Health Tips: ಆಲೂಗಡ್ಡೆ ರಸವನ್ನು ಮುಖಕ್ಕೆ ಹಚ್ಚೋದ್ರಿಂದ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಿರಿ
Health tips beauty tips beauty benefits by applying potato juice on your face
Benefits of potato juice: ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಆಲೂಗಡ್ಡೆ ರಸವು ಹಲವಾರು ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಮುಖಕ್ಕೆ ಹಚ್ಚೋದ್ರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ. ಮುಖದಲ್ಲಿ ಹೊಳಪು ಹೆಚ್ಚಾಗುತ್ತದೆ. ಮುಖದಲ್ಲಿನ ಸನ್‌ಟ್ಯಾನ್, ಕಣ್ಣಿನ ಕಪ್ಪು ವರ್ತುಲವನ್ನು ತೆಗೆಯಲು ಆಲೂಗಡ್ಡೆಯನ್ನು ಬಳಸಬಹುದು. ಆಲೂಗಡ್ಡೆಯ ರಸವನ್ನು ಮುಖಕ್ಕೆ(Benefits of potato juice) ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.
ಡಾರ್ಕ್ ಸರ್ಕಲ್ ನಿವಾರಣೆ :
ಆಲೂಗೆಡ್ಡೆಯಲ್ಲಿರುವ ವಿಟಮಿನ್ ಸಿ, ಪಿಷ್ಟ ಮತ್ತು ನೈಸರ್ಗಿಕ ಕಿಣ್ವಗಳು ಕಣ್ಣಿನ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಪೋಷಿಸುತ್ತವೆ ಮತ್ತು ಕಪ್ಪು ವಲಯಗಳ ರಚನೆಯನ್ನು ತಡೆಯುತ್ತವೆ. ಆಲೂಗಡ್ಡೆಯಲ್ಲಿ ವಿಟಮಿನ್ ಎ ಇದ್ದು, ಇದು ಚರ್ಮವನ್ನು ಗಟ್ಟಿಯಾಗಿ ಇಡಲು ಸಾಧ್ಯವಾಗುತ್ತದೆ. ಕಣ್ಣುಗಳ ಕೆಳಗೆ ಕುಗ್ಗುವ ಚರ್ಮವನ್ನು ತಡೆಗಟ್ಟುವ ಮೂಲಕ, ವಿಟಮಿನ್ ಎ ಅಕಾಲಿಕ ಚರ್ಮದ ವಯಸ್ಸಾದಿಕೆಯಿಂದ ಉಂಟಾಗುವ ಕಪ್ಪು ವಲಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ವಿಧಾನ : ಒಂದು ಆಲೂಗೆಡ್ಡೆಯ ಎರಡು ಹೋಳುಗಳನ್ನಾಗಿ ಮಾಡಿ, ಅದರ ಮೇಲೆ ಸ್ವಲ್ಪ ಅಲೋವೆರಾ ಜೆಲ್‌ನ್ನು ಹಚ್ಚಿ. ನಂತರ ಕಣ್ಣಿನ ಮೇಲೆ ಒಂದು ಸ್ಲೈಸ್ ಅನ್ನು ಇರಿಸಿ. ಹಾಗೆಯೇ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಕಣ್ಣಿನ ಸುತ್ತಲು ಉಬ್ಬಿರುವುದನ್ನು ಕಡಿಮೆ ಮಾಡಬಹುದು. ಅಲ್ಲದೆ, ಕಣ್ಣಿನ ಸುತ್ತಲಿನ ಕಪ್ಪುಕಲೆ ಹಾಗೂ ಪಿಗ್ಮೆಂಟೇಶನ್ ಅನ್ನು ಕೂಡಾ ಕಡಿಮೆ ಮಾಡಬಹುದು.
ಸನ್‌ಟ್ಯಾನ್ ನಿವಾರಿಸಲು ಸಹಕಾರಿ :
ದೇಹದ ಮೇಲೆ ಸೂರ್ಯನ ಕಿರಣಗಳು ಹೆಚ್ಚು ಬಿದ್ದು ಚರ್ಮ ಕಪ್ಪು ಬಣ್ಣಕೆ ಬಂದಿದ್ದರೆ ಅದನ್ನು ಸನ್ ಟಾನ್ ಎನ್ನಲಾಗುತ್ತದೆ. ಇದರ ಪರಿಹಾರಕ್ಕೆ ವಿಧಾನ ಇಲ್ಲಿದೆ. ಸನ್‌ಟ್ಯಾನ್ ನಿವಾರಿಸಲು ಒಂದು ಆಲೂಗಡ್ಡೆ ರಸವನ್ನು ತೆಗೆದುಕೊಳ್ಳಿ, ಅದಕ್ಕೆ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಸನ್‌ಟ್ಯಾನ್‌ನಿಂದಾಗಿರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡಬಹುದು. ಇದನ್ನು ವಾರಕ್ಕೆ ಎರಡು ಬಾರಿ ಚರ್ಮಕ್ಕೆ ಹಚ್ಚಬಹುದು.
ಮುಖದ ಸುಕ್ಕುಗಳನ್ನು ತೆಗೆದುಹಾಕುತ್ತದೆ :
ಆಲೂಗಡ್ಡೆ ರಸ ಕಣ್ಣಿನ ಕೆಳಗಿನ ಚರ್ಮ ಮತ್ತು ಕಪ್ಪು ವಲಯಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಆ ಸೂಕ್ಷ್ಮ ಪ್ರದೇಶದಲ್ಲಿನ ಸುಕ್ಕುಗಳ ಮೇಲೆ ಕೆಲಸ ಮಾಡುವುದು ಮಾತ್ರವಲ್ಲದೆ ಚರ್ಮವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಮುಖದಲ್ಲಿ ಕಲೆ ಹಾಗೂ ಸುಕ್ಕುಗಳ ಸಮಸ್ಯೆ ಇರುವವರು ಮುಖದ ಕಲೆ ಮತ್ತು ಸುಕ್ಕುಗಳನ್ನು ಹೋಗಲಾಡಿಸಲು ಆಲೂಗಡ್ಡೆ ರಸ ಮತ್ತು ಹಾಲನ್ನು ಬಳಸಿದರೆ ಪ್ರಯೋಜನಕಾರಿ.
ವಿಧಾನ : ಎರಡು ಚಮಚ ಆಲೂಗಡ್ಡೆ ರಸದಲ್ಲಿ ಅರ್ಧ ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ಹಾಲನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ. ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಸುಕ್ಕು ಬೇಗನೆ ಕಡಿಮೆಯಾಗಿ, ಚರ್ಮವನ್ನು ಬಿಗಿಗೊಳಿಸುತ್ತದೆ.
ಮುಖಕ್ಕೆ ಹೊಳಪು ನೀಡುತ್ತದೆ :
ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ಇದು ಉತ್ತಮವಾಗಿದ್ದು, ಸುಲಭವಾಗಿ ಲಭ್ಯವಿರುವ ಅಡುಗೆ ಪದಾರ್ಥವಾದ ಆಲೂಗೆಡ್ಡೆಯೊಂದಿಗೆ ಗಾಢ ಚರ್ಮದ ಹೊಳಪುಗಾಗಿ ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಿ, ಪ್ರಯೋಜನ ಪಡೆಯಿರಿ. ಇದರಿಂದ ಮುಖದ ಕಾಂತಿ ದುಪ್ಪಟ್ಟಾಗುತ್ತದೆ.
ವಿಧಾನ : ಅರ್ಧ ಆಲೂಗಡ್ಡೆಯನ್ನು ತುರಿ ಮಾಡಿಕೊಳ್ಳಿ. ಜೊತೆಗೆ ಅರ್ಧ ಚಮಚ ಕಡಲೆಹಿಟ್ಟು ಮತ್ತು ಅರ್ಧ ಚಮಚ ನಿಂಬೆಯನ್ನು ಸೇರಿಸಿ, ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದು ನಿಮ್ಮ ಮುಖವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮುಖಕ್ಕೆ ಹೊಳಪು ನೀಡುತ್ತದೆ. ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Morning Vastu tips: ನೀವು ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಬೇಡಿ … ಮಾಡಿದರೆ…ಈ ಅನಾಹುತ ಖಂಡಿತ
Comments are closed.