Benglore: ಯುವತಿಯನ್ನು ಕೂರಿಸಿಕೊಂಡು, ಬೈಕ್ ಓಡಿಸುತ್ತಲೇ ಹಸ್ತಮೈಥುನ ಮಾಡಿಕೊಂಡ ರ‍್ಯಾಪಿಡೋ ಚಾಲಕ! ಪೋಸ್ಟ್ ವೈರಲ್

Latest Karnataka news Young women physically abused by rapido bike driver at Bangalore

Share the Article

Bangalore: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೇ ಹುಡುಗರು, ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವಂತಹ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ರ‍್ಯಾಪಿಡೋ ಬೈಕ್(Rapido bike) ಟ್ಯಾಕ್ಸಿ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರು(Bangalore)ನಗರದಲ್ಲಿ ನಡೆದಿದೆ.

ಹೌದು, ಯುವತಿಯೊಬ್ಬಳು ಹಿಂದೆ ಕೂತಿದ್ದಾಗಲೇ ರ‍್ಯಾಪಿಡೋ ಬೈಕ್ ಚಾಲಕನೊಬ್ಬ ಹಸ್ತಮೈಥುನ ಮಾಡಿಕೊಂಡ ಅಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೈಕ್‌ನಲ್ಲಿ ಹೋಗುವಾಗ ಚಾಲಕ ಅನುಚಿತವಾಗಿ ವರ್ತಿಸಿ, ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಕಿರುಕುಳ ನೀಡಿದ್ದಾನೆ ಎಂದು ಅಥಿರಾ ಪುರುಷೋತ್ತಮನ್‌ ಯುವತಿ ಆರೋಪಿಸಿದ್ದಾಳೆ.

ಅಂದಹಾಗೆ ಮಣಿಪುರದಲ್ಲಿ(Manipura) ಇಬ್ಬರು ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಖಂಡಿಸಿ ನಗರದ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅಥಿರಾ ಪುರುಷೋತ್ತಮನ್‌ ಎಲೆಕ್ಟ್ರಾನಿಕ್ ಸಿಟಿ(Electronic city) ಯಲ್ಲಿರುವ ಮನೆಗೆ ಹೋಗಲು ರ‍್ಯಾಪಿಡೋ ಬೈಕ್ ಬುಕ್‌ ಮಾಡಿದ್ದಳು. ಈ ವೇಳೆ ಹುಡುಗಿಯನ್ನು ಪಿಕ್ ಮಾಡಿದ ಬೈಕ್ ಚಾಲಕ, ಬೈಕ್ ಓಡಿಸುತ್ತಲೇ ದಾರಿಯುದ್ದಕ್ಕೂ ಹಸ್ತಮೈಥುನ ಮಾಡಿಕೊಂಡೇ ಹೋಗಿದ್ದಾನೆ. ಇದರಿಂದ ಯುವತಿ ತೀವ್ರ ಆತಂಕಕ್ಕೆ ಒಳಗಾಗಿದ್ದಾಳೆ.

ಈ ಕುರಿತು ಪ್ರತಿಕ್ರಿಯಿಸಿದ ಯುವತಿಯು ‘ಬಾಡಿಗೆ ಆಟೋ ಬುಕ್‌ ಮಾಡಲು ನಾನು ಪ್ರಯತ್ನಿಸಿದ್ದೆ. ಆದರೆ, ರೈಡ್‌ ಕ್ಯಾನ್ಸಲ್‌ ಆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರ‍್ಯಾಪಿಡೋಬೈಕ್‌ ಆಯಪ್‌ನಲ್ಲಿ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಬೇಕಾಯಿತು. ಆದರೆ, ನಾನು ಬುಕ್‌ ಮಾಡಿದ್ದ ಬೈಕ್‌ಗೆ ಬದಲಾಗಿ ಚಾಲಕ ಬೇರೋಂದು ಬೈಕ್‌ನಲ್ಲಿ ಬಾಡಿಗೆಗೆ ಬಂದಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಆತ ಬೈಕ್‌ ಸರ್ವೀಸ್‌ಗೆ ಬಿಟ್ಟಿರುವುದಾಗಿ ಹೇಳಿದ. ನಂತರ ಆಯಪ್‌ನಲ್ಲಿ ರೈಡ್‌ ಪರಿಶೀಲಿಸಿಕೊಂಡು ಬೈಕ್‌ ಹತ್ತಿದೆ. ಬೈಕ್‌ ಟ್ಯಾಕ್ಸಿಯಲ್ಲಿ ಮನೆಗೆ ಹೋಗುವಾಗ ಚಾಲಕ ತನ್ನ ಜತೆ ಅನುಚಿತವಾಗಿ ವರ್ತಿಸಿದ. ಆತ ಒಂದು ಕೈಯಲ್ಲಿ ಬೈಕ್‌ ಚಲಾಯಿಸುತ್ತಾ, ಮತ್ತೊಂದು ಕೈಯಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇದರಿಂದ ಭಯವಾಗಿ ಮಾರ್ಗದುದ್ದಕ್ಕೂ ಮೌನವಾಗಿದ್ದೆ. ನನ್ನ ಮನೆ ಇರುವ ಸ್ಥಳ ಆತನಿಗೆ ತಿಳಿಯಬಾರದು ಎಂಬ ಉದ್ದೇಶದಿಂದ ಮನೆಯು 200 ಮೀಟರ್ ದೂರವಿರುವಾಗಲೇ ಬೈಕ್‌ ನಿಲ್ಲಿಸಲು ಹೇಳಿದ್ದೆ. ಆದರೆ, ನಾನು ಮನೆಗೆ ಹೋದ ಮೇಲೆಯೂ ಆತ ನನಗೆ‌ ಕರೆ ಮಾಡಿ, ಸಂದೇಶ ಕಳುಹಿಸುತ್ತಿದ್ದ. ಆತನ ಕಿರುಕುಳ ತಾಳಲಾರದೆ ನಂಬರ್‌ ಬ್ಲಾಕ್‌ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುವತಿ ಹೇಳಿದ್ದಾಳೆ.

ಇಷ್ಟೇ ಅಲ್ಲದೆ ಯುವತಿಯನ್ನು ಡ್ರಾಪ್ ಮಾಡಿದ ನಂತರ ಆಕೆಗೆ ವಾಟ್ಸ್‌ಆಯಪ್‌ ಮೆಸೇಜ್ ಮೂಲಕ ಚಾಲಕ ಕಿರುಕುಳ ನೀಡಿದ್ದಾನೆ. ಯಾಕೆ ನೀವು ನನಗೆ ಕಾಲ್‌ ಮಾಡುತ್ತಿದ್ದೀರಿ? ನಿಮಗೆ ಆನ್‌ಲೈನ್‌ ಪೇಮೆಂಟ್‌ ಆಗಿದೆ ಎಂದು ಯುವತಿ ಹೇಳಿದಾಗ, ಮೇಡಂ ಲವ್‌ ಯು ಎಂದು ಚಾಲಕ ಮೆಸೇಜ್‌ ಕಳುಹಿಸಿದ್ದಾನೆ. ನಂತರ ಯುವತಿ ಆತನ ನಂಬರ್‌ ಅನ್ನು ಬ್ಲಾಕ್‌ ಮಾಡಿದ್ದಾಳೆ.

ಇನ್ನು ಈ ಬಗ್ಗೆ ಟ್ವಿಟರ್‌ನಲ್ಲಿ ರ‍್ಯಾಪಿಡೋ ಬೈಕ್ ಆಯಪ್‌ ಅನ್ನು ಪ್ರಶ್ನಿಸಿರುವ ಅಥಿರಾ ಪುರುಷೋತ್ತಮನ್‌, ಬೈಕ್‌ ಟ್ಯಾಕ್ಸಿ ಚಾಲಕರ ಹಿನ್ನೆಲೆ ಪರಿಶೀಲನೆಗೆ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ? ನಿಮ್ಮ ಬಳಕೆದಾರರ ಸುರಕ್ಷತೆಯು ಮೊದಲ ಆದ್ಯತೆಯಾಗಿರಬೇಕು. ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಸೇವೆಯೊಂದಿಗೆ ನೋಂದಾಯಿಸಿರುವ ಜನರನ್ನು ನಂಬಬಹುದು ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಬೈಕ್‌ ಚಾಲಕ ಈಗಲೂ ನನಗೆ ವಿವಿಧ ಸಂಖ್ಯೆಗಳಿಂದ ಕರೆ ಮಾಡುತ್ತಲೇ ಇದ್ದಾನೆ ಎಂದು ತಿಳಿಸಿದ್ದಾರೆ. ಮಹಿಳೆಯ ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸ್ ಪ್ರತಿಕ್ರಿಯಿಸಿ, ಪ್ರಕರಣದ ಬಗ್ಗೆ ನಾವು ಎಸ್‌.ಜೆ.ಪಾರ್ಕ್‌ ಪೊಲೀಸ್‌ ಠಾಣೆಗೆ ಮಾಹಿತಿ ತಿಳಿಸಿದ್ದೇವೆ. ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ದಯವಿಟ್ಟು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಪೊಲೀಸರಿಗೆ ಕಳುಹಿಸಿ ಎಂದು ತಿಳಿಸಿದೆ.

ಇದನ್ನೂ ಓದಿ: Gruhalakshmi Scheme: ಯಜಮಾನಿಯರೇ.. ಗೃಹಲಕ್ಷ್ಮೀ ಅರ್ಜಿ ಹಾಕಲು SMS ಕಳಿಸಿದ್ರೂ ರಿಪ್ಲೈ ಬರುತ್ತಿಲ್ಲವೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ- ಕುಳಿತಲ್ಲೇ ಪರಿಹಾರ ಕಂಡುಕೊಳ್ಳಿ

Leave A Reply