Viral News: ಟೀಮ್ ಇಂಡಿಯಾದಿಂದ ಹೊಟೇಲ್ ನಿಯಮ ಉಲ್ಲಂಘನೆ ; ಆಟಗಾರನ ರೂಂನಲ್ಲಿ ಮಹಿಳೆ? ಮಾಹಿತಿ ಬಹಿರಂಗ !

Latest news Viral News Woman in Team India player's room

Viral News: ಇತ್ತೀಚೆಗೆ ಚಾಂಗ್ವಾನ್‌ನಲ್ಲಿ ನಡೆದ 3ನೇ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶೂಟಿಂಗ್ ತಂಡದ ಕೆಲವು ಸದಸ್ಯರು ತಾವು ತಂಗಿದ್ದ ಹೊಟೇಲ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರ ಹೊಟೇಲ್ ನಿಯಮಗಳನ್ನು ಮುರಿದಿದ್ದಾರೆ. ಆಟಗಾರನ ರೂಂನಲ್ಲಿ ಮಹಿಳೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ಬಹಿರಂಗವಾಗಿದೆ (Viral News). ಘಟನೆ ಬಗ್ಗೆ 90 ಸದಸ್ಯರ ತಂಡದ ಜತೆಗಿದ್ದ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

ಪುರುಷ ಶೂಟರ್‌ನ ಕೋಣೆಯಲ್ಲಿ ಮಹಿಳಾ ಶೂಟರ್ ಕಾಣಿಸಿಕೊಂಡಿದ್ದು, ಜೊತೆಗೆ ಕೆಲವು ಹೋಟೆಲ್ ಕೊಠಡಿಗಳಲ್ಲಿ ಸಾಮಾನು ಸರಂಜಾಮುಗಳಿಗೆ ಹಾನಿಯಾದ ಪ್ರಕರಣಗಳು ವರದಿಯಾಗಿವೆ. ಸದ್ಯ, ಕೊಠಡಿಯಲ್ಲಿದ್ದ ಕೆಲ ವಸ್ತುಗಳಿಗೆ ಹಾನಿಯಾಗಿರುವ ಬಗ್ಗೆ ಹೋಟೆಲ್ ನವರು ಮಾಹಿತಿ ನೀಡಿದ್ದು, ಅದಕ್ಕೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, “ದೂರು ಪಡೆದ ಶೂಟರ್‌ಗಳು ಶಾಟ್‌ಗನ್ ಶೂಟರ್‌ಗಳು ತಮ್ಮ ಸ್ವಂತ ಖರ್ಚಿನಲ್ಲಿ ಹೋಗಿದ್ದಾರೆ. ವಿಚಾರಣೆ ನಡೆಸಿದಾಗ, ಮಹಿಳಾ ಶೂಟರ್ ಪುರುಷ ಶೂಟರ್‌ನ ಶೌಚಾಲಯವನ್ನು ಬಳಸುತ್ತಿದ್ದಳು ಎಂದು ತಿಳಿದುಬಂದಿದೆ. ಆಟಗಾರರು ‘ಎಲೆಕ್ಟ್ರಿಕ್ ಕೆಟಲ್ ’ನಲ್ಲಿ ನೂಡಲ್ಸ್ ತಯಾರಿಸಿ ಹಾಳು ಮಾಡಿದ ಘಟನೆಗಳೂ ಬೆಳಕಿಗೆ ಬಂದಿವೆ. ಉಪಕರಣಗಳಿಗೆ ಹಾನಿಯಾದ ಹಣವನ್ನು ನಾವು ಹೋಟೆಲ್‌ಗೆ ಪಾವತಿಸಿದ್ದೇವೆ” ಎಂದು ಹೇಳಿದ್ದಾರೆ.

ತಂಡದ ಜೊತೆಗಿರುವ ಹಿರಿಯ ಅಧಿಕಾರಿಯೊಬ್ಬರು ವರದಿಯನ್ನು ಎನ್‌ಆರ್‌ಎಐಗೆ ಸಲ್ಲಿಸಿದ್ದಾರೆ ಎಂದರು. ಕೋಚಿಂಗ್ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬ ಸದಸ್ಯರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಹೇಳಿದರು.

 

ಇದನ್ನು ಓದಿ: Nobel world record: ಈ ಪೋರನಿಗೆ ಕೇವಲ ಆರು ತಿಂಗಳಷ್ಟೇ! ಪಡೆದಿದ್ದು ಮಾತ್ರ ನೊಬೆಲ್ ವಿಶ್ವ ದಾಖಲೆ ಪ್ರಶಸ್ತಿ 

Leave A Reply

Your email address will not be published.