ ಕಾನೂನು ಬದ್ದವಾಗಿ ಮತ್ತು ಸ್ವಯಂ ಪ್ರೇರಣೆ ಇಂದ ತಾನು ಬದುಕಿರುವಾಗ ಅಥವಾ ಸತ್ತ ನಂತರ, ಮರಣ ಹೊಂದಿದ ವ್ಯಕ್ತಿಯ ಪೋಷಕರ ಅನುಮತಿಯ ಮೇರೆಗೆ ಅಂಗದಾನ ಪ್ರಕ್ರಿಯೆ ನಡೆಯುತ್ತದೆ. ನಾವೆಲ್ಲರೂ ನಮ್ಮ ಕಣ್ಣುಗಳು, ಹೃದಯ, ಶ್ವಾಶಕೋಶ, ಮೂತ್ರಪಿಂಡಗಳು, ಕರುಳು, ಮತ್ತುಮೇದೋಜೀರಕ ಗ್ರಂಥಿಗಳನ್ನು ದಾನ ಮಾಡಬಹುದು.
ಅಂಗದಾನಗಳಲ್ಲಿ ನಾಲ್ಕು ವಿಭಿನ್ನ ಪ್ರಕಾರಗಳಿವೆ. ಅದು ಜೀವಂತ ದಾನ, ಮೃತರ ದಾನ, ಅಂಗಾಂಶ ದಾನ, ಮತ್ತು ಮಕ್ಕಳ ದಾನ. ಅಂಗದಾನದಲ್ಲಿರುವ ಪ್ರಮುಖ ಸಮಸ್ಯೆ ಎಂದರೆ ದೀರ್ಘ ಕಾಯುವಿಕೆ ಮತ್ತು ಅನಿಶ್ಚಿತತೆ.

 

ಅಂಗದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಆಗಸ್ಟ್ ೧೩ ರಂದು ವಿಶ್ವ ಅಂಗದಾನ ದಿನವೆಂದು ಘೋಷಿಸಿದ್ದಾರೆ. ಅಂಗದಾನದ ಇತಿಹಾಸ ತಿಳಿಯಬೇಕೆಂದರೆ, ರೊನಾಲ್ಡ್ ಲೀ ಹೆರಿಕ್ ತನ್ನ ಅಂಗಾಂಗ ದಾನ ಮಾಡಿದ ಮೊದಲ ಮಹಾನ್ ವ್ಯಕ್ತಿ. ಇವರು 1954 ರಲ್ಲಿ ತನ್ನ ಅವಳಿ ಸಹೋದರನಿಗೆ ತನ್ನ ಮೂತ್ರಪಿಂಡವನ್ನು ಡಾ ಜೋಸೆಫ್ ಮುರ್ರೆ ಮುಂದಾಳತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯ ಮೂಲಕ ಮಾಡಿದರು.

ಏಡ್ಸ್ ಕಾಯಿಲೆ, ಸಕ್ರಿಯವಾಗಿ ಹರಡುವ ಕ್ಯಾನ್ಸರ್, ಮಧುಮೇಹ, ಮೂತ್ರಪಿಂಡ ಕಾಯಿಲೆ ಅಥವಾ ಹೃದ್ರೋಗ ಸಮಸ್ಯೆ ಇಂದ ಬಳಲುತ್ತಿರುವ ವ್ಯಕ್ತಿಗಳಿಂದ ಕೆಲವೊಮ್ಮೆ ಅಂಗದಾನ ಸ್ವೀಕರಿಸುವುದಿಲ್ಲ. ಆರೋಗ್ಯವಾಗಿರುವ ಮತ್ತು 18 ವರ್ಷ ಮೇಲ್ಪಟ್ಟವರು ಅಂಗದಾನಿಯಾಗಲು ಸ್ವಯಂ ಸೇವಕರಾಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಜೀವಂತವಾಗಿರುವಾಗಲೇ ತಮ್ಮ ಹೆಸರನ್ನು ಕಾನೂನಿನ ಪ್ರಕಾರ ನೋಂದಾಯಿಸಬಹುದು.

ಈ ವರ್ಷದ ಅಂಗದಾನ ದಿನದ ನಿರ್ಣಯ “ಅಂಗಾಗಳನ್ನು ದಾನ ಮಾಡಿ, ಜೀವ ಉಳಿಸಿ”. ಇಂತಹ ಶ್ರೇಷ್ಠದಾನದ ಬಗ್ಗೆ ಕೆಲವು ಜನರಿಗೆ ತಪ್ಪು ತಿಳುವಳಿಕೆ ಇದೆ. ಅಂತವರು ಖುದ್ದು ವ್ಯೆದ್ಯರನ್ನು ಭೇಟಿಯಾಗಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದು.

ಅಂಗಾಂಗ ದಾನದ ಬಗ್ಗೆ ಕೆಲವು ಸಂಗತಿಗಳು:
೧) ಒಬ್ಬ ವ್ಯಕ್ತಿಯು ಅಂಗದಾನದ ಮೂಲಕ 8 ಜನರ ಜೀವ ಉಳಿಸಬಹುದು ಮತ್ತು ಸುಮಾರು ೫೦ ಜನರಿಗೆ ಅಂಗಾಂಶ ದಾನ ಮಾಡಬಹುದು.
೨) ಪ್ರತಿದಿನ ಪ್ರಪಂಚದಲ್ಲಿ ಕನಿಷ್ಠ ೨೦ ರೋಗಿಗಳು ಅಂಗದಾನ ದೀರ್ಘ ಕಾಯುವಿಕೆಯಿಂದ ಸಾವನ್ನಪ್ಪುತ್ತಿದ್ದಾರೆ.
೩) ಪ್ರತಿ ೧೦ ನಿಮಿಷಕೊಮ್ಮೆ ಅಂಗದಾನ ಪಟ್ಟಿಯಲ್ಲಿ ಹೊಸ ಹೆಸರು ನೋಂದಾಯಿಸಲಾಗುತ್ತಿದೆ.
೪) ನಮ್ಮ ಭಾರತ ದೇಶದಲ್ಲಿ, ಪ್ರತಿ ಒಂದು ದಶಲಕ್ಷದಲ್ಲಿ ಕೇವಲ ೦.೮೬ ಅಂಗದಾನಿಗಳಿದ್ದಾರೆ. ಸ್ಪೇನ್ ನಂತಹ ಚಿಕ್ಕ ದೇಶದಲ್ಲಿ ೪೯.೬ ಮತ್ತು ಅಮೇರಿಕಾದಲ್ಲಿ ೩೬.೧ ಇದೆ.
ಏಳಿ ಎದ್ದೇಳಿ, ನಮ್ಮ ದೇಹ ಮಣ್ಣು ಆಗಲು ಅಥವಾ ಬೂದಿ ಆಗಲುಬಿಡದೆ ಬೇರೆಯವರ ಬಾಳಿಗೆ ಮತ್ತು ಅವರ ಮನೆಗಳಿಗೆ ಅಂಗದಾನದ ಮೂಲಕ ಬೆಳಕು ಆಗೋಣ.

(ಈ ಮಾಹಿತಿಯನ್ನು ಸಾರ್ವಜನಿಕರ ಉಪಯೋಕ್ಕಾಗಿ ಮತ್ತು ಸದ್ದುದೇಶದಿಂದ ಬರೆಯಲಾಗಿದೆ.)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
ಲೇಖಕರು:
ಶ್ರೀ ರವಿನಂದನ್ ಎ ಪಿ,
ಸಹಾಯಕ ಪ್ರಾಧ್ಯಾಪಕ,
ಫಾರ್ಮಸಿ ಅಭ್ಯಾಸ ವಿಭಾಗ,
ಶ್ರೀ ಸಿದ್ದಗಂಗಾ ಕಾಲೇಜ್ ಆಫ್ ಫಾರ್ಮಸಿ
ಸಹಯೋಗದಲ್ಲಿ
ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (SMCRI)
ತುಮಕೂರು.
ravinandanap@gmail.com

ಇದನ್ನೂ ಓದಿ: Bank Holiday: ಬ್ಯಾಂಕ್ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಇನ್ನು ಮುಂದೆ ಶನಿವಾರ ಕೂಡ ಇರಲಿದೆಯಂತೆ ರಜಾ!

Comments are closed.