Home News Snake wine: ಈ ವೈನ್ ವಿಷಕಾರಿ ಹಾವಿನಿಂದ ತಯಾರು ಮಾಡಲಾಗುತ್ತೆ! ನೀವು ಇದನ್ನು ಕುಡಿದಿದ್ದೀರಾ?

Snake wine: ಈ ವೈನ್ ವಿಷಕಾರಿ ಹಾವಿನಿಂದ ತಯಾರು ಮಾಡಲಾಗುತ್ತೆ! ನೀವು ಇದನ್ನು ಕುಡಿದಿದ್ದೀರಾ?

Snake wine

Hindu neighbor gifts plot of land

Hindu neighbour gifts land to Muslim journalist

Snake wine: ಮಧ್ಯಪ್ರಿಯರು ತಮ್ಮ ಕ್ರೇಜ್, ಮೂಡಿಗೆ ತಕ್ಕಂತೆ ಒಂದೊಂದು ವೆರೈಟಿ ಬ್ರಾಂಡಿಗಳನ್ನು ಟ್ರೈ ಮಾಡಿರುತ್ತಾರೆ. ಬಹುಶಹ ಎಲ್ಲಾ ಬ್ರಾಂಡಿಗಳ ರುಚಿಯನ್ನು ನೋಡಿರಬಹುದು ಆದರೆ, ನಾವಿಂದು ಹೇಳ ಹೊರಟಿರುವ ಈ ಬ್ರಾಂಡಿ ಬಗ್ಗೆ ಅವರಿಗೆ ತಿಳಿದಿರಲಿಕ್ಕಿಲ್ಲ. ಈ ಬ್ರಾಂಡಿ ಹೆಸರನ್ನು ಕೇಳಿದರೆ ಕುಡಿಯದವರು ಅಷ್ಟೇ ಯಾಕೆ, ಕುಡಿಯುವವರು ಕೂಡ ಒಂದು ಕ್ಷಣ ಭಯ ಬೀಳೋದಂತು ಖಂಡಿತ. ಆ ಬ್ರಾಂಡಿ ಬೇರೆ ಯಾವುದೂ ಅಲ್ಲ ವಿಷಕಾರಿ ಹಾವುಗಳಿಂದ ತಯಾರಿಸಲಾಗುವ ‘ಸ್ನೇಕ್ ವೈನ್’!…

ಹೌದು, ಅಂತಿಂಥ ಹಾವುಗಳಲ್ಲ ವಿಷಕಾರಿ ಹಾವುಗಳನ್ನು ವೈನ್ ನಲ್ಲಿ ಹಾಕಿ ಕುಡಿಯುತ್ತಾರೆ ಇದೆ ಸ್ನೇಕ್ ವೈನ್. ಈ ಹಾವುಗಳು ಎಷ್ಟು ವಿಷಕಾರಿ ಎಂದರೆ ಯಾರಿಗಾದರೂ ಒಮ್ಮೆ ಕಚ್ಚಿದರೆ ಸಾಕು ನಿಮಿಷಗಳಲ್ಲಿ ಸಾಯುತ್ತಾರೆ. ಆದರೂ ಈ ಹಾವುಗಳಿಂದಲೇ ತಯಾರಿಸಿದ ವೈನ್ ಅನ್ನು ಕುಡಿಯುತ್ತಾರೆ.

ಈ ಪಾನೀಯವನ್ನು ಮೊದಲು 200 BC ಯಲ್ಲಿ ಪಶ್ಚಿಮ ಝೌ ರಾಜವಂಶದ ಅವಧಿಯಲ್ಲಿ ತಯಾರಿಸಲಾಯಿತು. ಅದರ ನಂತರ ಇದು ಚೀನಾದಲ್ಲಿ(china) ಜನಪ್ರಿಯವಾಯಿತು. ಆದರೆ ಪ್ರಸ್ತುತ ಇದನ್ನು ಹೆಚ್ಚಾಗಿ ಆಗ್ನೆಯ ಏಷ್ಯಾದ ವಿಯೆಟ್ನಾಂನಲ್ಲಿ (Vietnam) ತಯಾರಿಸಲಾಗುತ್ತದೆ. ಅಲ್ಲಿನ ಸ್ಥಳೀಯರು ಈ ಮದ್ಯವನ್ನು ಬಹಳ ಉತ್ಸಾಹದಿಂದ ಕುಡಿಯುತ್ತಾರೆ. ಪ್ರವಾಸಿಗರು ಕೂಡ ಇದನ್ನು ಟ್ರೈ ಮಾಡ್ತಾರೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯೆಂದು ಅವರು ಪರಿಗಣಿಸುತ್ತಾರೆ.

ಕುಷ್ಠರೋಗ, ಅತಿಯಾದ ಬೆವರುವಿಕೆ, ಕೂದಲು ಉದುರುವಿಕೆ, ಒಣ ಚರ್ಮ ಮತ್ತು ಇತರ ಅನೇಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಈ ವೈನ್ ಅನ್ನು ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ. ಇದನ್ನು ಟಾನಿಕ್ ಎಂದು ಪರಿಗಣಿಸಲಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರನ್ನು ಗುಣಪಡಿಸಲು ಇದನ್ನು ಕುಡಿಸಲಾಗುತ್ತಿತ್ತು. ಆ ಸಮಯದಲ್ಲಿ ಹಾವಿನ ರಕ್ತದ ವೈನ್ ಅನ್ನು ತಯಾರಿಸಲಾಗುತ್ತಿತ್ತು. ಒಂದು ಕಪ್‌ನಲ್ಲಿ ಆಲ್ಕೋಹಾಲ್ ತೆಗೆದುಕೊಂಡು ಜೀವಂತ ವಿಷಕಾರಿ ಹಾವಿನ ಹೊಟ್ಟೆಯನ್ನು ಸೀಳಿ, ಅದರ ರಕ್ತದ ಕೆಲವು ಹನಿಗಳನ್ನು ಮದ್ಯದಲ್ಲಿ ಬೆರೆಸಲಾಗುತ್ತಿತ್ತಂತೆ.

ಇನ್ನು ಈ ಅಪಾಯಕಾರಿ ವೈನ್ ಅನ್ನು ಕುಡಿದರೆ ಸುರಕ್ಷಿತವಾಗಿರಬಹುದೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಉತ್ತರ ಖಂಡಿತ ಹೌದು. ಸ್ನೇಕ್ ವೈನ್ ಅಧಿಕೃತ ಮೂಲದಿಂದ ಖರೀದಿಸಿದಾಗ ಕುಡಿಯಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹಾವಿನ ವಿಷದ ನಿಜವಾದ ಪರಿಣಾಮವು ದೀರ್ಘಕಾಲದವರೆಗೆ ಆಲ್ಕೋಹಾಲ್‌ನಲ್ಲಿ ಇರುವುದರಿಂದ ಅದು ನಾಶವಾಗುತ್ತದೆ.

ಈ ಸ್ನೇಕ್ ವೈನ್ (Snake wine) ತಯಾರಿಸಲು ಹೆಚ್ಚಾಗಿ ಅಕ್ಕಿ ವೈನ್ ಅನ್ನು ಬಳಸಲಾಗುತ್ತದೆ. ಅದರಲ್ಲಿ ಸಾಕಷ್ಟು ಗಿಡಮೂಲಿಕೆಗಳನ್ನು ಹಾಕಿದ ನಂತರ ವಿಷಕಾರಿ ಹಾವನ್ನು(Poisonous snake) ಹಾಕಲಾಗುತ್ತದೆ, ಅದನ್ನು ದೀರ್ಘಕಾಲದವರೆಗೆ ಹಾಗೇ ಇಡಲಾಗುತ್ತದೆ.ಏಕೆಂದರೆ ಕೆಲವು ತಿಂಗಳ ನಂತರ ಅದು ಫರ್ಮೆಂಟ್ ಆದಮೇಲೆ ಕುಡಿಯುತ್ತಾರೆ.

 

ಇದನ್ನು ಓದಿ: Puttur: ಉಪ ಚುನಾವಣೆ ಗೆದ್ದ ಬೆನ್ನಲ್ಲೇ ಸಂಕಷ್ಟದಲ್ಲಿ ಪುತ್ತಿಲ ಪರಿವಾರ!! ನಗರ ಠಾಣೆಯಲ್ಲಿ ದಾಖಲಾಯಿತು ಕೇಸ್.