ಪೋಷಕರ ಮೇಲಿನ ಪಂಚಾಯತಿ ರಾಜಕೀಯ ದ್ವೇಷಕ್ಕೆ ಪುಟಾಣಿ ಮಕ್ಕಳಿಗೆ ವಿಷ ಇಟ್ಟ ರಾಕ್ಷಸರು !

Share the Article

 

ಬೆಂಗಳೂರಿಂದ ಒಂದು ರಾಕ್ಷಸೀ ಕೃತ್ಯ ವರದಿಯಾಗಿದೆ. ಪೋಷಕರ ಮೇಲಿನ ದ್ವೇಷಕ್ಕೆ ದುಷ್ಕರ್ಮಿಗಳು ಆ ಪೋಷಕರ ಇಬ್ಬರು ಮಕ್ಕಳಿಗೆ ವಿಷಪ್ರಾಶನ (poisoned) ಮಾಡಿಸಿದ ಘಟನೆ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡ ಸಣ್ಣೆ ಗ್ರಾಮದಲ್ಲಿ ನಡೆದಿದೆ.

ಅದು ಕೂಡ ರಾಜಕೀಯ ಸೇಡಿನಿಂದ ಪ್ರೇರಿತವಾಗಿ ಈ ರೀತಿ ಮಕ್ಕಳಿಗೆ ವಿಷ ನೀಡಲಾಗಿದೆ ಎನ್ನಲಾಗಿದೆ. ಪುಟಾಣಿ ಮಕ್ಕಳಾದ ಅನುಷ ಮತ್ತು ಪಲ್ಲವಿಗೆ ಬಲವಂತವಾಗಿ ವಿಷ ಕುಡಿಸಲಾಗಿದೆ. ಇತ್ತೀಚೆಗೆ ನಡೆದ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಸೇಡಿನಿಂದ ಕೃತ್ಯವೆಸಗಲಾಗಿದೆ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಮಕ್ಕಳು ಬಚಾವಾಗಿದ್ದಾರೆ. ಸದ್ಯ ಸ್ಥಳೀಯ ಮಾನಸ ಆಸ್ಪತ್ರೆಯಲ್ಲಿ ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ, ಒಂಟಿಯಾಗಿ ಮಕ್ಕಳು ಮನೆಯಲ್ಲಿದ್ದ ಸಮಯದಲ್ಲಿ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೆ. ಒಂದೇ ಮನೆಯ ಇಬ್ಬರು ಮಕ್ಕಳಿಗೆ ವಿಷ ಕುಡಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Comments are closed.