Morning Vastu tips: ನೀವು ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಬೇಡಿ … ಮಾಡಿದರೆ…ಈ ಅನಾಹುತ ಖಂಡಿತ
Morning Vastu tips Do not do this 5 works after waking up in the morning
Morning Vastu tips: ದಿನದ ಆರಂಭ ಚೆನ್ನಾಗಿದ್ದರೆ ನಮ್ಮ ಇಡೀ ದಿನದ ಕೆಲಸವು ಯಶಸ್ಸಿನಿಂದ ಕೂಡಿರುತ್ತದೆ. ಕೆಲವೊಂದು ಹವ್ಯಾಸಗಳು ಆ ದಿನದ ಅದೃಷ್ಟವನ್ನೇ ಬದಲಾಯಿಸಿ ಬಿಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ನಾವು ತಿಳಿದೋ ಅಥವಾ ತಿಳಿಯದೆಯೋ, ಹಲವು ಬಾರಿ ಕೆಲ ತಪ್ಪುಗಳನ್ನು ಮಾಡಿಬಿಡುತ್ತೇವೆ. ಈ ತಪ್ಪುಗಳು ನಮ್ಮ ಕೆಲಸ, ಆರೋಗ್ಯ ಮತ್ತು ಆ ದಿನದ ಅದೃಷ್ಟದ ಮೇಲೆ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರಗಳಲ್ಲಿ ಇಂತಹುದೇ ಕೆಲ ಕೆಲಸಗಳನ್ನು ಉಲ್ಲೇಖಿಸಲಾಗಿದ್ದು, ಈ 5 ಕೆಲಸಗಳನ್ನು ಮಾಡುವುದರಿಂದ ದುರಾದೃಷ್ಟವು ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತದೆ. ಹಾಗಾದರೆ ಆ 5 ಕೆಲಸಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Morning Vastu tips).
ಕನ್ನಡಿಯಲ್ಲಿ ಮುಖ ನೋಡುವುದು:- ಸಾಮಾನ್ಯವಾಗಿ ಕೆಲವರು ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ, ಆದರೆ ಇದು ವಾಸ್ತು ಶಾಸ್ತ್ರದ ಪ್ರಕಾರ ಶುಭವಲ್ಲ. ಬೆಳಗ್ಗೆ ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿ ಇರುತ್ತೆ, ಹಾಗಾಗಿ, ಎದ್ದ ತಕ್ಷಣ ನಿಮ್ಮ ಮುಖ ಕನ್ನಡಿಯಲ್ಲಿ ನೋಡುವುದು ಹಾನಿಕಾರಕವೆಂದು ಹೇಳಲಾಗುತ್ತೆ. ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ, ಪ್ರಥಮವಾಗಿ ದೇವರ ದರ್ಶನ ಮಾಡಬೇಕು. ಹೀಗೆ ಮಾಡುವುದರಿಂದ ದಿನದ ಆರಂಭ ಶುಭವಾಗಿದ್ದೂ , ಇಡೀ ದಿನ ಯಶಸ್ಸಿನಿಂದ ಕೂಡಿರುತ್ತದೆ.
ನಿಂತು ಹೋದ ಗಡಿಯಾರ ನೋಡುವುದು:– ಧರ್ಮಗ್ರಂಥಗಳ ಪ್ರಕಾರ, ನಿಂತುಹೋದ ಗಡಿಯಾರವನ್ನು ನೋಡುವುದು ಮನೆಯಲ್ಲಿ ವಿವಾದಕ್ಕೆ ಕಾರಣವಾಗಬಹುದು. ಅಲ್ಲದೇ ಇದು ಕೆಟ್ಟ ಸಮಯವನ್ನು ಸೂಚಿಸುತ್ತದೆ. ನಿಂತು ಹೋದ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಪ್ರತಿದಿನದ ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಯಾವುದೋ ಕಾರಣಗಳಿಂದ ನೀವು ಗಡಿಯಾರವನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ, ಅದನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಿ, ಇಲ್ಲವಾದರೆ ಮನೆಯಲ್ಲಿ ನೆಗೆಟಿವಿಟಿ ತುಂಬುತ್ತದೆ.
ಮುಸುರಿ ಪಾತ್ರೆಗಳನ್ನು ನೋಡುವುದು:- ಶಾಸ್ತ್ರಗಳ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಮುಸುರಿ ಪಾತ್ರೆಗಳನ್ನು ನೋಡುವುದು ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಕಡಿಮೆಯಾಗುತ್ತದೆ. ಮುಸುರಿ ಪಾತ್ರೆಗಳನ್ನು ಹಾಗೆಯೇ ಇಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ. ಕೆಲವರು ಅನಿವಾರ್ಯ ಕಾರಣಗಳಿಂದ ಹೀಗೆ ಮಾಡುತ್ತಾರೆ. ಆದರೆ ಈ ತಪ್ಪು ನಿಮ್ಮ ಮೇಲೆ ಭಾರಿ ಪರಿಣಾಮ ಬೀರುತ್ತೆ. ಹಾಗಾಗಿ ರಾತ್ರಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಮಲಗಬೇಕು.
ನೆರಳು ನೋಡುವುದು:- ಬೆಳಗ್ಗೆ ಎದ್ದ ತಕ್ಷಣ ನಮ್ಮ ಮೊದಲ ದೃಷ್ಟಿ ನಮ್ಮ ಅಥವಾ ಇತರರ ನೆರಳಿನ ಮೇಲೆ ಬೀಳುವುದು ಒಳ್ಳೆಯ ಸಂಕೇತವಲ್ಲ ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ನೆರಳು ರಾಹುವಿನ ಸಂಕೇತವಾಗಿದ್ದೂ, ನೆರಳನ್ನು ನೋಡುವುದರಿಂದ ಆ ದಿನ ಅಶುಭವಾಗಿರುತ್ತದೆ. ನೆರಳನ್ನು ನೋಡುವುದು ವ್ಯಕ್ತಿಯಲ್ಲಿ ಉದ್ವೇಗ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ದಿನವಿಡೀ ಕೆಲಸದಲ್ಲಿ ತೊಂದರೆಗಳು ಎದುರಾಗುತ್ತವೆ ಮತ್ತು ಇದು ಏಕಾಗ್ರತೆಗೆ ಭಂಗ ತರುತ್ತದೆ.
ಕ್ರೂರ ಪ್ರಾಣಿಗಳ ಫೋಟೋ ನೋಡುವುದು:- ಶಾಸ್ತ್ರಗಳ ಪ್ರಕಾರ ಮುಂಜಾನೆಯ ಮೊದಲ ದೃಷ್ಟಿ ಕ್ರೂರ ಪ್ರಾಣಿಗಳ ಮೇಲೆ ಅಥವಾ ಪ್ರಾಣಿಗಳ ಚಿತ್ರದ ಮೇಲೆ ಬೀಳಬಾರದು ಎಂದು ಹೇಳಲಾಗಿದೆ. ಇದು ಸಂಬಂಧಗಳಲ್ಲಿ ವಿರಸಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಕೆಲಸದ ಸ್ಥಳದಲ್ಲಿ ಕೂಡ ಇದರಿಂದ ವಿವಾದ ಉಂಟಾಗಬಹುದು. ಆದರೆ ಬೆಳಗ್ಗೆ ಎದ್ದ ತಕ್ಷಣ ಹಸು ಕಂಡರೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Comments are closed.