‘ ನಂಗೆ ಏನಾದ್ರೂ ತೊಂದ್ರೆ ಆದ್ರೆ ಅದಿಕ್ಕೆ ಕಡೂರು MLA ನೇ ಕಾರಣ’ । ಶಾಸಕರ ಮೇಲೆ ವಾಟ್ಸಾಪ್ ಸ್ಟೇಟಸ್ ಹಾಕಿದ ಮಹಿಳಾ ಪೇದೆ ಸಸ್ಪೆ೦ನ್ಡ್ !

Share the Article

ತಮ್ಮ ವರ್ಗಾವಣೆ ವಿರೋಧಿಸಿ ಕಡೂರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪೊಲೀಸ್ ಕಾನ್ಸ್ಟೇಬಲ್ ಇದೀಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೇದೆ ಲತಾ ಅವರನ್ನು ತರಿಕೆರೆ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.ಅದಕ್ಕೆ ಈ ಮಹಿಳಾ ಪೇದೆ ಇದು ದ್ವೇಷದ ವರ್ಗಾವಣೆ ಎಂದು ಶಾಸಕರ ವಿರುದ್ಧ ಅಸಮಾಧಾನಗೊಂಡಿದ್ದರು. ಈ ವರ್ಗಾವಣೆಯನ್ನು ವಿರೋಧಿಸಿ ಪೇದೆ ಲತಾರವರು ಸಬ್ ಇನ್ಸ್ ಪೆಕ್ಟರ್ ಜೊತೆಯೂ ಮಾತಿನ ಚಕಮಕಿ ನಡೆಸಿದ್ದರು.

ಈಗ ಪೇದೆ ಲತಾ ‘ಕಡೂರು ಎಂಎಲ್ ಎ ಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದರು ತೊಂದರೆ ಆದರೆ, ಅದಕ್ಕೆ ಎಂಎಲ್‌ಎ ಕಾರಣ’ ಎಂದು ವಾಟ್ಸಪ್ ಸ್ಟೇಟಸ್ ನಲ್ಲಿ ಶಾಸಕರ ವಿರುದ್ಧ ಸಮರಕ್ಕಿಳಿದಿದ್ದಾರೆ. ಕಡೂರು ಶಾಸಕರ ವಿರುದ್ಧ ವಾಟ್ಸಪ್ ಸ್ಟೇಟಸ್ ಹಾಕಿದ ಕಾರಣಕ್ಕಾಗಿ ಇದೀಗ ಚಿಕ್ಕಮಗಳೂರು ಎಸ್ ಪಿ ಅವರು ಮಹಿಳಾ ಪೇದೆ ಲತಾರನ್ನ ಅಮಾನತು ಮಾಡಿದ್ದಾರೆ.

Comments are closed.