Soujanya Case: ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣ : ಆ.28ರಂದು ಬೃಹತ್ ಬೆಳ್ತಂಗಡಿ ಚಲೋ ಮಹಾ ಧರಣಿ ! ಖುದ್ದು ನೇತೃತ್ವ ವಹಿಸಿಕೊಂಡ ಶ್ರೀ ವಸಂತ ಬಂಗೇರ !!

Dharmasthala Sowjanya rape and murder case Belthangady chalo protest held on August 28th for re investigation of Sowjanya case

Sowjanya Case: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ (Sowjanya case) ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹ ಕೇಳಿಬರುತ್ತಿದೆ. ಸುಮಾರು 11 ವರ್ಷಗಳಾದರೂ ಇನ್ನೂ ಆರೋಪಿ ಪತ್ತೆಯಾಗದ, ಶಿಕ್ಷೆಯಾಗದ ಹಿನ್ನೆಲೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಅಂತೆಯೇ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಆಗಸ್ಟ್ 28ರಂದು ಬೆಳ್ತಂಗಡಿಯಲ್ಲಿ ಧರಣಿ ನಡೆಯಲಿದೆ.

ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Sowjanya murder case protest) ಇದೀಗ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹೋರಾಟದ ತೀವ್ರತೆ ಹೆಚ್ಚುತ್ತಿದೆ. ಕರಾವಳಿ ಭಾಗದಲ್ಲಿ ತಾಲ್ಲೂಕು, ತಾಲ್ಲೂಕುಗಳಲ್ಲಿ ಹೋರಾಟದ ಸಮಿತಿಗಳು ರಚನೆಗೊಂಡಿವೆ. ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕರಾವಳಿ ಜನರು ಜಾಗೃತರಾಗಿದ್ದಾರೆ. ಇದೀಗ ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಮರುತನಿಖೆ ಆಗಬೇಕು ಎಂದು ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಆಗಸ್ಟ್‌ 28 ರಂದು ಚಲೋ ಬೆಳ್ತಂಗಡಿ ಮಹಾಧರಣಿ ಕಾರ್ಯಕ್ರಮ ಬೆಳ್ತಂಗಡಿ (Belthangady) ಮಿನಿವಿಧಾನಸೌಧದ ಬಳಿ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ ವಸಂತ
ಬಂಗೇರ (Vasanth Bangera) ಅವರು, ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಬಡ, ಮುಗ್ದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು ಎಂಬ ಒಂದೇ ಉದ್ದೇಶದಿಂದ ಈ ಪ್ರತಿಭಟನೆ ನಡೆಯಲಿದೆ. ಸಿಬಿಐ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಗಳು ಸೌಜನ್ಯ ಅತ್ಯಾಚಾರ, ಕೊಲೆ ಪುಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಅನುಮಾನಗಳನ್ನು ಬಲಗೊಳಿಸಿದೆ. ತನಿಖೆಯ ಸಂದರ್ಭ ಸಿಬಿಐ ಪ್ರಭಾವಕ್ಕೊಳಗಾಗಿ ಸಂತೋಷ್ ರಾವ್ ಮೇಲೆ ಆರೋಪ ಪಟ್ಟಿ ಹೊರಿಸಿರುವ ಸಾಧ್ಯತೆಯನ್ನು ಎತ್ತಿತೋರಿಸಿದೆ. ಈ ಹಿನ್ನಲೆಯಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು, ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಧರ್ಮಸ್ಥಳ, ಉಜಿರೆ ಭಾಗಗಳಲ್ಲಿ ನಡೆದಿರುವ ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕ, ಕಾರ್ಮಿಕ ಮುಖಂಡ ಬಿ.ಎಂ. ಭಟ್ ಮಾತನಾಡಿದ್ದು, ನಿಜವಾದ ಆರೋಪಿ ಯಾರು ಎಂದು ಪತ್ತೆಯಾಗಬೇಕು ಎಂಬುದೇ ನಮ್ಮ ಹೋರಾಟದ ಉದ್ದೇಶ. ಧರಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಭಾಗವಹಿಸಲಿವೆ ಎಂದು ಹೇಳಿದರು.

ಇದನ್ನೂ ಓದಿ: GruhaJyoti Scheme: ಗೃಹಜ್ಯೋತಿ ಕುರಿತು ಬಿಗ್‌ ಅಪ್ಡೇಟ್‌! ಈ ದಿನಾಂಕದೊಳಗೆ ಹಿಂಬಾಕಿ ಪಾವತಿಸಿ, ಇಲ್ಲದಿದ್ದರೆ ಉಚಿತ ವಿದ್ಯುತ್ ಸಿಗಲ್ಲ !!!

Comments are closed.