ಬಿಟ್ಟಿ ಕುಳಿತು ತಿಂದವರ ಚರ್ಮ ಬೆಳ್ಳಗೆ, ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿ, ಕಲ್ಯಾಣ ಕರ್ನಾಟಕದ ಜನರಲ್ಲ – ಆರಗ ಜ್ಞಾನೇಂದ್ರಗೆ ಪ್ರಿಯಾಂಕ್ ಖರ್ಗೆ ಕಟು ಉತ್ತರ
Priyank Kharge: ಮಾಜಿ ಗೃಹ ಸಚಿವರ ಮತ್ತು ಸಚಿವ ಪ್ರಿಯಾಂಕ ಖರ್ಗೆ ಜಗಳ ಜೋರಾಗುತ್ತಿದೆ. ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು ಅಂತಾ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಾಜಿ ಸಚಿವ ಆರಗ ಜ್ಞಾನೇಂದ್ರಗೆ (Araga Jnanendra) ತಿರುಗೇಟು ನೀಡಿದ್ದಾರೆ.
ಬಿಜೆಪಿ ಪ್ರತಿಭಟನೆ ವೇಳೆ ಮಾತನಾಡಿದ ಅರಗ ಜ್ಞಾನೇಂದ್ರ ಅವರು ʻ ಕಲ್ಯಾಣ ಕರ್ನಾಟಕ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆಯವರನ್ನ ನೋಡಿದರೆ ಗೊತ್ತಾಗುತ್ತದೆʼ ಎಂದು ಅವಹೇಳನದ ಹೇಳಿಕೆ ನೀಡಿದ್ದರು. ಮಾಜಿ ಮಂತ್ರಿ ಆರಗ ಜ್ಞಾನೇಂದ್ರ ಹೇಳಿಕೆಗೆ ಕಾಂಗ್ರೆಸ್ ನಾಯಕರೂ ಕೆಂಡಾಮಂಡಲವಾಗಿದ್ದು, ಬಿಜೆಪಿ ವಿರುದ್ಧ ಕಡು ಟೀಕೆ ಮಾಡಿ ಖಂಡಿಸಿದ್ದರು. ಜೊತೆಗೆ, ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು.
ಇದೀಗ ಆರಗ ಜ್ಞಾನೇಂದ್ರ ಹೇಳಿಕೆಗೆ ಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಿಯಾಂಕ ಖರ್ಗೆಯವರು, ‘ಶತ-ಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು. ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ’ ಎಂದು ಬಲವಾಗಿ ಚುಚ್ಚಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಮುಂದುವರಿದು, ‘ ನೀವು ಆಡಿರುವ ಮಾತುಗಳು ಬರೀ ನಿಮ್ಮ ಮಾತುಗಳಲ್ಲ. ಇದು ಕೇಶವ ಕೃಪಾದ ಪ್ರಭಾವದ ಮಾತುಗಳು. ಇದು ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು. ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ’ ಎಂದಿದ್ದಾರೆ.
‘ ಮನುಸ್ಮೃತಿಯ ವರ್ಣಾಶ್ರಮವನ್ನ ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿ, ದಲಿತರ ರಾಜಕೀಯದ ಏಳಿಗೆಯ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ. ಕರ್ನಾಟಕದ ಬಿಜೆಪಿಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರಕಲು ಮಾಡುತ್ತದೆ. ಏಕೆಂದರೆ, ಇದು ಮನುಸ್ಮೃತಿಯ ಕಾಲವಲ್ಲ, ಬಾಬಾಸಾಹೇಬರ ಸಂವಿಧಾನದ ಕಾಲ ‘ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ :ಬೆಳ್ಳಿಗೆ ಸಿಕ್ಕಿದೆ ಚಿನ್ನದಂಥಾ ಕೆಲ್ಸ ದಿ ಎಲಿಫೆಂಟ್ ವಿಸ್ಪರ್ಸ್ ಕಾವಾಡಿಗೆ ಒಲಿದ ಸರ್ಕಾರಿ ಕೆಲಸ
Comments are closed.