Heart attack: ವಾರದಲ್ಲಿ ಸೋಮವಾರವೇ ಅತಿ ಹೆಚ್ಚು ಹಾರ್ಟ್ ಅಟ್ಯಾಕ್ – ಸಂಶೋಧನೆ! ಸ್ಪಂದನಾರಿಗೂ ಸೋಮವಾರವೇ ಬಂದ ಆಘಾತ !
Health news heart attack shocking news reason for more heart attacks on monday
Heart Attack: ಇದೀಗ ತಾನೇ ಕರ್ನಾಟಕವನ್ನು ತಲ್ಲಣ ಗೊಳಿಸಿದ ಸುದ್ದಿ ಬಂದಿದ್ದು ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಕೇವಲ 31 ವರ್ಷದಲ್ಲಿ ಹೃದಯಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ತೀರಾ ಚಿಕ್ಕ ವಯಸ್ಸಿನಲ್ಲಿ ಹೃದಯಘಾತಕ್ಕೆ ಬಲಿಯಾಗಿ ಕನ್ನಡಿಗರನ್ನು ದೊಡ್ಡ ಶಾಕ್ ಗೆ ತಳ್ಳಿದೆ ಈ ಘಟನೆ. ಈ ಸಾವಿಗೆ ಕಾರಣ ಹುಡುಕುವ ಕೆಲಸ ನಡೆಯುತ್ತಿದೆ. ಸಾಮಾನ್ಯವಾಗಿ ಚಿಕ್ಕ ಪ್ರಾಯದಲ್ಲಿ ಅದು ಮಹಿಳೆಯರು ಹೃದಯಘಾತಕ್ಕೆ ಒಳಗಾಗುವುದು ತುಂಬಾ ಅಪರೂಪ. ಆದರೆ ಈಗ ಹೃದಯಾಘಾತದಿಂದ ಸಾವು ಸಂಭವಿಸಿದೆ. ಇದರ ಮಧ್ಯ ಒಂದು ಹೊಸ ಸುದ್ದಿ ಇದೀಗ ಮಹತ್ವ ಪಡೆದುಕೊಳ್ಳುತ್ತಿದ್ದು ಅತ್ಯಂತ ಹೆಚ್ಚು ಹೃದಯಾಘಾತಗಳು ಸೋಮವಾರವೇ ಸಂಭವಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ಇದೇನಾ ಅಸಲಿ ಕಾರಣ! ಅಬ್ಬಬ್ಬಾ.. ಭಯ ಹುಟ್ಟಿಸುತ್ತಿದೆ ಆ ಒಂದು ರೀಸನ್ ?
ಹೌದು, ಒಂದು ಅಧ್ಯಯನದ ಪ್ರಕಾರ, ಜನರು ವಾರದ ಉಳಿದ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು (Heart Attack) ಅನುಭವಿಸುವ ಸಾಧ್ಯತೆಯಿದೆ ಎನ್ನುವ ಮಹತ್ವದ ವಿಷಯ ಬಹಿರಂಗವಾಗಿದೆ. ಇವತ್ತು ಕೂಡ ಸೋಮವಾರ. ಸೋಮವಾರವೇ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಅವರು ನಿಧನ ಹೊಂದಿದ್ದಾರೆ. ಇದು ಕಾಕತಾಳಿಯ ಎನಿಸಿದರು ಸೋಮವಾರ ದಿನ ಅಧಿಕ ಹೃದಯ ವಾದಗಳು ಸಂಭವಿಸುತ್ತವೆ ಎನ್ನುವುದು ವೈಜ್ಞಾನಿಕವಾಗಿ ರುವ ಅಂಶ.
ಇದನ್ನೂ ಓದಿ: ಏನಿದು ರಾಜ್ ಕುಟುಂಬಕ್ಕೆ ಹೃದಯ ಕಂಟಕ? ಪುನೀತ್ ರಾಜ್ ನಿಧನದ ಬೆನ್ನಲ್ಲೇ ಮತ್ತೊಂದು ಎಳೆಯ ರಾಜ್ ಕುಡಿ ನಿರ್ಗಮನ !
ಬೆಲ್‌ಫಾಸ್ಟ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ಟ್ರಸ್ಟ್ ಮತ್ತು ಐರ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಕೆಲವು ವೈದ್ಯರು ಈ ಅಧ್ಯಯನವನ್ನು ಮಾಡಿದ್ದು, ಆ ಸಮ್ಮೇಳನದಲ್ಲಿ ಒಂದು ಹೊಸ ಸಂಶೋಧನೆಯನ್ನು ಪ್ರಕಟಿಸಲಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ ಸಮ್ಮೇಳನದಲ್ಲಿ ಈ ರಿಪೋರ್ಟ್ ಅನ್ನು ಪ್ರಸ್ತುತಪಡಿಸಲಾಗಿದೆ. ಈ ಸಂಶೋಧನೆಗೆ ಒಟ್ಟು 20,000 ಕ್ಕೂ ಹೆಚ್ಚು ರೋಗಿಗಳನ್ನು ಅಧ್ಯಯನ ಮಾಡಲಾಗಿದ್ದು, ಸೋಮವಾರದ ದಿನವೇ ಹೃದಯಾಘಾತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಸಾಧ್ಯತೆ ಇದೆ ಕಂಡು ಬಂದಿದೆ. ಈ ಅಧ್ಯಯನದಲ್ಲಿ, ವಾರದ ರಜಾ ದಿನ ಭಾನುವಾರದ ನಂತರ ಸೋಮವಾರ ಕೆಲಸದ ಆರಂಭದ ದಿನವಾಗಿದೆ. ಈ ದಿನ ಹೆಚ್ಚಿನ ಒತ್ತಡದ ದಿನವಾಗಿದೆ. ಈ ಒತ್ತಡದಿಂದ ಸೋಮವಾರದಂದು ಹೆಚ್ಚಿನ ಪ್ರಮಾಣದಲ್ಲಿ ಗಂಭೀರ ಹೃದಯಾಘಾತ ಸಂಭವಿಸುವ ಸಾಧ್ಯತೆ ಅಧಿಕ ಎಂದು ಈ ಅಧ್ಯಯನ ತಿಳಿಸಿದೆ.
ಇದಕ್ಕೆ ಕೊರೋನರಿ ಆರ್ಟಿಲರಿ ಸಂಪೂರ್ಣವಾಗಿ ಬ್ಲಾಕ್ ಆದ ಸಂದರ್ಭದಲ್ಲಿ ಉಂಟಾಗುತ್ತದೆ. ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಸ್ಕುಲಾರ್ ಸೊಸೈಟಿ ಸಮ್ಮೇಳನದಲ್ಲಿ ಅಧ್ಯಯನದ ವರದಿ ಮಂಡಿಸಲಾಗಿದೆ. ಈ ಕೆಲಸದ ವಾರದಲ್ಲಿ ಆರಂಭದ ದಿನ ಅಂದರೆ ಸೋಮವಾರ ಎಸ್.ಟಿ. -ಸೆಪ್ಟೆಂಟ್ ಎಲಿವೇಶನ್ ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಹೃದಯಘಾತದ ದರ ಹೆಚ್ಚಾಗಿದೆ. ಸೋಮವಾರ ಬಿಟ್ಟರೆ ಉಳಿದಂತೆ ಭಾನುವಾರ ಕೂಡ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ ಎಂದು ಈ ಹೊಸ ಅಧ್ಯಯನದಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಹೃದಯಘಾತ! ಸ್ಯಾಂಡಲ್ ವುಡ್ ಗೆ ಭಾರಿ ಶಾಕ್ ಕೊಟ್ಟ ನಿಧನ ಸುದ್ದಿ
2013 ರಿಂದ 2018ರ ನಡುವೆ ಐರ್ಲೆಂಡ್ ನಲ್ಲಿ ಗಂಭೀರ ರೀತಿಯ ಹೃದಯಾಘಾತಕ್ಕೆ ಒಳಗಾದ 10,528 ರೋಗಿಗಳ ದತ್ತಾಂಶಗಳ ವಿಶ್ಲೇಷಣೆ ನಡೆಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಬೆಲ್ ಫಾಸ್ಟ್ ಹೆಲ್ತ್ ಅಂಡ್ ಸೋಷಲ್ ಕೇರ್ ಟ್ರಸ್ಟ್ ಅಂಡ್ ರಾಯಲ್ ಕಾಲೇಜ್ ಆಫ್ ಸರ್ಜನ್ ಸಂಶೋಧಕರು ಅಧ್ಯಯನ ಕೈಗೊಂಡಿದ್ದು, ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಅಂದರೆ ವಿಪರೀತ ಮಾನಸಿಕ ಒತ್ತಡಕ್ಕೆ ಒಳಗಾದಾಗ ಹೃದಯದ ಸ್ನಾಯುಗಳಿಗೇ ಬೇಕಾದ ರಕ್ತವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಹೋಗುವ ಮೂಲಕ ಹೃದಯಾಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚುವುದಾಗಿದೆ. ಒಟ್ಟಾರೆ ಹೇಳಬೇಕಾದರೆ, ಸೋಮವಾರದ ಕೆಲಸದ ಒತ್ತಡದಿಂದ ಸೋಮವಾರ ದಿನ ಪ್ರಪಂಚದಾದ್ಯಂತ ಹೆಚ್ಚು ಹೃದಯಗತಗಳು ಸಂಭವಿಸುತ್ತವೆ ಎನ್ನಲಾಗಿದೆ.
Comments are closed.