ಟೇಕಾಫ್ ಆದ ವಿಮಾನದಲ್ಲಿ ಈರುಳ್ಳಿ ಪರಿಮಳ, ಎಮರ್ಜೆನ್ಸಿ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ !
Air India :ವಿಮಾನವೊಂದು ಟೇಕಾಫ್ ಈರುಳ್ಳಿ ವಾಸನೆಯ ಕಾರಣದಿಂದ ವಾಪಸ್ ಹೋರ್ಟಲ್ಲಿಗೆ ಬಂದ ವಿಚಿತ್ರ ಘಟನೆ ಎಂದು ನಡೆದಿದೆ. ಕೊಚ್ಚಿಯಿಂದ ಏರ್ ಇಂಡಿಯಾ (Air India) ವಿಮಾನದಲ್ಲಿ ಉಂಟಾದ ತೀಕ್ಷ್ಣಮತ್ತು ಈರುಳ್ಳಿ ವಾಸನೆಯ ಕಾರಣ ದುಬೈನ ಶಾರ್ಜಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊಚ್ಚಿಗೆ ವಾಪಾಸ್ ಆಗಿದೆ. Air India flight returned back after smelling Onion and burnt smell.
ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX 411) ವಿಮಾನವು ಆಗಸ್ಟ್ 2 ರಂದು ರಾತ್ರಿ ಕೊಚ್ಚಿಯಿಂದ ಟೇಕ್ ಆಫ್ ಆಗಿತ್ತು. 175 ಮಂದಿ ಪ್ರಯಾಣಿಕರನ್ನು ಹೊತ್ತ ಈ ವಿಮಾನ ಸಾಗುತ್ತಿರುವಾಗ ಕೆಲ ವೇಳೆ ಪ್ರಯಾಣಿಕರು ಏನೋ ಸುಟ್ಟ ವಾಸನೆ ಬರುತ್ತಿದೆ ಎಂದು ದೂರಿದ್ದರು. ತಕ್ಷಣ ಮುಂಜಾಗ್ರತಾ ಕ್ರಮವಾಗಿ ಆ ವಿಮಾನವನ್ನು ತಿರುಗಿಸಿ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಲ್ಯಾಂಡ್ ಮಾಡಲಾಗಿತ್ತು.
ವಿಮಾನ ವಾಪಸ್ ಲ್ಯಾಂಡ್ ಆಗುತ್ತಿದ್ದಂತೆ ಸುರಕ್ಷತಾ ಮತ್ತು ಎಂಜಿನಿಯರ್ ತಂಡವು ವಿಮಾನದತ್ತ ಧಾವಿಸಿದೆ. ಅಲ್ಲಿ ತೀವ್ರ ಪರಿಶೀಲನೆ ನಡೆದಿದ್ದು ಅಲ್ಲಿ ಧೂಮಪಾನ ಮಾಡಿದ ಅಥವಾ ಇನ್ಯಾವುದೇ ತಾಂತ್ರಿಕ ಸಮಸ್ಯೆಯ ಯಾವುದೇ ಕುರುಹು ಕಂಡುಬಂದಿಲ್ಲ. ಕೊನೆಗೆ, ಪ್ರಯಾಣಿಕರು ತಂದಿದ್ದ ಲಗೇಜ್ ಅನ್ನು ಪರಿಶೀಲಿಸಲಾಗಿದೆ.
ಸದ್ಯಕ್ಕೆ ತಿಳಿದುಬಂದ ಮಾಹಿತಿಗಳ ಪ್ರಕಾರ ವಿಮಾನದಲ್ಲಿ ಯಾವುದೇ ತೊಂದರೆ ಕಂಡು ಬಂದಿಲ್ಲ. ಆದರೆ, ವಿಮಾನ ಪ್ರಯಾಣಿಕರು ತಂದ ಈರುಳ್ಳಿ ಮತ್ತಿತರ ತರಕಾರಿಗಳಿಂದ ಈ ವಾಸನೆಯು ಬಂದಿದೆ ಎನ್ನಲಾಗುತ್ತಿದೆ. ಅಲ್ಲಿಂದ ಬಂದ ವಾಸನೆಯು ಪ್ರಯಾಣಿಕರಲ್ಲಿ ಅನುಮಾನ ಮೂಡಿಸಿದೆ ಎಂದು ಪ್ರೈಮರಿ ಇನ್ವೆಸ್ಟಿಗೇಷನ್ ಹೇಳಿದೆ ಎಂದು ಮೂಲಗಳು ಉಲ್ಲೇಖ ಮಾಡಿವೆ. ವಿಮಾನ ಪ್ರಯಾಣದಲ್ಲಿ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಮಾನ ವಿಷಾದ ವ್ಯಕ್ತ ಪಡಿಸಿದೆ.
ಮಧ್ಯಪ್ರಾಚ್ಯ ( Gulf ) ದೇಶಗಳಿಗೆ ಪ್ರಯಾಣಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಪ್ರಯಾಣಿಕರ ಜತೆ ಆಹಾರಗಳು, ತರಕಾರಿ, ಹಣ್ಣು, ಹೂವು ಸೇರಿದಂತೆ ಹತ್ತು ಹಲವು ಅಧಿಕ ಪ್ರಮಾಣದ ಸರಕುಗಳನ್ನೂ ಹೊತ್ತೊಯ್ಯಲು ಅವಕಾಶ ಕಲ್ಪಿಸುತ್ತವೆ.
ಇದನ್ನೂ ಓದಿ : ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್’ನ್ಯೂಸ್ !ಬಂದಿದೆ ಹೊಸ ಆಫರ್ !
Comments are closed.