JCB colour: ಜೆಸಿಬಿ ಹಳದಿ ಬಣ್ಣದಲ್ಲಿ ಇರಲು ಕಾರಣವೇನು? ಈ ಯಂತ್ರದ ನಿಜವಾದ ಹೆಸರೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ !
Interesting facts Reason behind jcb having yellow colour what is the actual name of this machine
JCB colour : ಜೆಸಿಬಿ ಈ ಹೆಸರು ಕೇಳದವರು ಯಾರು ಇದ್ದಾರೆ ? ಎಲ್ಲರಿಗೂ ಈ ಯಂತ್ರದ ಬಗ್ಗೆ ಗೊತ್ತೇ ಇರುತ್ತದೆ. ಎಲ್ಲಾದರೂ ನಿರ್ಮಾಣ ಕಾರ್ಯ ಇರಲಿ, ಕಾಮಗಾರಿ ಸ್ಥಳದಲ್ಲಿ ಈ ಬೃಹತ್ ಜೆಸಿಬಿ ಅಥವಾ ಕ್ರೇನ್ ನ ಯಂತ್ರಗಳನ್ನು ಬಳಸುತ್ತಾರೆ. ನೀವು ಗಮನಿಸಿರಬಹುದು. ಇವುಗಳ ಬಣ್ಣ(JCB colour) ಹಳದಿಯಾಗಿರುತ್ತದೆ. ಯಾಕೆ ಈ ಯಂತ್ರ ಹಳದಿ ಬಣ್ಣದಲ್ಲಿರುತ್ತದೆ ? ಇದರ ಹಿಂದಿನ ಕಾರಣವೇನು? ಈ ಎಲ್ಲಾ ಪ್ರಶ್ನೆಗೂ ಇಲ್ಲಿದೆ ಉತ್ತರ.
ಮೊದಲನೆಯದಾಗಿ ಈ ಜೆಸಿಬಿ ಎನ್ನುವುದು ಯಂತ್ರದ ಹೆಸರಲ್ಲ. ಇದು ಕಂಪನಿಯ ಹೆಸರು. ಆದರೆ ಈ ಅಗೆಯುವ ಯಂತ್ರವು ಈಗ ಕಂಪನಿಯ ಹೆಸರಿನಿಂದಲೇ ಖ್ಯಾತಿ ಪಡೆದಿದೆ. ಕಟ್ಟಡ ಕೆಡಹುವ, ಒಡೆಯುವ ಅಥವಾ ಕಟ್ಟುವ ಸ್ಥಳ ಸಮತಟ್ಟು ಮಾಡುವ ಇಂಥ ಕೆಲಸಗಳನ್ನು ಈ ಯಂತ್ರದಿಂದ ಮಾಡಲಾಗುತ್ತದೆ. ಜೆಸಿಬಿ ಎನ್ನುವುದು ಬ್ರಿಟಿಷ್ ಮ್ಯಾನ್ಯುಫ್ರಾಕ್ಚರರ್ ಕಂಪನಿ. ಯುನೈಟೆಡ್ ಕಿಂಗ್ಡಮ್ ನಲ್ಲಿ ಅದರ ಮುಖ್ಯ ಕಚೇರಿ ಇದೆ. ಜೋಸೆಫ್ ಬಾಮ್ ಫೋರ್ಡ್ ಎಂಬಾತನೇ ಇದರ ಸ್ಥಾಪಕ. ಜೋಸೆಫ್ ಸಿರಿಲ್ ಬಾಮ್ ಫೋರ್ಡ್ ( ಜೆಸಿಬಿ) ಎಂಬುದು ಕಂಪನಿ ಹಾಗೂ ಸಂಸ್ಥಾಪಕನ ಹೆಸರು ಎರಡನ್ನೂ ಹೊಂದಿದೆ.
ಜೆಸಿಬಿ ಕಂಪನಿ ಹೆಸರಾದರೆ ಈ ಯಂತ್ರದ ಹೆಸರು ಬ್ಯಾಕ್ ಹೋ ಲೋಡರ್ ಎಂದು.
1945 ರಿಂದ ಈ ಯಂತ್ರಗಳನ್ನು ಉತ್ಪಾದನೆ ಪ್ರಾರಂಭ ಆಯಿತು 1953 ರಲ್ಲಿ ಮೊದಲ ಯಂತ್ರ ಬ್ಯಾಕ್ ಹೋ ಲೋಡರ್ ನ್ನು ತಯಾರಿಸಲಾಯಿತು. ಆವಾಗ ಇದು ನೀಲಿ ಮತ್ತು ಕೆಂಪು ಬಣ್ಣ ಹೊಂದಿತ್ತು. ನಂತರ ಪುನಶ್ಚೇತನಗೊಳಿಸಿ ಹಳದಿ ಬಣ್ಣ ದಲ್ಲಿ ಈ ಯಂತ್ರ ಮಾಡಲಾಯಿತು. ಜೆಸಿಬಿ ಅಥವಾ ಕ್ರೇನ್ ಈ ಯಂತ್ರಗಳಲ್ಲಿ ಹಳದಿ ಬಣ್ಣ ಇರಲು ಮುಖ್ಯ ಕಾರಣ ಅದರ ಗೋಚರತೆ. ಈ ಹಳದಿ ಬಣ್ಣದಿಂದ ಹಗಲು ರಾತ್ರಿ ಕೆಲಸ ಮಾಡುವ ಸ್ಥಳಗಳಲ್ಲಿ ಈ ಬಣ್ಣ ಎದ್ದು ಕಾಣುತ್ತದೆ ಅಷ್ಟು ಮಾತ್ರವಲ್ಲ ದೂರದಿಂದಲೇ ಗೋಚರಿಸುತ್ತದೆ. ಕತ್ತಲೆಯಲ್ಲೂ ಈ ಹಳದಿ ಬಣ್ಣ ಎದ್ದು ಕಾಣುವುದರಿಂದ ಈ ಯಂತ್ರವನ್ನು ಪತ್ತೆ ಹಚ್ಚಬಹುದು. ಹಾಗಾಗಿ ಈ ಹಳದಿ ಬಣ್ಣ ಈ ಯಂತ್ರಕ್ಕೆ ಉಪಯೋಗಿಸಲಾಗಿದೆ.
ಇದನ್ನೂ ಓದಿ : ಮಹಿಳೆಯರು ಧರಿಸುವ ಶರ್ಟ್ ಬಟನ್ ಎಡಭಾಗದಲ್ಲಿರುವುದೇಕೆ? ಇದು ಫ್ಯಾಶನ್ ಮಾತ್ರ ಅಲ್ಲ|ನಿಜವಾದ ಕಾರಣ ಇಲ್ಲಿದೆ !