VIP Number: ಕಾರ್‌-ಬೈಕ್‌ಗೆ ಫ್ಯಾನ್ಸಿ ನಂಬರ್‌ ಹೇಗೆ ಪಡೆಯುವುದು? ಇವುಗಳಿಗೆ ತಗಲುವ ಖರ್ಚೆಷ್ಟು ಗೊತ್ತೇ?

VIP Number for car and bike and its process and price in delhi

ನಿಮಗೆ ಗೊತ್ತಿರಬಹುದು, ಕೆಲವರು ವಾಹನ ಖರೀದಿ ಮಾಡುವವರು ಕೆಲವೊಂದು ವಿಶೇಷ ನಂಬರ್‌ಗಳನ್ನು ಪಡೆಯಲು ಇಚ್ಚಿಸುತ್ತಾರೆ. ಈ ವಿಶೇಷ ಸಂಖ್ಯೆಗೆ ವಿಐಪಿ ಸಂಖ್ಯೆ ಎಂದು ಕರೆದರೆ ಇನ್ನು ಕೆಲವರು ಅದನ್ನು ಫ್ಯಾನ್ಸಿ ನಂಬರ್‌ ಎಂದು ಕರೆಯುತ್ತಾರೆ. ಕೆಲವರು ತಮ್ಮ ವಾಹನಗಳನ್ನು ತುಂಬಾ ಪ್ರೀತಿಸುವುದರಿಂದ ಅವರಿಗೆ ಇಷ್ಟವಾಗುವ ಅಥವಾ ಅವರಿಗೆ ಅದೃಷ್ಟದ ಬಾಗಿಲು ತೆರೆಯುವಂತಹ ಕೆಲವು ಸಂಖ್ಯೆಗಳನ್ನು ಪಡೆಯಲು ಅವರು ಇಷ್ಟಪಡುತ್ತಾರೆ.

ವಿಐಪಿ ಸಂಖ್ಯೆ 007, 00005, 786 ಮತ್ತು 0001 ನಂತಹ ಅನೇಕ ಸಂಖ್ಯೆಗಳನ್ನು ಒಳಗೊಂಡಿದೆ. ಈ ವಿಶಿಷ್ಟ ನಂಬರುಗಳಿಂದ ಜನರು ತಮ್ಮ ವಾಹನವನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಕಾಣಬೇಕೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ನಿಮ್ಮ ಕಾರು ಅಥವಾ ಬೈಕ್‌ಗೆ ನೀವು ವಿಐಪಿ ಸಂಖ್ಯೆಯನ್ನು ಹೇಗೆ ಪಡೆಯಬಹುದು ಎಂಬುವುದನ್ನು ನಾವು ಇಲ್ಲಿ ನಿಮಗೆ ತಿಳಿಸಲಿದ್ದೇವೆ.

ನೀವು 0100, 0111, 0222, 0333, 0444, 0555, 0666, 0777, 0888, 1111, 2222, 33433, 665, 6534 8888, ಇಂತಹ ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಿದರೆ, ರೂ 10,000 ವರೆಗೆ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಭಾರತದಲ್ಲಿ 0000 ನಂಬರ್ ಪ್ಲೇಟ್ ಬೆಲೆ ಎಷ್ಟು?
ಕೆಟಗರಿ 1 ನಂಬರ್ ಪ್ಲೇಟ್‌ಗಳು ಅಂದರೆ 0001 ಅನ್ನು ಒಳಗೊಂಡಿರುತ್ತವೆ ಮತ್ತು ಇದಕ್ಕೆ 5 ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಬಹುದು. ಕೆಟಗರಿ 2 ನಂಬರ್ ಪ್ಲೇಟ್‌ಗಳು 0002 ರಿಂದ 0009 ರ ನಡುವಿನ ಸಂಖ್ಯೆಗಳೊಂದಿಗೆ ಬರುತ್ತವೆ ಮತ್ತು ಅವುಗಳ ಬೆಲೆ 3 ಲಕ್ಷದಿಂದ ಪ್ರಾರಂಭವಾಗುತ್ತದೆ. ಕೆಟಗರಿ 3 ರಲ್ಲಿ 0010 ರಿಂದ 0099, 0786, 1000, 1111, 7777 ಮತ್ತು 9999 ಸಂಖ್ಯೆಗಳು ಬರುತ್ತವೆ, ಇವುಗಳಿಗೂ ನೀವು 2 ಲಕ್ಷದವರೆಗೆ ಪಾವತಿಸಬೇಕಾಗಬಹುದು.

ಈ ರೀತಿ ಆನ್‌ಲೈನ್‌ನಲ್ಲಿ ಫ್ಯಾನ್ಸಿ ನಂಬರ್ ಬುಕ್ ಮಾಡಿ:
ಮೊದಲಿಗೆ ಫ್ಯಾನ್ಸಿ ಪರಿವಾಹನ್ ಅಧಿಕೃತ ಪೋರ್ಟಲ್ https://fancy.parivahan.gov.in/ ಗೆ ಭೇಟಿ ನೀಡಿ. ಇಲ್ಲಿ ನೀವು ಮೊದಲು ಲಾಗಿನ್‌ ಆಗಬೇಕು. ನಂತರ ಸಾರ್ವಜನಿಕ ಬಳಕೆದಾರ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿದರೆ, ಇಲ್ಲಿ ನಿಮಗೆ ನಿಮ್ಮ ಹೆಸರು, ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಮತ್ತು ಪರಿಶೀಲನೆ ಕೋಡ್‌ಗಳನ್ನು ಕೇಳಲಾಗುತ್ತದೆ. ಅವುಗಳನ್ನು ಭರ್ತಿ ಮಾಡಿ, ನಂತರ ಸೈನ್‌ ಅಪ್‌ ಮಾಡಿ. ಇಲ್ಲಿ ನೀವು ಸಂಖ್ಯೆಗಳ ಪಟ್ಟಿಯನ್ನು ನೋಡಬಹುದು, ಅದರಲ್ಲಿ ನಿಮ್ಮ ನೆಚ್ಚಿನ ಸಂಖ್ಯೆ ಆಯ್ಕೆ ಮಾಡಿ, ನಂತರ ಪಾವತಿ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ, ಬಿಡ್‌ ಮಾಡಿ ನಂತರ ಅದರ ಫಲಿತಾಂಶ ಪರಿಶೀಲಿಸಿ, ನೀವು ಬಿಡ್‌ ಗೆದ್ದರೆ ಆ ಸಂಖ್ಯೆ ಶುಲ್ಕ ಪಾವತಿ ಮಾಡಿ. ನಂತರ ನಿಮಗೆ ಅಲಾಟ್‌ಮೆಂಟ್‌ ಲೆಟರ್‌ ಸಿಗುತ್ತದೆ. ಅದರ ಪ್ರಿಂಟೌಟ್‌ ತೆಗೆದಿಟ್ಟುಕೊಳ್ಳಿ.

ನೀವೇನಾದರೂ ಈ ಇ-ಹರಾಜು ಫಲಿತಾಂಶವನ್ನು ಪರಿಶೀಲಿಸ ಬೇಕೆಂದು ಬಯಸಿದರೆ, ಮೊದಲಿಗೆ ಫ್ಯಾನ್ಸಿ ಟ್ರಾನ್ಸ್‌ಪೋರ್ಟ್ ವೆಬ್‌ಸೈಟ್ https://fancy.parivahan.gov.in/ ಗೆ ಹೋಗಿ.
ಈಗ ಅದರ ಮುಖಪುಟದಲ್ಲಿ ಹರಾಜು ಫಲಿತಾಂಶ ಲಿಂಕ್ ಆಯ್ಕೆಯನ್ನು ಆರಿಸಿ. ಇದರ ನಂತರ ನಿಮ್ಮನ್ನು ಮುಂದಿನ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಇಲ್ಲಿ ನಿಮ್ಮಿಂದ ಕೇಳಿದ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ
ರಾಜ್ಯ, RTO ಮತ್ತು ಫಲಿತಾಂಶ ದಿನಾಂಕದ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ.
ಈಗ ನೀವು ಪರದೆಯ ಮೇಲೆ ಹರಾಜು ಫಲಿತಾಂಶವನ್ನು ನೋಡಬಹುದು.
ಫಲಿತಾಂಶವನ್ನು ಪರಿಶೀಲಿಸಿದ ನಂತರ, ನಂಬರ್ ಪ್ಲೇಟ್‌ಗಾಗಿ ಹಂಚಿಕೆ ಪತ್ರವನ್ನು ಡೌನ್‌ಲೋಡ್ ಮಾಡಿ.

 

Comments are closed.