iPhone Offer: ಅಮೆಜಾನ್ ಗ್ರೇಟ್ ಫ್ರೀಡಮ್ ಸೇಲ್ ; ಐಫೋನ್ 14 ಬೆಲೆ ಕೇಳಿದ್ರೆ ಓಡಿ ಹೋಗಿ ಈಗ್ಲೇ ಖರೀದಿಸ್ತೀರಿ !
iPhone 14 smartphone technology news huge discount on iphone 14 in Amazon great freedom day sale
iPhone Offer: ಆಪಲ್ ಸಂಸ್ಥೆಯ ಐಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿವೆ. ಎಲ್ಲರೂ ಐಫೋನ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಇದರ ಬೆಲೆ ಕೈಗೆಟುಕದಷ್ಟು ಎತ್ತರದಲ್ಲಿದೆ. ಜನ ಸಾಮಾನ್ಯರಂತೂ ಇದನ್ನು ಕೊಳ್ಳುವ ಕನಸು ಕಾಣಬೇಕೇ ಹೊರತು ಖರೀದಿಸಲು ಸಾಧ್ಯವಾಗೋದಿಲ್ಲ, ಅಷ್ಟು ಬೆಲೆ ಇದೆ. ಆದರೆ ಇದೀಗ ಈ ಐಫೋನ್ ಮೇಲೆ ಭರ್ಜರಿ ಆಫರ್ (iPhone Offer) ನೀಡಿದ್ದು, ಇದರಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಫೋನ್ ಲಭ್ಯವಾಗಲಿದೆ. ಹೌದು, ಐಫೋನ್ 14 ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ನೀವಂತೂ ಐಫೋನ್ 14 (iPhone 14) ಬೆಲೆ ಕೇಳಿದ್ರೆ ಓಡಿ ಹೋಗಿ ಈಗ್ಲೇ ಖರೀದಿಸ್ತೀರಿ !
ಆಪಲ್ ಐಫೋನ್ 14 (128 ಜಿಬಿ) ನೀಲಿ ರೂಪಾಂತರದ ಮೂಲ ಬೆಲೆ ರೂ 79,900, ಆದರೆ ಗ್ರಾಹಕರಿಗೆ ಕೊಡುಗೆಯ ಅಡಿಯಲ್ಲಿ, ಈ ಮಾದರಿಯನ್ನು 16% ರಿಯಾಯಿತಿಯೊಂದಿಗೆ ಕೇವಲ ರೂ 67,499 ಕ್ಕೆ ನೀಡಲಾಗುತ್ತಿದೆ. ಜೊತೆಗೆ ಈ ರೂಪಾಂತರದಲ್ಲಿ ಬ್ಯಾಂಕ್ ಕೊಡುಗೆಗಳನ್ನು ಸಹ ಸೇರಿಸಲಾಗಿದೆ. ನೀವು SBI ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನಿಮಗೆ 1000 ರೂಗಳಲ್ಲಿ ಗರಿಷ್ಠ 10% ರಿಯಾಯಿತಿಯನ್ನು ನೀಡಲಾಗುತ್ತದೆ, ಈ ರಿಯಾಯಿತಿ EMI ನಲ್ಲಿ ಲಭ್ಯವಿರುತ್ತದೆ.
ಇದರೊಂದಿಗೆ, ನೀವು SBI ಕ್ರೆಡಿಟ್ ಕಾರ್ಡ್ ನೊಂದಿಗೆ EMI ಅಲ್ಲದ ವಹಿವಾಟುಗಳನ್ನು ಮಾಡಿದಾಗ ನಿಮಗೆ 10% ಗರಿಷ್ಠ 750 ರೂಗಳ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ. ಹೆಚ್ಚುವರಿ ಕೊಡುಗೆಯ ಅಡಿಯಲ್ಲಿ, ನಿಮಗೆ 500 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ, ಇದರಲ್ಲಿ ನೀವು SBI ಕ್ರೆಡಿಟ್‌ನಿಂದ 9 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ EMI ವಹಿವಾಟುಗಳನ್ನು ಮಾಡಬಹುದು.
ಐಫೋನ್ 14 ಸ್ಮಾರ್ಟ್ ಫೋನ್ ಟೀಚರ್ಸ್:-
ಈ ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಹಾಗೂ ಫ್ಲಾಟ್-ಎಡ್ಜ್ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ನ ವಿನ್ಯಾಸ ಪಡೆದಿದೆ. ಐಫೋನ್ 14, 6.1-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಈ ಡಿಸ್ಪ್ಲೇ 1200 ನಿಟ್ಸ್ ಬ್ರೈಟ್‌ನೆಸ್, ಹ್ಯಾಪ್ಟಿಕ್ ಟಚ್, P3 ವೈಡ್ ಕಲರ್, ಟ್ರೂ ಟೋನ್, 20,00,000:1 ಕಾಂಟ್ರಾಸ್ಟ್, ಓಲಿಯೋಫೋಬಿಕ್ ಕೋಟಿಂಗ್ ಫೀಚರ್ಸ್ ಹೊಂದಿರುವ ಉತ್ತಮ ಸ್ಮಾರ್ಟ್ ಫೋನ್(smartphone) ಆಗಿದೆ.
ಕ್ಯಾಮೆರಾ (camera) ಫೀಚರ್ಸ್ ಬಗ್ಗೆ ಹೇಳೋದಾದ್ರೆ, ಇದರಲ್ಲಿ 12ಎಮ್ಪಿ ಮುಖ್ಯ ಕ್ಯಾಮೆರಾ ಹಾಗೂ 12ಎಮ್ಪಿ ಅಲ್ಟ್ರಾ ವೈಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಐಫೋನ್ 14 ಸ್ಮಾರ್ಟ್ಫೋನ್ A15 ಬಯೋನಿಕ್ SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಪರೇಟಿಂಗ್ ಸಿಸ್ಟಮ್ ಐಓಎಸ್ 16 ನಲ್ಲಿ ಕಾರ್ಯನಿರ್ವಹಿಸಲಿದೆ.
ಐಫೋನ್ 14 ಸ್ಮಾರ್ಟ್ ಫೋನ್ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ. ಅಲ್ಲದೆ, ಈ ಸ್ಮಾರ್ಟ್ ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಇದು ಇ-ಸಿಮ್ ಆಯ್ಕೆಯನ್ನು ಹೊಂದಿದೆ. ಐಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಉತ್ತಮ ಫೀಚರ್ ನೊಂದಿಗೆ, ಕಡಿಮೆ ಬೆಲೆಗೆ ಲಭ್ಯವಾಗಲಿದೆ.
ಇದನ್ನೂ ಓದಿ: Kantara-2 : ಗುಳಿಗನ ಅಬ್ಬರ, ಕಾಂತಾರ 2 ರ ಗಗ್ಗರದ ಸದ್ದು ನಿಚ್ಚಳ: ಕಾಂತಾರ ಬಿಡುಗಡೆ ದಿನಾಂಕ ಫಿಕ್ಸ್ !
Comments are closed.