Home latest Wedding Bill: ಮದುವೆಗೆ ಗರಿಷ್ಠ 100 ಜನಕ್ಕೆ ಮಾತ್ರ ಪರ್ಮಿಷನ್, 10 ಬಗೆಯ ಖಾದ್ಯಕ್ಕೆ ಮಾತ್ರ...

Wedding Bill: ಮದುವೆಗೆ ಗರಿಷ್ಠ 100 ಜನಕ್ಕೆ ಮಾತ್ರ ಪರ್ಮಿಷನ್, 10 ಬಗೆಯ ಖಾದ್ಯಕ್ಕೆ ಮಾತ್ರ ಅವಕಾಶ: ಲೋಕಸಭೆಯಲ್ಲಿ ಹೊಸ ಮಸೂದೆ ಮಂಡನೆ !

Wedding Bill
Image source: ABP live

Hindu neighbor gifts plot of land

Hindu neighbour gifts land to Muslim journalist

Wedding Bill: ಮದುವೆ ಎಷ್ಟು ಅದ್ದೂರಿಯಾಗಿ ನಡೆಸುತ್ತಾರೆ ಅನ್ನೋದು ಮುಖ್ಯವಲ್ಲ, ಹೇಗೆ ದಂಪತಿಗಳು ಬಾಳುತ್ತಾರೆ ಅನ್ನೋದು ಮುಖ್ಯವಾಗುತ್ತದೆ. ಇನ್ನು ಮದುವೆ ಸಮಾರಂಭಗಳು ಮುಖ್ಯವಾಗಿ ವಧುವಿನ ಕುಟುಂಬದ ಮೇಲೆ ಆರ್ಥಿಕ ಹೊರೆ ಉಂಟುಮಾಡುತ್ತದೆ. ಜನರು ಐಷಾರಾಮಿ ಮದುವೆಗಳನ್ನು ನಡೆಸಲು ತಮ್ಮ ಆಸ್ತಿಗಳು ಮತ್ತು ಪ್ಲಾಟ್‌ಗಳನ್ನು ಮಾರಾಟ ಮಾಡುವಂತಾಗುತ್ತದೆ ಹಾಗೂ ಸಾಲಗಳನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ ಹೆಣ್ಣು ಹೆತ್ತವರ ಹೊರೆ ತಗ್ಗಿಸಲು ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ಅವರು ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ.

ಪಂಜಾಬ್‌ನ ಖಾದೂರ್ ಸಾಹಿಬ್‌ನ ಕಾಂಗ್ರೆಸ್ ಸಂಸದರಾಗಿರುವ ಜಸ್ಬೀರ್ ಸಿಂಗ್ ಗಿಲ್
‘ವಿಶೇಷ ಸಂದರ್ಭಗಳಲ್ಲಿ ದುಂದು ವೆಚ್ಚಗಳ (Wedding Bill)ತಡೆ ವಿಧೇಯಕ’ ಮಂಡಿಸಿರುವ ಸಂಸದ ಗಿಲ್ ಮದುವೆ ಸಮಾರಂಭಗಳಲ್ಲಿ ವಧುವಿನ ಮನೆಗೆ ಆಗಮಿಸುವ ಆಹ್ವಾನಿತ ಅತಿಥಿಗಳ ಸಂಖ್ಯೆಯನ್ನು ಕೇವಲ 50ಕ್ಕೆ ಸೀಮಿತಗೊಳಿಸಬೇಕು ಹಾಗೂ ತಯಾರಿಸುವ ಒಟ್ಟಾರೆ ಖಾದ್ಯಗಳ ಪ್ರಮಾಣವನ್ನು 10ಕ್ಕೆ ನಿಗದಿಪಡಿಸಬೇಕು ಎಂದು ಖಾಸಗಿ ವಿಧೇಯಕದಲ್ಲಿ ತಿಳಿಸಲಾಗಿದೆ.

‘ವಿಶೇಷ ಸಂದರ್ಭಗಳಲ್ಲಿ ದುಂದು ವೆಚ್ಚಗಳ ತಡೆ ವಿಧೇಯಕ’ ಎಂಬ ಶೀರ್ಷಿಕೆಯ ಪ್ರಸ್ತಾಪಿತ ಮಸೂದೆಯು, ಸೌಲಭ್ಯ ವಂಚಿತ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಹಾಗೂ ಹೆಣ್ಣು ಮಕ್ಕಳನ್ನು ತಾಯಿಯ ಗರ್ಭದಲ್ಲಿಯೇ ಸಾಯಿಸುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ತಗ್ಗಿಸುವಲ್ಲಿ ಗಮನಾರ್ಹ ಪಾತ್ರ ವಹಿಸಲಿದೆ ಎಂದು ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ತಿಳಿಸಿದ್ದಾರೆ.

ಹಾಗೆಯೇ ಸಮಾರಂಭಗಳಲ್ಲಿ ನೀಡುವ ಉಡುಗೊರೆಗಳು 2,500 ರೂ ಮೌಲ್ಯವನ್ನು ದಾಟದಂತೆ ಮಿತಿ ಹೇರಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ದುಬಾರಿ ಹಾಗೂ ನಿರುಪಯುಕ್ತ ಉಡುಗೊರೆಗಳ ಬದಲು ಅವಶ್ಯಕತೆ ಇರುವವರಿಗೆ, ಅನಾಥರು ಅಥವಾ ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ದೇಣಿಗೆ ನೀಡಬಹುದು ಎಂದು ತಿಳಿಸಲಾಗಿದೆ.

ಪಂಜಾಬ್‌ನ ಖಾದೂರ್ ಸಾಹಿಬ್‌ನ ಸಂಸದರಾದ ಗಿಲ್, ದುಂದು ವೆಚ್ಚಗಳನ್ನು ತಡೆಯುವುದು ಮಸೂದೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಇದು ಹೆಣ್ಣು ಭ್ರೂಣ ಪರೀಕ್ಷೆಯಂತಹ ಕೃತ್ಯಗಳಿಗೆ ಕಡಿವಾಣ ಬೀಳಲು ಸಾಧ್ಯ ಎಂದಿದ್ದಾರೆ.

ಎರಡೂ ಕುಟುಂಬಗಳಿಂದ ಒಟ್ಟು ಗರಿಷ್ಠ 100 ಮಂದಿಗೆ ಮಾತ್ರ ಆಹ್ವಾನ ನೀಡಬೇಕು. ಮದುವೆಯಲ್ಲಿ ಬಡಿಸುವ ಆಹಾರ ಖಾದ್ಯಗಳ ಸಂಖ್ಯೆ 10ಕ್ಕಿಂತ ಹೆಚ್ಚು ಇರಬಾರದು ಎಂದಿರುವ ಗಿಲ್, ತಮ್ಮ ಕುಟುಂಬದಲ್ಲಿಯೂ ಇದೇ ನಿಯಮ ಪಾಲನೆ ಮಾಡಿರುವುದಾಗಿ ಹೇಳಿದ್ದಾರೆ. ತಮ್ಮ ಮಗ ಮತ್ತು ಮಗಳ ಮದುವೆ ನಡೆದಾಗ 30- 40ಕ್ಕಿಂತ ಹೆಚ್ಚು ಅತಿಥಿಗಳಿಗೆ ಆಹ್ವಾನ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಇನ್ನು ಮದುವೆಗೆ 5 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡುವವರು ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಶೇ.10 ರಷ್ಟು ಹಣವನ್ನು ನೀಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಆದರೆ ಐಷಾರಾಮಿ ಮದುವೆಗಳಿಗೆ ಕಡಿವಾಣ ಹಾಕಲು ಮಸೂದೆ ಮಂಡನೆ ಮಾಡಿರುವುದು ಇದು ಮೊದಲ ಸಲವೇನಲ್ಲ. 2017ರಲ್ಲಿ ಬಿಜೆಪಿ ಸಂಸದ ಗೋಪಾಲ್ ಚಿನಯ್ಯ ಶೆಟ್ಟಿ ಅವರು ಮದುವೆ ಹಾಗೂ ಬೇರೆ ಸಮಾರಂಭಗಳಲ್ಲಿ ಅನಗತ್ಯ ವೆಚ್ಚ ತಡೆಯುವ ಮಸೂದೆಯನ್ನು ಮಂಡಿಸಿದ್ದರು ಎಂದಿದ್ದಾರೆ.

ಇನ್ನು ಗಿಲ್ ಈ ಮಸೂದೆ ಮಂಡಿಸಲು ಕಾರಣವಾದ ತಮ್ಮದೇ ಅನುಭವವನ್ನು ಗಿಲ್ ಹಂಚಿಕೊಂಡಿದ್ದಾರೆ. 2019ರಲ್ಲಿ ಫಗ್ವಾರಾದಲ್ಲಿ ಅವರು ಮದುವೆಯೊಂದಕ್ಕೆ ಹಾಜರಾಗಿದ್ದರು. ಅಲ್ಲಿ 285 ಟ್ರೇಗಳಲ್ಲಿ ಆಹಾರವಿತ್ತು. ಆದರೆ ಅವುಗಳಲ್ಲಿ ಕನಿಷ್ಠ 129 ಟ್ರೇಗಳನ್ನು ಯಾರೂ ಮುಟ್ಟಲು ಕೂಡ ಹೋಗಿರಲಿಲ್ಲ. ಅದೆಲ್ಲವೂ ವ್ಯರ್ಥವಾಗಿದ್ದವು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: “ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ಅದು ಬ್ರಾಡ್‌ ಆಗಿ ಇರಬೇಕು ಎಂದ ನಾಯಕಿ ನಟಿ ” ಅಬ್ಬೂ….ಹೀಗೂ ಉಂಟಾ ?!