ಮಂಗಳೂರು: ಎಟಿಎಂಗೆ ಜೆಸಿಬಿ ನುಗ್ಗಿಸಿ ದರೋಡೆಗೆ ಪ್ರಯತ್ನ – ಗ್ಲಾಸ್ ಒಡೆದ ಕೂಡಲೇ, ಸೈರನ್‌ ಕೇಳಿ ಎಸ್ಕೇಪ್ !

Share the Article

Suratkal :ಎಟಿಎಂನಿಂದ ಹಣ ದರೋಡೆ ಮಾಡುವ ಉದ್ದೇಶದಿಂದ ಎಟಿಎಂಗೆ ಜೆಸಿಬಿ ನುಗ್ಗಿಸಿ ಹಣ ಲಪಟಾಯಿಸಲು ವಿಫಲ ಯತ್ನ ನಡೆಸಿದ ಘಟನೆ ಸುರತ್ಕಲ್‌(Suratkal) ನಡೆದಿರುವ ಬಗ್ಗೆ ವರದಿಯಾಗಿದೆ.

 

ಸುರತ್ಕಲ್ ನ ವಿದ್ಯಾದಾಯಿನಿ ಶಾಲೆಯ ಪಕ್ಕ ವಾಣಿಜ್ಯ ಸಂಕೀರ್ಣದಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ಬ್ರಾಂಚ್‌ನ ಎಟಿಎಂ‌ ಮೆಶಿನ್ ಒಂದಿದೆ. ನಿನ್ನೆ ರಾತ್ರಿ ಸುಮಾರು 2 ಗಂಟೆಗೆ ದರೋಡೆಕೋರರು ದರೋಡೆಗೆ ಪ್ಲಾನ್ ರೂಪಿಸಿದ್ದರು. ಅದರಂತೆ ಏಕಾಏಕಿ ಎಟಿಎಂ ಮೇಲೆ ಜೆಸಿಬಿ ನುಗ್ಗಿಸುವ ಯತ್ನ ಆಗಿದೆ. ಈ ವೇಳೆ ಎಟಿಎಂನ ಬಾಗಿಲುಗಳು ಪುಡಿಯಾಗುತ್ತಿದ್ದಂತೆಯೇ ಅದೇಗೋ ಎಮರ್ಜೆನ್ಸಿ ಸೈರನ್ ಬಡಿದುಕೊಳ್ಳಲು ಆರಂಭ ಆಗಿದೆ. ಆಗ ದರೋಡೆಕೋರರು ಜೆಸಿಬಿ ಸಹಿತ ಪರಾರಿಯಾಗಿದ್ದಾರೆ.

 

ಕಳ್ಳರ ಒಟ್ಟಾರೆ ಚಲನವಲನ ಎಟಿಎಂನ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಇದೀಗ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಸಹಿತ ಇತರ ಹಿರಿಯ ಅಧಿಕಾರಿಗಳು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪ್ರಾಂಶುಪಾಲನಿಂದ ಹೀನ ಕೃತ್ಯ! 2 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Comments are closed.