Bihar: ದಿವ್ಯ ನಿರ್ಲಕ್ಷ್ಯ!!! ರೋಗಿಗೆ ಯೂರಿನ್ ಬ್ಯಾಗ್ ಬದಲಿಗೆ ಸ್ಪ್ರೈಟ್ ಬಾಟಲ್ ಬಳಕೆ!

Bihar news Sprite bottle instead of urine collection bag attached to patient in Bihar hospital

Bihar: ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಆಸ್ಪತ್ರೆಯ ಸಿಬ್ಬಂದಿಗಳು ಯೂರಿನ್‌ ಬ್ಯಾಗ್‌ ಬದಲು ಸ್ಪ್ರೈಟ್ ಬಾಟಲ್ ಬಳಸಿದ ಆಘಾತಕಾರಿ ಘಟನೆ ಬಿಹಾರದ (Bihar) ಜಮೈ ಸದರ್ ಆಸ್ಪತ್ರೆಯಲ್ಲಿ (hospital) ನಡೆದಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ (government hospital) ವೈದ್ಯಕೀಯ ಉಪಕರಣಗಳ ಕೊರತೆ ಇದ್ದು, ಈ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿಗಳು ರೋಗಿಗೆ ಯೂರಿನ್‌ ಬ್ಯಾಗ್‌ ಬದಲಿಗೆ ಸ್ಪ್ರೈಟ್ ಬಾಟಲಿ ಅಳವಡಿಸಿದ್ದಾರೆ ಎನ್ನಲಾಗಿದೆ.

ರೈಲಿನಿಂದ (train) ಬಿದ್ದು ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ರೋಗಿಯ ತಪಾಸಣೆ ನಡೆಸಿದ ವೈದ್ಯರು ರೋಗಿಗೆ ಯೂರಿನ್‌ ಬ್ಯಾಗ್‌ (urin bag) ಅಳವಡಿಸುವಂತೆ ನರ್ಸ್ ಗೆ ಹೇಳಿದ್ದಾರೆ. ಆದರೆ, ನರ್ಸ್ (nurse) ಅಳವಡಿಸಿದ್ದು ಯೂರಿನ್ ಬ್ಯಾಗ್ ಅಲ್ಲ ಬದಲಿಗೆ ಸ್ಪ್ರೈಟ್ ಬಾಟಲ್ (sprite bottle). ಕಾರಣ ಆಸ್ಪತ್ರೆಯಲ್ಲಿ ಯೂರಿನ್ ಬ್ಯಾಗ್ ಲಭ್ಯವಾಗಿಲ್ಲ, ಯೂರಿನ್ ಬ್ಯಾಗ್ ಕೊರತೆ ಇತ್ತು. ಈ ಹಿನ್ನೆಲೆಯಲ್ಲಿ ಸ್ಪ್ರೈಟ್ ಬಾಟಲ್ ಅಳವಡಿಸಿದ್ದಾರೆ.

ಈ ವಿಚಾರ ಆಸ್ಪತ್ರೆಯ ವ್ಯವಸ್ಥಾಪಕರ ಗಮನಕ್ಕೆ ಬಂದು, ತಕ್ಷಣ ಬಾಟಲಿಯನ್ನು ತೆಗೆದು ಯೂರಿನ್‌ ಬ್ಯಾಗ್‌ ಬಳಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಘಟನೆಗೆ ಕಾರಣರಾದ ಆರೋಗ್ಯ ಕಾರ್ಯಕರ್ತರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. ಅಂದಹಾಗೆ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: Mysuru: ನನ್ನ ಮಗಳನ್ನು ನಿನಗೆ ಕೊಡಲ್ಲ ಎಂದ ತಂದೆ! ಅಷ್ಟೇ, ಕಷ್ಟಪಟ್ಟು ಬೆಳೆಸಿದ್ದ 850 ಅಡಿಕೆ ಗಿಡಗಳನ್ನೇ ತುಂಡರಿಸಿ ಬಿಟ್ಟ ಯುವಕ!

Comments are closed.