Vijayawada : ಮಹಿಳೆಯಿಂದ ಬೆತ್ತಲೆ ಪೂಜೆ – ಶಾಸಕನ ವಿರುದ್ಧ ಗಂಭೀರ ಆರೋಪ ಮಾಡಿ ಸೆಲ್ಫಿ ಫೋಟೋ ಶೇರ್ ಮಾಡಿದ ಮಹಿಳೆ !

Vijayawada news Woman Shobha Rani outrage against Congress MLA Hafeez khan

Vijayawada: ಕರ್ನೂಲ್​ನ ವೈಎಸ್​ಆರ್​ ಕಾಂಗ್ರೆಸ್​ (congress) ಪಕ್ಷದ ಶಾಸಕ ಹಫೀಜ್​ ಖಾನ್​ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ (social media) ಭಾರೀ ಸುದ್ದಿಗಳು ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು 3 ಕೋಟಿ ರೂಪಾಯಿ ಹಣದ ವಿಚಾರವಾಗಿ ಶಾಸಕರ ಜತೆ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾನು ತಪ್ಪಾಗಿ ನಡೆದುಕೊಂಡಿಲ್ಲ ಎಂದು ಶಾಸಕ ಹಫೀಜ್ ಖಾನ್ ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಲ್ಲೇ ಶೋಭಾರಾಣಿ ಹೆಸರಲ್ಲಿ ಸೆಲ್ಫಿ ವಿಡಿಯೋವೊಂದು ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

ಶೋಭಾರಾಣಿ ಶಾಸಕನ ವಿರುದ್ಧ ಗಂಭೀರ ಆರೋಪ ಮಾಡಿ ಸೆಲ್ಫಿ ಫೋಟೋ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ, ಶಾಸಕರು ನನಗೆ ಕಿರುಕುಳ ನೀಡಿದ್ದಾರೆ. ಅಲ್ಲದೆ, ಬೆತ್ತಲೆ ಪೂಜೆ ಮಾಡಿಸಿದ್ದಾರೆ ಎಂದು ಆರೊಪಿಸಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಮಹಿಳೆ ಹೇಳಿದ್ದಾರೆ.

ವಿಜಯವಾಡದ (Vijayawada) ಒನ್​ ಟೌನ್​ ನಿವಾಸಿ ಶೋಭಾ ಫ್ಯಾಶನ್​ ಡಿಸೈನರ್ (fashion designer) ಹಾಗೂ ಲೆಕ್ಚರರ್ (lecturer) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆ ಹಿಂದಿನ ಚುನಾವಣೆಯಲ್ಲಿ (election) ನಾಮಪತ್ರ ಸಲ್ಲಿಸಿದ್ದರು. ರಾಜಕೀಯಕ್ಕೆ ಬಂದು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ ಬಳಿಕ ಶೋಭಾ ಶಾಸಕರಿಂದ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವರ್ಷದಿಂದ ಆಕೆಯ ಜೊತೆಗೆ ಶಾಸಕರ ವರ್ತನೆ ವಿಭಿನ್ನ, ವಿಚಿತ್ರವಾಗಿದ್ದು, ಇದರಿಂದ ಮಹಿಳೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಶಾಸಕರು ಶೋಭಾಳನ್ನು ಹೈದರಾಬಾದ್‌ಗೆ (hydarabad) ಕರೆದೊಯ್ದು ಬೆತ್ತಲೆಯಾಗಿ ಪೂಜೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ನಮ್ಮ ಮೇಲೆ ಅನೇಕ ಬಾರಿ ದಾಳಿ ಮಾಡಿದ್ದಾರೆ. ಕೊಲೆ ಮಾಡಲು ಯತ್ನಿಸಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ. ಶಾಸಕರ ಕಿರುಕುಳದಿಂದ ನನ್ನ ಕುಟುಂಬ ಸಂಕಷ್ಟಕ್ಕೆ ಸಿಲುಕಲಿದೆ ಎಂದಿದ್ದಾರೆ.

ಇಷ್ಟು ಮಾತ್ರವಲ್ಲದೆ, ಶಾಸಕರು ಒನ್​ಟೌನ್​ ಸರ್ಕಲ್​ ಇನ್ಸ್​ಪೆಕ್ಟರ್​ ‘ಗೆ ಹೇಳಿ ಯಾವುದೇ ಸಾಕ್ಷಿಗಳಿಲ್ಲದೆ ಶೋಭಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಂಟು ತಿಂಗಳ ಹಿಂದೆ ಎಫ್​ಐಆರ್​ ದಾಖಲಿಸಿದ್ದರು. ಆ ಸಮಯದಲ್ಲಿ ಗೃಹ ಸಚಿವರಿಗೆ ದೂರು ನೀಡಿ ಸಾಕ್ಷಿಗಳನ್ನು ಸಹ ನೀಡಿದ್ದೆ. ಇದೀಗ ಎರಡು ದಿನಗಳ ಹಿಂದೆ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಶಾಸಕ ಹಫೀಜ್ ಖಾನ್ ಅವರ ಅನುಯಾಯಿ ಶೋಭಾ ಅವರಿಗೆ ವಾಟ್ಸ್​ಆ್ಯಪ್‌ನಲ್ಲಿ ಎಫ್‌ಐಆರ್ ಪ್ರತಿಗಳನ್ನು ಕಳುಹಿಸುತ್ತಿದ್ದು, ನನಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿದ್ದಾರೆ. ಇವುಗಳಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಎಸ್ಪಿಗೆ ಕಳುಹಿಸಲಾಗಿದೆ ಎಂದು ಶೋಭಾರಾಣಿ ತಿಳಿಸಿದ್ದಾರೆ. ಇನ್ನೂ ಕೂಡ ಮೇಲಾಧಿಕಾರಿಗಳು ಸ್ಪಂದಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋದಲ್ಲಿ ಶೋಭಾ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬೊಂಬಾಟ್ ಗಿಫ್ಟ್: DA 45 ಶೇ. ಗೆ ಏರಿಕೆ ಆಗುವ ಎಲ್ಲಾ ಸಾಧ್ಯತೆ !

Comments are closed.