Home Interesting Women shirt button: ಮಹಿಳೆಯರು ಧರಿಸುವ ಶರ್ಟ್ ಬಟನ್ ಎಡಭಾಗದಲ್ಲಿರುವುದೇಕೆ? ಇದು ಫ್ಯಾಶನ್ ಮಾತ್ರ ಅಲ್ಲ|ನಿಜವಾದ...

Women shirt button: ಮಹಿಳೆಯರು ಧರಿಸುವ ಶರ್ಟ್ ಬಟನ್ ಎಡಭಾಗದಲ್ಲಿರುವುದೇಕೆ? ಇದು ಫ್ಯಾಶನ್ ಮಾತ್ರ ಅಲ್ಲ|ನಿಜವಾದ ಕಾರಣ ಇಲ್ಲಿದೆ !

Women shirt button

Hindu neighbor gifts plot of land

Hindu neighbour gifts land to Muslim journalist

Women shirt button: ಶರ್ಟ್ ಎಲ್ಲರೂ ಇಷ್ಟಪಡುವ ಬಟ್ಟೆ. ಯಾವುದೇ ಸಾಂಪ್ರದಾಯಿಕ ಸಮಾರಂಭಗಳಿಗೆ ಒಗ್ಗುವ ಬಟ್ಟೆ. ಇದು ಹುಡುಗಿಯರಿಗೂ ಕೂಡಾ ಅಚ್ಚುಮೆಚ್ಚು ಅಂದರೆ ತಪ್ಪಾಗಲಾರದು.

ಹಿಂದಿನ ಕಾಲದಲ್ಲಿ ಪುರುಷರು ಮಾತ್ರ ಶರ್ಟ್ ಧರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹೆಂಗಸರೂ ಶರ್ಟ್ ಧರಿಸುತ್ತಿದ್ದಾರೆ. ಆದರೆ ಈ ಎರಡು ಅಂಗಿಗಳ ನಡುವೆ ಬಹಳ ವ್ಯತ್ಯಾಸವಿದೆ. ಪುರುಷರ ಶರ್ಟ್‌ಗಳಲ್ಲಿ ಬಟನ್ ಬಲಭಾಗದಲ್ಲಿದ್ದರೆ, ಮಹಿಳೆಯರ ಶರ್ಟ್‌ಗಳಲ್ಲಿ ಬಟನ್(Women shirt button)  ಎಡಭಾಗದಲ್ಲಿದೆ. ಇದನ್ನು ವಿಶೇಷ ಕಾರಣಕ್ಕಾಗಿ ಮಾಡಲಾಗುತ್ತದೆ.

ಇಂದಿನ ಕಾಲದಲ್ಲಿ ಯುನಿಸೆಕ್ಸ್ ಫ್ಯಾಶನ್ ಪ್ರಚಲಿತ. ಯುನಿಸೆಕ್ಸ್ ಫ್ಯಾಶನ್ ಎಂದರೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಧರಿಸಬಹುದಾದ ಬಟ್ಟೆ. ಕನ್ನಡಕದಿಂದ ಹಿಡಿದು ಜೀನ್ಸ್ ಪ್ಯಾಂಟ್, ಶರ್ಟ್ ಮತ್ತು ಅನೇಕ ರೀತಿಯ ಬಟ್ಟೆಗಳು ಯುನಿಸೆಕ್ಸ್ ಆಗಿರುತ್ತವೆ.

ಹಿಂದಿನ ಕಾಲದಲ್ಲಿ ಪುರುಷರು ತಮ್ಮ ಬಲಗೈಯಲ್ಲಿ
ಕತ್ತಿಯನ್ನು ಹಿಡಿಯುತ್ತಿದ್ದರಿಂದ ಹಾಗೂ ಮಹಿಳೆಯರು ತಮ್ಮ ಎಡ ಕೈ ಬಳಸಿ ಮಕ್ಕಳನ್ನು ಹಿಡಿದುಕೊಳ್ಳುತ್ತಿದ್ದರು.
ಅಂತಹ ಪರಿಸ್ಥಿತಿಯಲ್ಲಿ ಮನುಷ್ಯನು ತನ್ನ ಅಂಗಿಯ
ಗುಂಡಿಗಳನ್ನು ತೆರೆಯಲು ಅಥವಾ ಹಾಕಲು
ಸುಲಭವಾಗಲೆಂದು ಈ ಐಡಿಯಾ ಬಳಸಿದ್ದಾರಂತೆ.

ಅಂದರೆ ಪುರುಷರಿಗೆ ಎಡಗೈಯನ್ನು ಬಳಸಿ ಶರ್ಟ್ ಬಟನ್ ಹಾಕಲು ಸುಲಭವಾಗುವಂತೆ. ಮಹಿಳೆಯರಿಗೆ ಬಲಗೈ ಬಳಸಿ ಶರ್ಟ್ ಗುಂಡಿ ಹಾಕಲು ಸುಲಭವಾಗುವಂತೆ ವಿನ್ಯಾಸ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಶಿಶುಗಳಿಗೆ ಹಾಲುಣಿಸಲು, ಅವರು ಅಂಗಿಯ ಗುಂಡಿಗಳನ್ನು ಬಿಚ್ಚಲು ಬಲಗೈಯನ್ನು ಬಳಸಬೇಕಾಗಿತ್ತು. ಇದರಿಂದಾಗಿ ಮಹಿಳೆಯರಿಗೆ ಶರ್ಟ್ ನ ಎಡಭಾಗದಲ್ಲಿ ಗುಂಡಿಗಳನ್ನು ನೀಡಲಾಗಿದೆ.

ನೆಪೋಲಿಯನ್ ಬೋನಪಾರ್ಟೆ ಎಂಬಾತ ಮಹಿಳೆಯರು ಧರಿಸುವ ಬಟ್ಟೆಯಲ್ಲಿ ಎಡಭಾಗದಲ್ಲಿ ಗುಂಡಿ ಇರಬೇಕೆಂದು ತೀರ್ಪು ನೀಡಿದ್ದನು ಎಂದು ಹೇಳಲಾಗುತ್ತದೆ. ಕಥೆಗಳ ಪ್ರಕಾರ, ನೆಪೋಲಿಯನ್ ಯಾವಾಗಲೂ ತನ್ನ ಅಂಗಿಯಲ್ಲಿ ಒಂದು ಕೈಯನ್ನು ಇಟ್ಟುಕೊಂಡಿರುತ್ತಾನೆ. ಈತನ ಈ ನಡೆಯನ್ನು ಆಗಿನ ಕಾಲದ ಮಹಿಳೆಯರು ಅನುಕರಿಸಲು ಪ್ರಾರಂಭಿಸಿದರಂತೆ. ಹಾಗಾಗಿ ಇದು ಸಂಭವಿಸದಂತೆ ತಡೆಯಲು ನೆಪೋಲಿಯನ್ ಮಹಿಳೆಯರ ಅಂಗಿಗಳಲ್ಲಿ ಹೆಚ್ಚಿನ ಗುಂಡಿಗಳನ್ನು ಹಾಕಲು ಆದೇಶವನ್ನು ಹೊರಡಿಸಿದನಂತೆ. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ. ಆದರೆ ಕಥೆಗಳು ಮತ್ತು ಕಥೆಗಳ ಆಧಾರದ ಮೇಲೆ, ಜನರು ಇದನ್ನು ನಿಜವೆಂದು ನಂಬುತ್ತಾರೆ.

ಹಿಂದಿನ ಕಾಲದಲ್ಲಿ ಮಹಿಳೆಯರು ತಮ್ಮ ಎರಡೂ ಕಾಲುಗಳನ್ನು ಒಂದೇ ಕಡೆ ಇಳಿಬಿಟ್ಟುಕೊಂಡು ಸವಾರಿ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬಟ್ಟೆಗೆ ಎಡ ಗುಂಡಿಯನ್ನು ಮಾಡಿದರೆ, ಗಾಳಿಯು ಅಂಗಿಯ ಒಳಗೆ ಹೋಗುವ ಮೂಲಕ ಸವಾರಿ ಮಾಡಲು ಸಹಾಯ ಮಾಡುತ್ತಿತ್ತು.

ಇದಿಷ್ಟಲ್ಲದೇ, ಮಹಿಳೆಯರು ಮತ್ತು ಪುರುಷರ ಬಟ್ಟೆಗಳ ನಡುವೆ ವ್ಯತ್ಯಾಸ ತಿಳಿಯುವುದಕ್ಕೋಸ್ಕರ, ಶರ್ಟ್ ನಲ್ಲಿ ಗುಂಡಿಗಳನ್ನು ಈ ರೀತಿಯಲ್ಲಿ ಹಾಕಲಾಗಿದೆ ಎಂಬುದು ಕೆಲವು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: Sanitary napkins- tampons usage: ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಬಳಸುವ ಪ್ಯಾಡ್, ಟ್ಯಾಂಫೂನ್‌ ಎಷ್ಟು ಗಂಟೆ ಬಳಸಬಹುದು ? ನಿಮಗೆ ತಿಳಿದಿದೆಯೇ ?