Employe Scheme: ‘ಗೃಹಲಕ್ಷ್ಮೀ’ ಆಯ್ತು, ಇದೀಗ ಮಹಿಳೆಯರಿಗೆ ಮತ್ತೊಂದು ಹೊಸ ಭಾಗ್ಯ- 2000ರೂ ಜೊತೆ ಈ ಹಣ ಕೂಡ ನಿಮ್ಮಖಾತೆಗೆ!!

Gruha lakshmi :ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ(5 Guarantys) ಪೈಕಿ ಗೃಹಲಕ್ಷ್ಮೀ ಯೋಜನೆಯೂ ಒಂದು. ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ'(Gruha lakshmi) ಯೋಜನೆ ಆರಂಭಿಸಿದೆ. ಮೊನ್ನೆ ತಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಅರ್ಜಿ ಹಾಕಲು ಚಾಲನೆ ನೀಡಿದ್ದಾರೆ. ಈ ಬೆನ್ನಲ್ಲೇ ಇದೀಗ ಮಹಿಳೆಯರಿಗೆ ಮತ್ತೊಂದು ಲಾಟ್ರಿ ಹೊಡೆದಿದೆ.

 

ಹೌದು, ರಾಜ್ಯ ಸರ್ಕಾರ ಮಹಿಳೆಯರ ಏಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕಳೆದ ತಿಂಗಳು ಶಕ್ತಿ ಯೋಜನೆ ಆರಂಬಿಸಿ ಮಹಿಳೆಯರಿಗೆಲ್ಲರಿಗೂ ಉಚಿತ ಪ್ರಯಾಣ(Free bus travel) ಕಲ್ಪಿಸಿದೆ. ಗೃಹಲಕ್ಷ್ಮೀ ಯೋಜನೆಗೂ ಚಾಲನೆ ನೀಡಿದೆ. ಈ ಬೆನ್ನಲ್ಲೇ ಮಹಿಳೆಯರಿಗೆಂದು ಕೆಲವು ವರ್ಷಗಳ ಹಿಂದೆಯೇ ಜಾರಿಗೊಳಿಸಿದ್ದ, ಮಹಿಳೆಯರನ್ನು ಸ್ವ ಉದಯೋಗಿಗಳನ್ನಾಗಿ ಮಾಡಲು ಅನುಷ್ಠಾನಗೊಳಿಸಿದ್ದ ‘ಉದ್ಯೋಗಿನಿ ಯೋಜನೆ'(Udyogini Scheme)ಈಗ ಮತ್ತೆ ಜೀವ ಕಳೆ ಪಡೆದಿದೆ. ಹೀಗಾಗಿ ಈ ಕುರಿತು ಕೆಲವೊಂದಿಷ್ಟು ಮಾಹಿತಿಗಳು ಇಲ್ಲಿವೆ ನೋಡಿ.

 

ಏನು ಈ ಉದ್ಯೋಗಿ ಯೋಜನೆ?

ನಿರುದ್ಯೋಗಿ ಮಹಿಳೆಯರು ಸ್ವಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಯೋಜನೆಯೇ ಉದ್ಯೋಗಿನಿ ಯೋಜನೆಯಾಗಿದೆ. ಇದು 2015-16ರಲ್ಲಿ ಜಾರಿಗೆ ಬಂದಿದೆ. ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗ ಸ್ಥಾಪನೆಗೆ ಸಾಲವನ್ನು ನೀಡಲಾಗುತ್ತದೆ. ಅಧಿಕ ಬಡ್ಡಿದರದ ಸುಳಿಗೆ ಮಹಿಳಾ ಉದ್ಯಮಿಗಳು ಸಿಲುಕುವುದನ್ನು ತಡೆಯುವುದು ಮತ್ತು ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ ಕಡಿಮೆ ಬಡ್ಡಿದರದಲ್ಲಿ ಈ ಯೋಜನೆಯಡಿ ಸಾಲ ನೀಡಲಾಗುತ್ತದೆ

 

ಯಾರು ಅರ್ಹರು?

ಈ ಯೋಜನೆಗೆ ಕರ್ನಾಟಕದಲ್ಲಿ ವಾಸ ಮಾಡುವವರಿಗೆ ಅದರಲ್ಲಿ 18-55 ವರ್ಷ ಮಿತಿ ಇರುವವರಿಗೆ ಮಾತ್ರ ಈ ಒಂದು ಅವಕಾಶ ಇದೆ. ಆದಾಯ ಮಿತಿ ಕೂಡ ಹೇರಲಾಗಿದ್ದು ಪರಿಶಿಷ್ಟ ಜಾತಿ/ವರ್ಗದ ಮಹಿಳೆಯರಿಗೆ ವಾರ್ಷಿಕ ಆದಾಯ 2ಲಕ್ಷ ಮೀರಿರಬಾರದು. ಅದೇ ರೀತಿ ಸಾಮಾನ್ಯ ವರ್ಗದವರಿಗೆ ಈ ಆದಾಯ ಮಿತಿ ವಾರ್ಷಿಕ 1.50ಲಕ್ಷ ರೂ. ಒಳಗೆ ಇರಬೇಕು.

 

ಅರ್ಹತೆಗಳೇನು?

* ಕರ್ನಾಟಕ ರಾಜ್ಯದ ಖಾಯಂ ನಾಗರಿಕ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರು

* 18 ವರ್ಷದಿಂದ 55 ವರ್ಷದೊಳಿಗಿನ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಈ ಸಾಲ ಸೌಲಭ್ಯ ಲಭ್ಯ

* ಎಸ್‌ಸಿ/ ಎಸ್‌ಟಿ ವರ್ಗದವರು ಸಾಲ ಪಡೆಯಲು ವಾರ್ಷಿಕ ಆದಾಯವು 2 ಲಕ್ಷ ರೂಪಾಯಿಗಿಂತ ಕಡಿಮೆಯಾಗಿರಬೇಕು.

* ಸಾಮಾನ್ಯ ವರ್ಗದವರು ಸಾಲ ಪಡೆಯಬೇಕಾದರೆ ವಾರ್ಷಿಕ ಆದಾಯವು 1.5 ಲಕ್ಷ ರೂಪಾಯಿಗಿಂತ ಒಳಪಟ್ಟಿರಬೇಕು.

 

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :

ಬೇಕಾದ ದಾಖಲೆಗಳು ಯಾವುದು?

* ಅರ್ಜಿದಾರರ ಆಧಾರ್ ಕಾರ್ಡ್

* ಅರ್ಜಿದಾರರ ಜನನ ಪ್ರಮಾಣ ಪತ್ರ

* ವಿಳಾಸ ಹಾಗೂ ಆದಾಯ ಪುರಾವೆ (ಆದಾಯ ಪ್ರಮಾಣಪತ್ರ)

* ಬಿಪಿಎಲ್ ಕಾರ್ಡ್ ಅಥವಾ ರೇಷನ್ ಕಾರ್ಡ್ (ಅರ್ಜಿದಾರರು ಬಿಪಿಎಲ್‌ಎಲ್ ಹೊಂದಿರಬೇಕಾಗುತ್ತದೆ)

* ಎಸ್‌ಟಿ/ ಎಸ್‌ಸಿ ಮಹಿಳೆಯರಾಗಿದ್ದರೆ ಜಾತಿ ಪ್ರಮಾಣಪತ್ರ ಕಡ್ಡಾಯ

* ಬ್ಯಾಂಕ್‌ ಪಾಸ್‌ಬುಕ್‌ನ ಪ್ರತಿ

* ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯ ಇತರೆ ದಾಖಲೆಗಳು (ಅರ್ಜಿ ಸಲ್ಲಿಸುವಾಗ ಕೇಳಿದರೆ ಮಾತ್ರ)

 

ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಅರ್ಹ ಮಹಿಳೆಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹಂತ 2: ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆಯಿರಿ

ಹಂತ 3: ಅಗತ್ಯ ಎಲ್ಲ ಮಾಹಿತಿಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ

ಹಂತ 4: ಎಲ್ಲ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಅಟೆಚ್ ಮಾಡಿಕೊಳ್ಳಿ

ಹಂತ 5: ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳ ಪ್ರತಿಯೊಂದಿಗೆ ಅರ್ಜಿಯನ್ನು ಕಚೇರಿಯಲ್ಲಿ ಸಲ್ಲಿಕೆ ಮಾಡಿ.

ಹಂತ 6: ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡುತ್ತಾರೆ.

ಹಂತ 7: ಅರ್ಜಿ ಅನುಮೋದನೆಯಾದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತವು ಜಮೆಯಾಗುತ್ತದೆ.

 

ಯೋಜನೆಯಲ್ಲಿ ಎಷ್ಟು ಸಾಲ ನೀಡಲಾಗುತ್ತದೆ?

* ಗರಿಷ್ಠವಾಗಿ 3 ಲಕ್ಷ ರೂಪಾಯಿ ಸಾಲವನ್ನು ಮಹಿಳೆಯರು ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಬ್ಯಾಂಕ್‌ನಿಂದ ಪಡೆಯಲು ಸಾಧ್ಯವಾಗುತ್ತದೆ.

* ವಿಧವೆ, ಅಂಗವೈಕಲ್ಯ ಹೊಂದಿರುವ, ಧಮನಿತ ವರ್ಗದ ಮಹಿಳೆಯರಿಗೆ ಶೇಕಡ 30ರಷ್ಟು ಅಥವಾ ಗರಿಷ್ಠ 90,000 ರೂಪಾಯಿ ಸಬ್ಸಿಡಿ ಪಡೆಯಬಹುದು.

* ಪರಿಶಿಷ್ಠ ಪಂಗಡ/ ಪರಿಶಿಷ್ಠ ಜಾತಿಯ ಮಹಿಳೆಯರಿಗೆ ಶೇಕಡ 50ರಷ್ಟು ಅಥವಾ ಗರಿಷ್ಠ 1,50,000 ರೂಪಾಯಿ ಸಬ್ಸಿಡಿ ಪಡೆಯಬಹುದು.

* ಸಾಲ ಮರುಪಾವತಿ ಅವಧಿಯು ವ್ಯತ್ಯಯವಾಗುತ್ತದೆ.

 

ಸಬ್ಸಿಡಿ ಇದೆ:

ಈ ಯೋಜನೆಯ ಅಡಿಯಲ್ಲಿ ವಿಧವೆಯರಿಗೆ ಹಾಗೂ ಅಂಗವಿಕಲ ಮಹಿಳೆಯರಿಗೆ ಸಬ್ಸಿಡಿ ಸಹ ವಿತರಿಸಲಾಗುತ್ತಿದೆ. ಉದ್ಯೋಗಿ ಯೋಜನೆಯ ಮೂಲಕ 30%ದಂತೆ 90ಸಾವಿರದಷ್ಟು ಹಣವನ್ನು ಸಬ್ಸಿಡಿ ಮೂಲಕ ಪಡೆಯಬಹುದಾಗಿದೆ. ಅದೇ ರೀತಿ ಸಮಾಜದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮಹಿಳೆಯರಿಗೆ 50%ದಂತೆ ವಾರ್ಷಿಕ 1.50ಲಕ್ಷದ ವರೆಗೆ ಸಬ್ಸಿಡಿ ದೊರೆಯಲಿದೆ. ಉಳಿದಂತೆ ಸಾಮಾನ್ಯ ವರ್ಗದ ಮಹಿಳೆಯರಿಗೆ ಗರಿಷ್ಠ 3ಲಕ್ಷದವರೆಗೆ ಅತೀ ಕಡಿಮೆ ಬಡ್ಡಿಗೆ ಸಾಲ ನೀಡಲಾಗುತ್ತಿದ್ದು ಮರು ಪಾವತಿಗೂ ಸಾಕಷ್ಟು ಸಮಯಾವಕಾಶ ನೀಡಲಾಗುತ್ತದೆ.

ಇದನ್ನೂ ಓದಿ : ಗಿನ್ನಿಸ್ ದಾಖಲೆ ನಿರ್ಮಿಸಲು 7 ದಿನ ಕಣ್ಣೀರ ಕೋಡಿ ಹರಿಸಿದ ವ್ಯಕ್ತಿ !ಮುಂದಾಗಿದ್ದು ಊಹಿಸಲು ಅಸಾಧ್ಯ !

Leave A Reply

Your email address will not be published.