Bachelor of Education: ಶಿಕ್ಷಕರಿಗೆ ಶಾಕಿಂಗ್ ನ್ಯೂಸ್! BEd ಆದವರು ಪ್ರಾಥಮಿಕ ಶಾಲಾ ಟೀಚರ್ ಆಗುವಂತಿಲ್ಲ: ಸುಪ್ರೀಂ ಕೋರ್ಟ್ ಹೊಸ ಆದೇಶ !
Education news bachelor of education candidates are not eligible for the post of primary school teacher
Bachelor of Education: ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಬಿ.ಎಡ್ ಪದವಿ (Bachelor of Education) ಪಡೆದಿರುವವರು ಅರ್ಹರಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸದ್ಯ ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗೂ ನ್ಯಾಯಮೂರ್ತಿ ಸುಧಾಂಶು ದುಲಿಯಾ ಅವರನ್ನೊಳಗೊಂಡ ಪೀಠದಲ್ಲಿ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಭಾರತ ಸಂವಿಧಾನದ ವಿಧಿ 21ಎ ಹಾಗೂ 2009 ರ ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳ ಪ್ರಕಾರ 14 ವರ್ಷದ ಒಳಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ‘ಉಚಿತ’ ಮತ್ತು ‘ಕಡ್ಡಾಯ’ ಮತ್ತು ‘ಗುಣಮಟ್ಟ’ದ ಶಿಕ್ಷಣ (Education) ಕೂಡ ನೀಡಬೇಕೆಂದು ಹೇಳುತ್ತವೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಿಎಡ್ ಪದವಿ ಪಡೆದವರು ಪ್ರಾಥಮಿಕ ತರಗತಿಗಳಿಗೆ ಬೋಧನೆಗೆ ಅಗತ್ಯವಾದ ಮೂಲಭೂತ ಶಿಕ್ಷಣದ ಮಿತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಂಬುದಾಗಿ ಅಭಿಪ್ರಾಯ ಪಡಲಾಗಿದೆ.
ಈ ಹಿನ್ನಲೆಯಲ್ಲಿ ಬಿಎಡ್ ಪದವೀಧರರು 1 ರಿಂದ 5ನೇ ತರಗತಿಗೆ ಬೋಧನೆ ಮಾಡಲು ಅರ್ಹರಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ: Priyanka Gandhi Vadra: 50% ಕಮಿಷನ್ ಆರೋಪ ತಂದಿಟ್ಟ ಸಂಕಟ, ಪ್ರಿಯಾಂಕ ಗಾಂಧಿ ಮೇಲೆ ಬಿತ್ತು FIR !
Comments are closed.