ಮೂತ್ರ ವಿಸರ್ಜನೆಗೆಂದು ವಂದೇ ಭಾರತ್ ರೈಲು ಹತ್ತಿದ, ನಂತರ 5770 ರೂ.ಪೀಕಿದ ಸ್ವಾರಸ್ಯಕರ ವಿಷ್ಯ !
Vande Bharat Express Train :ತುಂಬಿಕೊಂಡ ಹೊಟ್ಟೆ ಖಾಲಿ ಮಾಡಲೆಂದು ಟಾಯ್ಲೆಟ್ (Toilet) ಬಳಸಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು(Vande Bharat Express Train) ಹತ್ತಿದ ವ್ಯಕ್ತಿ 6,000 ರೂಪಾಯಿ ಪೀಕಿದ ಪ್ರಸಂಗವೊಂದು ವರದಿಯಾಗಿದೆ. ಒಂದು ಸಾರಿ ಮೂತ್ರ ಮಾಡಲು ಬರೋಬ್ಬರಿ 6,000 ರೂಪಾಯಿ ಕಟ್ಟುವಂತಾದ ಸ್ವಾರಸ್ಯಕರ ಪ್ರಸಂಗ ಇಂಡಿಯನ್ ರೈಲ್ವೆನಲ್ಲಿ ನಡೆದಿದೆ.
ಈ ಘಟನೆಯು ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಅಬ್ದುಲ್ ಖಾದಿರ್ ಎಂಬವರು ತನ್ನ ಕುಟುಂಬದೊಂದಿಗೆ ಭೋಪಾಲ್ (Bhopal) ರೈಲ್ವೆ ಪ್ಲಾಟ್‌ಫಾರ್ಮ್ ನಲ್ಲಿ ನಿಂತಿದ್ದರು. ಅವರಿಗೆ ತಕ್ಷಣ ಮೂತ್ರಕ್ಕೆ ಹೋಗಬೇಕು ಅನ್ನಿಸಿದೆ. ಖಾದಿರ್ ತನ್ನ ಪತ್ನಿ ಹಾಗೂ 8 ವರ್ಷದ ಮಗನೊಂದಿಗೆ ಭೋಪಾಲ್‌ನಿಂದ ಸಿಂಗ್ರೌಲಿಗೆ ಹೋಗಬೇಕಿತ್ತು. ಆದ್ದರಿಂದ ಆತ ಪತ್ನಿ ಹಾಗೂ ಮಗನನ್ನು ನಿಲ್ದಾಣದಲ್ಲೇ ಬಿಟ್ಟು ತಾನು ಮಾತ್ರ ಇಂದೋರ್‌ಗೆ ಹೋಗುವ ರೈಲನ್ನು ಹತ್ತಿ ಶೌಚಾಲಯ ಬಳಸಿದ್ದ. ಮೂತ್ರ ವಿಸರ್ಜನೆಗಾಗಿ ತುರ್ತಾಗಿ ಶೌಚಾಲಯ ಬಳಸುವ ಅನಿವಾರ್ಯತೆ ಎದುರಾದಾಗ ಆತ ಅಲ್ಲೇ ರೈಲ್ವೆ ನಿಲ್ದಾಣದಲ್ಲಿ ಬಂದು ನಿಂತ ನಿಂತಿದ್ದ ವಂದೇ ಭಾರತ್ ರೈಲನ್ನುಹತ್ತಿ ಅಲ್ಲಿಶೌಚಾಲಯದಲ್ಲಿ ಜಲಭಾದೆ ತೀರಿಸಿಕೊಂಡಿದ್ದಾರೆ. ಆದರೆ ಆತ ಶೌಚಾಲಯದಿಂದ ಹೊರಬರುವಷ್ಟರಲ್ಲಿ ರೈಲಿನ ಬಾಗಿಲುಗಳು ಭದ್ರವಾಗಿ ಮುಚ್ಚಿದ್ದು, ಅದಾಗಲೇ ರೈಲು ಚಲಿಸಲು ಪ್ರಾರಂಭವಾಗಿತ್ತು.
ತಕ್ಷಣ ಆತ ರೈಲಿನಿಂದ ಇಳಿಯುವ ಸಲುವಾಗಿ ವಿವಿಧ ಕೋಚ್‌ಗಳಿಗೆ ತೆರಳಿ ಅಲ್ಲಿದ್ದ ಹಲವು ಟಿಕೆಟ್ ಕಲೆಕ್ಟರ್‌ಗಳನ್ನು ವಿಚಾರಿಸಿದ್ದಾನೆ. ಅವರೆಲ್ಲ ರೈಲಿನ ಬಾಗಿಲನ್ನು ಚಾಲಕ ಮಾತ್ರವೇ ತೆರೆಯಲು ಸಾಧ್ಯ ಎಂದಿದ್ದಾರೆ. ಅಷ್ಟರಲ್ಲಾಗಲೇ ರೈಲು ಹಲವು ಕಿಲೋಮೀಟರು ದೂರ ಸಾಗಿತ್ತು. ಆದರೂ ಖಾದಿರ್ ಅವರು ಚಾಲಕನೆಡೆಗೆ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯ ಆಗೇ ಇಲ್ಲ. ಹಾಗಾಗಲಿ ಆತ ಕಡ್ಡಾಯವಾಗಿ ಮುಂದಿನ ಸ್ಟಾಪ್ ತನಕ ಪ್ರಯಾಣಿಸಲೇ ಬೇಕಾಯಿತು. ಭೋಪಾಲ್ ನಿಂದ ಉಜ್ಜಯಿನಿಯಲ್ಲಿ ರೈಲು ನಿಲ್ಲುವ ತನಕ 220 ಕಿಲೋ ಮೀಟರ್ ಆತ ಪ್ರಯಾಣ ಬೆಳೆಸಿದ್ದ.
ಹೀಗೆ ಟಿಕೆಟ್ ರಹಿತವಾಗಿ ರೈಲು ಹತ್ತಿದ್ದಕ್ಕಾಗಿ ಆತ 1,020 ರೂ. ದಂಡವನ್ನು ಪಾವತಿಸಬೇಕಾಗಿ ಬಂತು. ಉಜ್ಜಯಿನಿಯಲ್ಲಿ ರೈಲು ನಿಂತ ಬಳಿಕ ಆತ ರೈಲಿನಿಂದ ಕೆಳಗಿಳಿದು ಭೋಪಾಲ್‌ಗೆ ವಾಪಸ್ ತೆರಳಲು ಬಸ್ ಟಿಕೆಟ್‌ಗಾಗಿ ಮತ್ತೆ 750 ರೂ. ಖರ್ಚು ಮಾಡಬೇಕಾಯಿತು. ಒಟ್ಟು 1770 ರೂಪಾಯಿ ಖರ್ಚು ಮಾಡಬೇಕಾಗಿ ಬಂದಿತ್ತು. ಅದೇ ಇತ್ತ ಖಾದಿರ್ ಪತ್ನಿ ಹಾಗೂ ಮಗ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಸಿಂಗ್ರೌಲಿ ತೆರಳುವ ರೈಲನ್ನು ಹತ್ತದೇ ಅದಕ್ಕಾಗಿ ಖರ್ಚು ಮಾಡಿದ್ದ 4,000 ರೂ. ಟಿಕೆಟ್ ಅನ್ನು ಕೂಡಾ ವ್ಯರ್ಥ ಮಾಡಿಕೊಂಡಿದ್ದಾರೆ. ಈ ವ್ಯಕ್ತಿ ಶೌಚಾಲಯ ಹತ್ತಿ ಬಳಸಲೆಂದು ವಂದೇ ಭಾರತ್ ರೈಲು ಹತ್ತಿ ಮಾಡಿಕೊಂಡ ಯಡವಟ್ಟಿಗೆ 5770 ರೂ.ಪೀಕಲು ಕಾರಣವಾಗಿ ಇದೀಗ ಅದೊಂದು ವೈರಲ್ ಆಗುತ್ತಿರುವ ಸುದ್ದಿಯಾಗಿದೆ.